newsfirstkannada.com

‘ಅನ್ಯಾಯದ ಅನುಮಾನಕ್ಕೆ ಬುಸುಗುಟ್ಟಿದ ಪಡೆ’- ಕೋರ್ಟ್‌ ತಡೆ ಕೊಟ್ಟ ಮೇಲೆ ಬದಲಾಯ್ತು ‘ಬುದ್ಧಿವಂತ’ನ ನಡೆ

Share :

Published August 14, 2023 at 8:32pm

Update August 14, 2023 at 8:35pm

    ‘ಬುದ್ಧಿವಂತ’ ಮಾಡಿದ ಮತ್ತೊಂದು ಟ್ವೀಟ್‌ನಲ್ಲಿ ನಿಗೂಢ ನಡೆ

    ‘ಅನ್ಯಾಯದ ಅನುಮಾನಕ್ಕೆ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ’

    FIR​ಗೆ ಹೈಕೋರ್ಟ್‌ ತಡೆಯಾಜ್ಞೆ ಕೊಟ್ರೂ ನಾಪತ್ತೆ ಯಾಕೆ?

ಬೆಂಗಳೂರು: ರಿಯಲ್ ಸ್ಟಾರ್, ನಟ ಉಪೇಂದ್ರ ಫೇಸ್​ಬುಕ್​ ​ಲೈವ್​ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು ತೀವ್ರ ಸಂಚಲನ ಸೃಷ್ಟಿಸಿದೆ. ಉಪೇಂದ್ರ ಅವರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಉಪೇಂದ್ರ ಅವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದ್ರೆ ಫೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿರುವ ಉಪೇಂದ್ರ ಅವರು ತಮ್ಮ ಟ್ವೀಟರ್​ ಖಾತೆಯಲ್ಲಿ ಮತ್ತೊಂದು ಪೋಸ್ಟ್​ ಹಾಕಿದ್ದಾರೆ.

‘‘ಅನ್ಯಾಯದ ಅನುಮಾನಕ್ಕೆ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ. ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ. ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹೃದಯಗಳು ಹಿಡಿದ ಪ್ರೀತಿಯ ಕೊಡೆ. ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ. ನನಗೆ ಕೊಡೆ ಧನ್ಯವಾದಗಳು’’ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ: “ಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ”- ನಟ ಉಪೇಂದ್ರ

ನಟ ಉಪೇಂದ್ರ ಅವರ ಸದಾಶಿವನಗರದ ನಿವಾಸದ ಬಳಿ ಅಂಬೇಡ್ಕರ್ ಸಂಘದ ಕಾರ್ಯಕರ್ತರು ದೌಡಾಯಿಸಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನೆ ನಿರತ ಕಾರ್ಯಕರ್ತರನ್ನು ಹತೋಟಿಗೆ ತಂದಿದ್ದಾರೆ. ಈ ಕುರಿತು ಮಾತಾಡಿದ ಅಂಬೇಡ್ಕರ್ ಸಂಘದ ಮುನಿಮಾರಪ್ಪ, ಉಪೇಂದ್ರ ಅವರು ಎಲ್ಲರನ್ನೂ ಸಮಾನತೆಯಿಂದ ನೋಡಬೇಕಿದೆ. ಒಂದು ಸಮುದಾಯವನ್ನು ಗುರಿ ಮಾಡೋದು ತಪ್ಪು. ಅಮಾನುಷದ ಮಾತು, ಸಂವಿಧಾನದ ವಿರೋಧದ ಮಾತು. ಈ ಹಿಂದೆಯೂ ಅವರು ಜಾತಿ ಬಗ್ಗೆ ಮಾತನಾಡಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವ್ಯಂಗ್ಯ ಮಾಡ್ತಾರೆ. ಸಿನಿಮಾಗಳನ್ನ ನೋಡಿ ಯಾಮಾರಿಸ್ತಾರೆ. ನಮ್ಮ ಕೆಳಜಾತಿಗಳ ಬಗ್ಗೆ ಮಾತನಾಡೋದು ಎಷ್ಟು ಸರಿ. ಜಾತಿ ವ್ಯವಸ್ಥೆ ಇನ್ನೂ ಜೀವಂತವಿದೆ ಎಂದು ಅವರು ತೋರಿಸ್ತಿದ್ದಾರೆ. ನಾವು ಹೋರಾಟ ಮಾಡುತ್ತೇವೆ ಇಲ್ಲಿಗೆ ಬಿಡುವುದಿಲ್ಲ.

ಸದ್ಯ ನಟ ಉಪೇಂದ್ರಗೆ ಬಿಗ್ ರಿಲೀಫ್ ಸಿಕ್ಕಿದೆ. ಉಪೇಂದ್ರ ವಿರುದ್ಧದ ಎಫ್ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಚೆನ್ನಮ್ಮನಕೆರೆ ಪೊಲೀಸ್ ಠಾಣೆಯ FIRಗೆ ತಡೆಯಾಜ್ಞೆ ಕೊಟ್ಟು ಹೈಕೋರ್ಟ್ ಆದೇಶಿಸಿದೆ. ಉಪೇಂದ್ರ ವಿರುದ್ಧ ಒಟ್ಟು 4 ಎಫ್‌ಐಆರ್ ದಾಖಲಾಗಿದ್ದು, ಕೇವಲ ಒಂದು ಎಫ್ಐಆರ್​ಗೆ ಮಾತ್ರ ಹೈಕೋರ್ಟ್ ತಡೆಯಾಜ್ಞೆ ಹೊರಡಿಸಿದೆ. ಹೀಗಾಗಿ ಉಳಿದ ಎಫ್ಐಆರ್ ಸಹ ರದ್ದಾಗುವ ಸಾಧ್ಯತೆ ಇದೆ. ಆದರೆ ಅಷ್ಟರಲ್ಲಿ ಪೊಲೀಸರು ಉಪೇಂದ್ರ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅನ್ಯಾಯದ ಅನುಮಾನಕ್ಕೆ ಬುಸುಗುಟ್ಟಿದ ಪಡೆ’- ಕೋರ್ಟ್‌ ತಡೆ ಕೊಟ್ಟ ಮೇಲೆ ಬದಲಾಯ್ತು ‘ಬುದ್ಧಿವಂತ’ನ ನಡೆ

https://newsfirstlive.com/wp-content/uploads/2023/08/upendra-4-1.jpg

Load More