'ನಂದಿನಿ' ರಾಯಭಾರಿಯಾದ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್
ಸದ್ಯದಲ್ಲೇ ನಂದಿನಿ ಜಾಹೀರಾತು ಶೂಟಿಂಗ್‌ನಲ್ಲಿ ಹ್ಯಾಟ್ರಿಕ್ ಹೀರೋ ಭಾಗಿ
ನಮ್ಮ ರಾಜ್ಯದ ರೈತರಿಗೋಸ್ಕರ ನಾನು ಯಾವಾಗಲೂ ಜೊತೆಯಲ್ಲಿರುತ್ತೇನೆ
ಬೆಂಗಳೂರು: ನಮ್ಮ ಹೆಮ್ಮೆ ನಂದಿನಿಯ ಪ್ರಚಾರ ರಾಯಭಾರಿಯಾಗಲು ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಒಪ್ಪಿಕೊಂಡಿದ್ದಾರೆ. ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರೇ ಖುದ್ದು ಶಿವರಾಜ್‌ಕುಮಾರ್ ಅವರನ್ನ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತಾಡಿದ ಶಿವರಾಜ್ ಕುಮಾರ್ ಅವರು, ನಂದಿನಿ ಹಾಲಿನ ರಾಯಭಾರಿ ಆಗಿದ್ದು ತುಂಬಾ ಖುಷಿ ಆಗಿದೆ. ಸರ್ಕಾರಕ್ಕೆ ನಾವು ಧನ್ಯವಾದ ಹೇಳಬೇಕು. ಇದು ನಮಗೆ ಹೆಮ್ಮೆ. ಏಕೆಂದರೆ ಇದು ರೈತರಿಗೆ ಸಂಬಂಧಿಸಿದ ವಿಚಾರ. ನಂದಿನಿ ಅನ್ನೋ ಭರವಸೆಯನ್ನ ಬೆಳೆಸಬೇಕು. ನಂದಿನಿ ಭಾರತದ ಹೆಮ್ಮೆ ಅದನ್ನ ಉಳಿಸಿಕೊಳ್ಳಬೇಕು. ಸದ್ಯದಲ್ಲೇ ನಂದಿನಿ ಜಾಹೀರಾತು ಶೂಟಿಂಗ್ ಆಗುತ್ತೆ. ತಿರುಪತಿಯಲ್ಲಿ ನಂದಿನಿ ತುಪ್ಪ ಪೂರೈಕೆ ನಿಲ್ಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಶಿವಣ್ಣ, ನಂದಿನಿ ಬೇಡಿಕೆ ಯಾವತ್ತೂ ಕಡಿಮೆ ಆಗಲ್ಲ. ನಾವು ಪ್ರತಿ ದಿನ ನಂದಿನಿ ಪ್ರಾಡಕ್ಟ್ ಅನ್ನೇ ಬಳಸುತ್ತೇವೆ. ನಂದಿನಿ ಬ್ರ್ಯಾಂಡ್ ಅಂಬಾಸಿಡರ್ ಆಗಲು ಯಾವುದೇ ಸಂಭಾವನೆ ಪಡೆಯದ್ದಕ್ಕೆ ಶಿವರಾಜ್ ಕುಮಾರ್ ಅವರು ಇದು ನಮ್ಮ ಸರ್ಕಾರದ್ದು, ನಮ್ಮ ಪ್ರಾಡಕ್ಟ್. ನಮ್ಮ ರೈತರಿಗೋಸ್ಕರ ಯಾವಾಗಲೂ ಜೊತೆಯಲ್ಲಿರುತ್ತೇನೆ. ಇದು ನಮ್ಮ ತ್ಯಾಗ ಅಲ್ಲ ನಮ್ಮ ಕರ್ತವ್ಯ ಎಂದಿದ್ದಾರೆ.
1996ರಲ್ಲಿ ನಂದಿನಿ ಸಂಸ್ಥೆಯ ಮನವಿಗೆ ವರನಟ ಡಾ.ರಾಜ್ ಕುಮಾರ್ ಅವರು ಸ್ಪಂದಿಸಿದ್ದರು ಜೊತೆಗೆ ನಂದಿನಿ ರಾಯಭಾರಿಯಾಗಲು ಒಪ್ಪಿಕೊಂಡಿದ್ದರು. ರೈತ ಪರ ಕಾಳಜಿಯಿಂದ ಒಂದು ರೂಪಾಯಿಯನ್ನು ತೆಗೆದುಕೊಳ್ಳದೇ ನಂದಿನಿ ಸಂಸ್ಥೆಯ ಜಾಹೀರಾತಿನಲ್ಲಿ ಭಾಗಿಯಾಗಿದ್ದರು. 2009ರಲ್ಲಿ ತಂದೆಯ ದಾರಿಯನ್ನೇ ಮುಂದುವರಿಸಿದ ಪುನೀತ್ ರಾಜ್‌ಕುಮಾರ್, ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ಜಾಹೀರಾತು ಮಾಡಿದರು. ಇದೀಗ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಬಳಿಕ ಶಿವರಾಜ್‌ಕುಮಾರ್ ಅವರು ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ