Advertisment

ಕನ್ನಡಿಗರಿಗೆ ಕುಡಿಯಲು ನೀರಿಲ್ಲ, ನಮಗೆ ಎಲ್ಲಿಂದ ಕೊಡ್ತಾರೆ- ತಮಿಳು ನಟನ ಹಳೇ ವಿಡಿಯೋ ವೈರಲ್​​!

author-image
Ganesh Nachikethu
Updated On
ಕನ್ನಡಿಗರಿಗೆ ಕುಡಿಯಲು ನೀರಿಲ್ಲ, ನಮಗೆ ಎಲ್ಲಿಂದ ಕೊಡ್ತಾರೆ- ತಮಿಳು ನಟನ ಹಳೇ ವಿಡಿಯೋ ವೈರಲ್​​!
Advertisment
  • ಇಡೀ ರಾಜ್ಯಾದ್ಯಂತ ತಾರಕಕ್ಕೇರಿದ ಕಾವೇರಿ ಹೋರಾಟ
  • ಕರ್ನಾಟಕದ ಪರ ತಮಿಳು ನಟ ಸಿಂಬು ಫುಲ್​ ಬ್ಯಾಟಿಂಗ್​​
  • ತಮಿಳು ಸ್ಟಾರ್​ ಹೀರೋ ಸಿಂಬು ಹಳೇ ವಿಡಿಯೋ ವೈರಲ್​​

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿವಾದ ಇಂದಿನದ್ದಲ್ಲ, ಬದಲಿಗೆ ಹಲವು ದಶಕಗಳದ್ದು. ಇಷ್ಟು ವರ್ಷಗಳಾದ್ರೂ ಈ ಜಲ ವಿವಾದ ಇನ್ನೂ ಜೀವಂತವಾಗಿಯೇ ಇದೆ. ಈ ಸಮಸ್ಯೆಯನ್ನು ಬಗೆಹರಿಸೋ ಪ್ರಯತ್ನ ಯಾರು ಮಾಡುತ್ತಿಲ್ಲ. ಇದರ ಪರಿಣಾಮ ಮತ್ತೆ ಕರ್ನಾಟಕದಲ್ಲಿ ಕಾವೇರಿ ಹೋರಾಟದ ಕಿಚ್ಚು ಜೋರಾಗಿದೆ.

Advertisment

ಇದರ ಭಾಗವಾಗಿ ಬೆಂಗಳೂರು ಬಂದ್​ ಬೆನ್ನಲ್ಲೀಗ ಕರ್ನಾಟಕ ಬಂದ್​ ಕೂಡ ಮಾಡಲಾಗಿದೆ. ಮುಂದಿನ ತಿಂಗಳು 5ನೇ ತಾರೀಕು ದೊಡ್ಡ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. ಹೀಗಿರುವಾಗಲೇ ಕರ್ನಾಟಕದ ಪರ ಮಾತಾಡಿರೋ ತಮಿಳು ನಟ ಸಿಂಬು ಹಳೇ ವಿಡಿಯೋ ಈಗ ವೈರಲ್​ ಆಗಿದೆ.


">September 26, 2023

ಸಿಂಬು ಹೇಳಿದ್ದೇನು..?

'ಕನ್ನಡಿಗರಿಗೇ ಅಲ್ಲಿ ಕುಡಿಯೋಕೆ ಕಾವೇರಿ ನೀರಿಲ್ಲ, ಇನ್ನೂ ನಮಗೆ ಎಲ್ಲಿಂದ ಕೊಡುತ್ತಾರೆ. ಪ್ರೀತಿಯಿಂದ ಈ ಜಗತ್ತಿನಲ್ಲಿ ಏನುಬೇಕಾದ್ರೂ ಗೆಲ್ಲಬಹುದು. ಕರ್ನಾಟಕದ ಜನ ತಮಿಳುನಾಡಿಗೆ ನೀರು ಕೊಡಲ್ಲ ಎಂದು ಹೇಳಿದ್ದಾರಾ? ನಾನು ಕರ್ನಾಟಕ ತಾಯಿ ಹೆತ್ತ ಮಗ ಅಲ್ಲ. ಆದ್ರೂ ನಿಮ್ಮ ದಣಿವಾರಿದ ನಂತರ ಉಳಿದ ನೀರು ನಮಗೆ ಕೊಡಿ ಎಂದು ಕೇಳುತ್ತೇನೆ ಎಂದಿದ್ದರು ಸಿಂಬು.

Advertisment

ಇನ್ನು, ತಮಿಳು ಮಾಧ್ಯಮಗಳ ಎದುರು ಆಕ್ರೋಶ ವ್ಯಕ್ತಪಡಿಸಿದ್ದ ಸಿಂಬು ಹಳೇ ವಿಡಿಯೋ ಈಗ ವೈರಲ್​ ಆಗಿದೆ. ಕರ್ನಾಟಕದ ಪರ ಹೇಳಿಕೆ ನೀಡಿರೋ ಸಿಂಬು ಪರ-ವಿರೋಧ ಚರ್ಚೆಗಳು ಸೋಷಿಯಲ್​ ಮೀಡಿಯಾದಲ್ಲಿ ನಡೆಯುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment