ಹೈಕೋರ್ಟ್ ಮೆಟ್ಟಿಲೇರಿದ ರಿಯಲ್ ಸ್ಟಾರ್ ಉಪೇಂದ್ರ
ತನ್ನ ವಿರುದ್ಧ ಎಫ್ಐಆರ್ ರದ್ದು ಕೋರಿ ಉಪೇಂದ್ರ ಅರ್ಜಿ
ಅಟ್ರಾಸಿಟಿ ತನಿಖೆಗೆ ಮಧ್ಯಂತರ ತಡೆಯಾಜ್ಞೆಗಾಗಿ ಮನವಿ
ಬೆಂಗಳೂರು: ಎಸ್‌ಸಿ, ಎಸ್‌ಟಿ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದ ಬಳಸಿದ ಆರೋಪದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಬಂಧನದ ಭೀತಿಯಲ್ಲಿರೋ ಉಪೇಂದ್ರ ಅವರು ಸದ್ಯ ಎಸ್ಕೇಪ್ ಆಗಿದ್ದಾರೆ. ನೋಟಿಸ್ ನೀಡಿರೋ ಪೊಲೀಸರು ಉಪೇಂದ್ರ ಅವರನ್ನು ಬಂಧಿಸೋ ಸಾಧ್ಯತೆ ಇದೆ. ಪೊಲೀಸರ ಹುಡುಕಾಟದ ಮಧ್ಯೆ ನಟ ಉಪೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ವಿರುದ್ಧ ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅಟ್ರಾಸಿಟಿ ಕೇಸ್‌ನ ತನಿಖೆಗೆ ಮಧ್ಯಂತರ ತಡೆಯಾಜ್ಞೆಗೆ ಮನವಿ ಮಾಡಲಾಗಿದೆ.
ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಉಪೇಂದ್ರ ಅವರು ಕನ್ನಡ ಗಾದೆಯನ್ನು ಬಳಸಿದ್ದಕ್ಕಾಗಿ ಅರ್ಜಿದಾರರ ವಿರುದ್ಧ ಸುಳ್ಳು ದೂರು ನೀಡಲಾಗಿದೆ. ಕ್ಷುಲ್ಲಕ ಮತ್ತು ಪ್ರಚಾರಕ್ಕಾಗಿ ದೂರನ್ನು ದಾಖಲಿಸಲಾಗಿದೆ. ಅರ್ಜಿದಾರರು ದಲಿತರು ಅಥವಾ ಎಸ್‌ಸಿ ಮತ್ತು ಎಸ್‌ಟಿಗೆ ಸೇರಿದ ವ್ಯಕ್ತಿಗಳನ್ನು ಅವಮಾನಿಸಿಲ್ಲ. ಪ್ರತಿವಾದಿಗಳಿಂದ ಅರ್ಜಿದಾರರಿಗೆ ಕಿರುಕುಳ ನೀಡುವ ಎಲ್ಲಾ ಸಾಧ್ಯತೆಗಳಿವೆ. ಅರ್ಜಿದಾರರು ಯಾವುದೇ ವ್ಯಕ್ತಿಯನ್ನು ಜಾತಿ, ಮತ, ಸಮುದಾಯ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡಿಲ್ಲ. ಉಪೇಂದ್ರ ಯಾವಾಗಲೂ ಜನರನ್ನು ಗೌರವಿಸುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: ಬಂಧನ ಭೀತಿಯಲ್ಲಿ ‘ಬುದ್ಧಿವಂತ’ ನಾಪತ್ತೆ.. ನಟ ಉಪೇಂದ್ರಗೆ ಜಾಮೀನು ಸಿಗುತ್ತಾ? ದಾಖಲಾಗಿರೋ ಕೇಸ್‌ಗಳೇನು?
ನಟ ಉಪೇಂದ್ರ ಅವರು ಸಮಾಜ/ಸಮುದಾಯದ ಎಲ್ಲಾ ವರ್ಗಗಳ ನಡುವೆ ಸೌಹಾರ್ದತೆಯನ್ನು ಕಾಪಾಡಿಕೊಂಡಿದ್ದಾರೆ. ಅಟ್ರಾಸಿಟಿ ದೂರು ದುರುದ್ದೇಶಕ ಪ್ರೇರಿತವಾಗಿದೆ. ಹೀಗಾಗಿ ತಮ್ಮ ವಿರುದ್ಧ ಎಫ್‌ಐಆರ್ & ಎಸಿಪಿ ಕೊಟ್ಟ ದೂರು ರದ್ದಿಗೆ ನಟ ಉಪೇಂದ್ರ ಅವರು ಮನವಿ ಮಾಡಿದ್ದಾರೆ. ಉಪೇಂದ್ರ ಅವರ ಅರ್ಜಿಯನ್ನು ಹೈಕೋರ್ಟ್ ಇನ್ನೂ ಪುರಸ್ಕರಿಸಿಲ್ಲ. ಒಂದು ವೇಳೆ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದರೆ ಉಪೇಂದ್ರ ಅವರನ್ನು ಬಂಧಿಸೋ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ