ಟಾಲಿವುಡ್ ಖ್ಯಾತ ನಟ ಸೂರ್ಯನ ಬರ್ತ್ಡೇ ದಿನದಂದು ಅವಘಡ
ನಟನ ಹುಟ್ಟುಹಬ್ಬದಂದೇ ಪ್ರಾಣ ತೆತ್ತ ಇಬ್ಬರು ಅಭಿಮಾನಿಗಳು
ಸಾವನ್ನಪ್ಪಿರುವ ಇಬ್ಬರು ಪದವಿ ಓದುತ್ತಿದ್ದ ವಿದ್ಯಾರ್ಥಿಗಳು
ನಿನ್ನೆ ಟಾಲಿವುಡ್ ಖ್ಯಾತ ನಟ ಸೂರ್ಯ ಅವರ ಹುಟ್ಟುಹಬ್ಬ. ಅಂದಹಾಗೆಯೇ ಸಿನಿ ತಾರೆಯರ ಹುಟ್ಟುಹಬ್ಬವೆಂದರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ನೆಚ್ಚಿನ ನಟನ ಬರ್ತ್ಡೇಗೆ ಫ್ಯಾನ್ಸ್ ಎನಾದರೊಂದು ಮಾಡುತ್ತಿರುತ್ತಾರೆ. ಅದರಂತೆ ಅಭಿಮಾನಿಗಳಿಬ್ಬರು ಸೂರ್ಯನ ಹುಟ್ಟುಹಬ್ಬದ ಸಲುವಾಗಿ ಬ್ಯಾನರ್ ಅಳವಡಿಸುವಾಗ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.
ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಮೋಪುಲವಾರಿಪಾಲೆಂಬ ಗ್ರಾಮದ ನರಸರಾವ್ಪೇಟೆ ಮಂಡಲದ ನಕ್ಕಾ ವೆಂಕಟೇಶ್ ಮತ್ತು ಪೋಲೂರಿ ಸಾಯಿ ಎಂಬವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ಪೊಲೀಸರ ಪ್ರಕಾರ ನಟ ಸೂರ್ಯ ಬರ್ತ್ಡೇ ಅಂಗವಾಗಿ ಬ್ಯಾನರ್ ಅಳವಡಿಸುವಾಗ ಕರೆಂಟ್ ಶಾಕ್ ಹೊಡೆದಿದೆ. ಕಬ್ಬಿಣದ ರಾಡ್ ತಂತಿಗೆ ತಗುಲಿದಾಗ ಶಾಕ್ ಹೊಡೆದಿದೆ. ಇದರಿಂದಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎಂದು ಹೇಳಿದ್ದಾರೆ.
ಇನ್ನು ವೆಂಕಟೇಶ್ ಮತ್ತು ಸಾಯಿ ಇಬ್ಬರು ಡಿಗ್ರಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ