ಗೃಹಲಕ್ಷ್ಮೀ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ಸಜ್ಜು
‘ಗೃಹಲಕ್ಷ್ಮೀ’ ಕುರಿತ ಸಾಂಗ್ಗೆ ಸಾಧು ಮ್ಯೂಸಿಕ್ ಕಂಪೋಸ್
ಸಾಧು ಕೋಕಿಲ್ ಆಸೆಯನ್ನು ಕಾಂಗ್ರೆಸ್ ಈಡೇರಿಸುತ್ತಾ?
ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯದ ಬಳಿಕ ಗೃಹಲಕ್ಷ್ಮೀ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ. ಅರಮನೆ ನಗರಿ ಮೈಸೂರಿನಲ್ಲಿ ಮನೆ ಯಜಮಾನಿಯರ ಮಹತ್ವದ ಯೋಜನೆಗೆ ಚಾಲನೆ ಸಿಗಲಿದೆ. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗೃಹಲಕ್ಷ್ಮೀ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವ ನಟ ಸಾಧು ಕೋಕಿಲ, ಗೃಹಲಕ್ಷ್ಮೀ ಯೋಜನೆ ಕುರಿತ ಸಾಹಿತ್ಯ ಒಂದಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಥೀಮ್ ಸಾಂಗ್ ಕೂಡ ರೆಡಿಯಾಗಿದೆ. ಸಂಗೀತ ನಿರ್ದೇಶಕ, ಕಲಾವಿದ ಸಾಧು ಕೋಕಿಲಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೂರು ನಿಮಿಷಗಳ ಥೀಮ್ ಸಾಂಗ್ ಇದಾಗಿದ್ದು, ಉದ್ಘಾಟನೆ ಸಂದರ್ಭದಲ್ಲಿ ಮೊಳಗಲಿದೆ.
ನ್ಯೂಸ್ಫಸ್ಟ್ ಜೊತೆ ಮಾತನಾಡಿರುವ ಸಾಧು ಕೋಕಿಲ್, ನಾನು ಎಂಎಲ್ಸಿ ಸ್ಥಾನದ ಆಕಾಂಕ್ಷಿ. ನಾನು ಬಡತನದಿಂದ ಬೆಳೆದವನು. ಬಡವರಿಗೆ ಒಳ್ಳೆಯದು ಮಾಡಲು ಅವಕಾಶ ಕೊಡಿ ಎಂದು ಕೇಳಿದ್ದೇನೆ. ಅಧಿಕಾರ ಸಿಕ್ಕರೆ ಸಂತೋಷ. ಕಲಾವಿದರ ಕೋಟಾದಡಿ ಎಂಎಲ್ಸಿ ಸ್ಥಾನ ಕೇಳಿರುವೆ.
ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಸಿಎಂ ಸಿದ್ದರಾಮಯ್ಯ ನನ್ನನ್ನು ಗುರ್ತಿಸ್ತಾರೆ. ನನಗೆ ಎಂಎಲ್ ಸಿ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸ ಇದೆ. ಹಂತ-ಹಂತವಾಗಿ ನಮಗೆ ಸ್ಥಾನ ಒಲಿಯಬಹದು. ಅಲ್ಲಿಯವರೆಗೂ ನಾನು ಕಾರ್ಯಕರ್ತನಾಗಿ ದುಡಿಯುತ್ತೀನಿ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ