ನೆಗೆಟಿವ್ ಕಮೆಂಟ್ ಶುರುವಾಗುತ್ತಿದ್ದಂತೆ ಪೋಸ್ಟ್ ಶೇರ್ ಮಾಡಿದ ಯುವತಿ!
ಸಾಮಾಜಿಕ ಜಾಲತಾಣ ಬಳಕೆದಾರರ ಬಾಯಲ್ಲಿ ಈ ಇಬ್ಬರ ಬಗ್ಗೆ ಮಾತುಕತೆ
ಸಖತ್ ಹಲ್ಚಲ್ ಎಬ್ಬಿಸಿದ ವರುಣ್ ಆರಾಧ್ಯ, ಮಾಜಿ ಪ್ರೇಯಸಿ ಸ್ಟೋರಿ
ವರುಣ್ ಆರಾಧ್ಯ ಮತ್ತು ಇವರ ಮಾಜಿ ಪ್ರೇಯಸಿ ರೀಲ್ಸ್ ಹಾಗೂ ರಿಯಲ್ ಸ್ಟೋರಿ ಭಾರೀ ವೈರಲ್ ಆಗ್ತಿದೆ. ಈ ಸ್ಟೋರಿ ಪ್ರತಿಯೊಬ್ಬರನ್ನೂ ತಲುಪಿದೆ ನಿಜ. ಹಾಗಂತ ಈ ಸ್ಟೋರಿಯನ್ನ ಮಾಧ್ಯಮಗಳೇ ಕ್ರಿಯೆಟ್ ಮಾಡಿರೋದ್ದಲ್ಲ. ಮಾಜಿ ಪ್ರೇಯಸಿ ಕಂಪ್ಲೆಂಟ್ ಕೊಟ್ಟ ನಂತರವಷ್ಟೇ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು.
ವರುಣ್ ಆರಾಧ್ಯರ ಮಾಜಿ ಪ್ರೇಯಸಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿ, ನಟನ ವಿರುದ್ಧ ತುಂಬಾ ಗಂಭೀರವಾದ ಆರೋಪಗಳನ್ನ ಮಾಡಿ, ದೂರು ನೀಡಿದ್ದರು. ಈ ದೂರು ಆಧರಿಸಿ, ಬಸವೇಶ್ವರ ನಗರ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ದೂರಿನ ಸಾರಾಂಶವನ್ನೇ ಸುದ್ದಿಗೆ ಆಧಾರವಾಗಿಟ್ಟುಕೊಂಡು ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ ಹೊರತು ಇಲ್ಲಿ ಯಾವುದು ಸೃಷ್ಟಿ ಮಾಡಿಲ್ಲ. ಆದ್ರೆ, ದೂರು ನೀಡಿದ ನಟ ಮಾಜಿ ಪ್ರೇಯಸಿ ಮಾತ್ರ ಈಗ ಉಲ್ಟಾ ಹೊಡೆದಿದ್ದಾರೆ. ಉಲ್ಟಾ ಹೊಡೆದರಾ? ದೂರು ವಾಪಸ್ ಪಡೆದರಾ? ಈಗ್ಯಾಕೆ ಈ ರೀತಿ ಮಾಡ್ತಿದ್ದಾರೆ? ಅನ್ನೋ ಪ್ರಶ್ನೆಗಳು ಈಗ ಚರ್ಚೆಗೆ ಗ್ರಾಸವಾಗಿದೆ. ಇದೆಕ್ಕೆಲಾ ಕಾರಣ ನಟನ ಮಾಜಿ ಪ್ರೇಯಸಿ ಶೇರ್ ಮಾಡಿಕೊಂಡ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ.
ಇದನ್ನೂ ಓದಿ: ವರುಣ್ ಆರಾಧ್ಯ ಮತ್ತು ಮಾಜಿ ಪ್ರೇಯಸಿಯ ಕತೆಯಲ್ಲಿ ಬಿಗ್ ಟ್ವಿಸ್ಟ್! ಇನ್‌ಸ್ಟಾಗ್ರಾಂನಲ್ಲಿ ಹೀಗೊಂದು ಪೋಸ್ಟ್
ಇದು ಮಾಧ್ಯಮಗಳ ಮೂಲಕ ನೀವು ನೋಡುತ್ತಿರುವ ಸುಳ್ಳು ಮಾಹಿತಿಯಾಗಿದೆ. ಇದು ಇನ್‌ಸ್ಟಾಗ್ರಾಮ್ ಪ್ರೊಫೈಲ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ಗಳಿಂದ ಎಲ್ಲಾ ರೀಲ್‌ಗಳನ್ನ ತೆಗೆದು ಹಾಕುವುದರ ಕುರಿತು. ನಕಲಿ ಸುದ್ದಿಗಳನ್ನ ಹರಡುವುದನ್ನ ನಿಲ್ಲಿಸಿ.
ಹೀಗೇಂದು ದೂರುದಾರೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದ್ರೆ, ಎಫ್‌ಐಎಆರ್ ಕಾಪಿಯಲ್ಲಿ ಸ್ಪಷ್ಟವಾಗಿ, ಈ ಅಫೇರ್ ಬಗ್ಗೆ ಎಲ್ಲಿಯೂ ಹೇಳಬಾರದು. ಹೇಳಿದರೆ ನಿನ್ನ ವೈಯಕ್ತಿಕ (ಖಾಸಗಿ) ಫೋಟೋ ಮತ್ತು ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆಂದು ಬೆದರಿಕೆ ಹಾಕಿ ಉಲ್ಲೇಖಿಸಲಾಗಿದೆ. ಎಫ್‌ಐಆರ್‌ನಲ್ಲಿ ಎಲ್ಲಿಯೂ ರೀಲ್ಸ್ ಎಂದು ನಮೂದಾಗಿಲ್ಲ. ಹೀಗಾಗಿ, ಇಲ್ಲಿ ಸ್ಪಷ್ಟವಾಗಿ ಸುಳ್ಳು ಹೇಳ್ತಿರೋದು ದೂರು ನೀಡಿರೋ ನಟನ ಮಾಜಿ ಪ್ರೇಯಸಿ.
ಅಷ್ಟೇ ಅಲ್ಲ, ಪೊಲೀಸರ ಮೇಲೂ ದೂರುದಾರೆ, ನಟನ ಮಾಜಿ ಪ್ರೇಯಸಿ ಕಂಪ್ಲೇಂಟ್ ಮಾಡಿದಂತೆ. ಅವರ ಕೆಲಸದ ಮೇಲೂ ಅನುಮಾನ ಬೀರಿದಂತೆ ಆಗಿದೆ. ಯಾಕಂದ್ರೆ, ಎಫ್‌ಐಆರ್‌ನಲ್ಲಿರುವ ಸಾರಾಂಶವನ್ನ ದಾಖಲು ಮಾಡುವ ಮುನ್ನ, ದೂರುದಾರರಿಗೆ ರೈಟರ್ಸ್ ಓದಿ ಹೇಳಿರುತ್ತಾರೆ. ಅವರ ಒಪ್ಪಿಗೆಯ ಮೇರೆಗೆ ಮಾತ್ರವೇ ಎಫ್‌ಐಆರ್ ಕಾಪಿಯಲ್ಲಿ ದೂರಿನ ಸಾರಾಂಶವನ್ನ ದಾಖಲಿಸುತ್ತಾರೆ. ಜೊತೆಗೆ ಎಫ್‌ಐಆರ್ ಕಾಪಿಯನ್ನ ಸಹ ದೂರುದಾರರಿಗೆ ನೀಡಿರುತ್ತಾರೆ.
ಇಷ್ಟೆಲ್ಲಾ ಕಾನೂನಿನ ಪ್ರಕ್ರಿಯೆ ನಡೆದ ನಂತರವೂ, ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಸುಳ್ಳು ಸುದ್ದಿ. ಇದು ಇನ್‌ಸ್ಟಾಗ್ರಾಮ್ ಪ್ರೊಫೈಲ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ಗಳಿಂದ ಎಲ್ಲಾ ರೀಲ್‌ಗಳನ್ನ ತೆಗೆದು ಹಾಕುವುದರ ಕುರಿತು ಎಂದು ಪೋಸ್ಟ್ ಮಾಡುವುದು ಎಷ್ಟು ಸರಿ? ಹಾಗಾದರೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನನ್ನೇ ನೀವು ಪ್ರಶ್ನೆ ಮಾಡುತ್ತಿದ್ದೀರಾ? ಅಥವಾ ನೀವೇ ಉಲ್ಟಾ ಹೊಡೆದರೇ? ಯಾವಾಗ ದೂರುದಾರೆ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಈ ರೀತಿಯಾಗಿ ಪೋಸ್ಟ್ ಮಾಡಿದರೇ, ಸೋಷಿಯಲ್ ಮೀಡಿಯಾದಲ್ಲಿ ಜನರು ಸರಿಯಾಗಿಯೇ ಕುಟುಕುತ್ತಿದ್ದಾರೆಯ. ಇವರು ಪಬ್ಲಿಸಿಟಿ ತೆಗೆದುಕೊಳ್ಳೋಕೆ ಮಾಡಿದ್ದಾರೆ. ಬಿಗ್‌ಬಾಸ್‌ಗೆ ಹೋಗೋಕೇ ಈ ರೀತಿ ಮಾಡಿದ್ದಾರೆ ಅಂತೆಲ್ಲಾ ಕಮೆಂಟ್ ಹಾಕಿದ್ದಾರೆ. ಯಾವಾಗ ಜನರಿಂದ ನೆಗೆಟಿವ್ ಕಮೆಂಟ್ ಶುರುವಾಯ್ತೋ ಆ ನಂತರ ದೂರುದಾರೆ ಸ್ಟೋರೀಸ್‌ನಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ.
ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಯನ್ನ ನೋಡಿ ಕಮೆಂಟ್ ಮಾಡುತ್ತಿರುವವರ ಗಮನಕ್ಕೆ. ಇನ್ನು 3 ದಿನದಲ್ಲಿ ನಾನು ಸ್ಪಷ್ಟತೆಯೊಂದಿಗೆ ಬರುತ್ತೇನೆ. ಅಲ್ಲಿಯವರೆಗೂ ಸಂಯಮದಿಂದ ಇರಿ.
ಈ ರೀತಿಯಾಗಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಇದು ಕಮೆಂಟ್ಸ್‌ಗಳ ಕೆಂಡದಿಂದ ತಾಳಲು ಆಗದೇ ಹಾಕಿರುವ ಪೋಸ್ಟ್. ಸೋಷಿಯಲ್ ಮೀಡಿಯಾದಲ್ಲಿ ಪಾಪ್ಯುಲರ್ ಆಗಿ, ಸೋಷಿಯಲ್ ಮೀಡಿಯಾದಿಂದಲೇ ಈಗ ನೆಗೆಟಿವ್ ಕಮೆಂಟ್ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದ್ಹಾಗೇ, ದೂರು ನೀಡುವ ಮುನ್ನ, ಕೊಟ್ಟ ನಂತರ ಆಗುವ ಪರಿಣಾಮಗಳನ್ನ ಮೊದಲೇ ಊಹಿಸಿ ಸಮಾಧಾನಚಿತ್ತದಿಂದ ಇರಬೇಕು. ದೂರು ಕೊಟ್ಟ ನಂತರ ಎಫ್‌ಐಆರ್‌ನಲ್ಲಿರುವ ಅಂಶಗಳನ್ನ ತಿರುಚಲಾಗಿದೆ ಎಂದು ಆರೋಪ ಮಾಡುವುದು ಎಷ್ಟು ಸರಿ? ಅನ್ನೋದೇ ಸದ್ಯದ ಪ್ರಶ್ನೆ. ಈ ಬಗ್ಗೆ ಪೊಲೀಸರು ಕೂಡ ದೂರುದಾರೆಯನ್ನ ಕರೆಸಿ ವಿಚಾರಣೆ ನಡೆಸ್ಬೇಕು. ಒಂದು ಕೇಸ್‌ನಲ್ಲಿ ಎಫ್‌ಐಆರ್ ಆದ ನಂತರ ದೂರುದಾರೆ ಆ ರೀತಿಯೇ ಇಲ್ಲ ಅನ್ನೋದು ಗಂಭೀರವಾದ ಆರೋಪ. ಅವರ ಆರೋಪವನ್ನ ಗಂಭೀರವಾಗಿ ಪರಿಗಣಿಸಿ, ಆಕೆಯ ಮೇಲೆ ಕ್ರಮಕೈಗೊಳ್ಳಬೇಕು.
ಹೌದು, ಎಲ್ಲರಿಗೂ ಕಾಡ್ತಿರೋ ಪ್ರಶ್ನೆಯಿದು. ಸದ್ಯ ನಮಗೆ ಸಿಕ್ಕಿರೋ ಮಾಹಿತಿಯ ಪ್ರಕಾರ, ಪೊಲೀಸರ ಮುಂದೆ ದೂರುದಾರೆ ಸ್ವ- ಇಚ್ಛೆ ಹೇಳಿಕೆ ನೀಡಿ ದೂರು ವಾಪಸ್ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಕೇಸ್ ಸದ್ಯ ಕಾಂಪ್ರಮೈಸ್ ಆಗಿದೆ. ಹಾಗಂತಾ ಈ ಹಿಂದೆ ನೀಡಿದ್ದ ದೂರು ಸುಳ್ಳು ಅಂತಲ್ಲ. ಯಾವಾಗ ಎಫ್‌ಐಆರ್ ಕಾಪಿಯ ಸಾರಾಂಶ ಮೀಡಿಯಾದಲ್ಲಿ ಬಂತೋ, ಅದಾದ ನಂತರ ಸ್ವತಃ ದೂರುದಾರೆ ಹೋಗಿ, ಕಂಪ್ಲೇಂಟ್ ವಾಪಸ್ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದಾದ ನಂತರ ಆರೋಪ ಎದುರಿಸ್ತಿರೋ ವರುಣ್ ಆರಾಧ್ಯ, ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಒಂದು ಕ್ಲಾರಿಫಿಕೇಷನ್ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ.
ಇದನ್ನೂ ಓದಿ: ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡಿದ್ದ ಸೀರಿಯಲ್ ನಟ ಕೇಸ್ಗೆ ಬಿಗ್ ಟ್ವಿಸ್ಟ್; ಅಸಲಿಗೆ ಆಗಿದ್ದೇನು?
ಇನ್ನೊಂದೆಡೆ, ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ದೂರುದಾರೆ, ನಾನು ದೂರು ದಾಖಲಿಸಿದ್ದು ನಿಜ. ಎಫ್‌ಐಆರ್ ದಾಖಲಿಸಿದ್ದು ನಿಜ. ನನಗೆ ಬೆದರಿಕೆ ಬಂದಿದ್ದು ನಿಜ. ಆದ್ರೆ, ದೂರು ಕೊಟ್ಟ ನಂತರ ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗುವುದರ ಬಗ್ಗೆ ಕಲ್ಪನೆಯಿರಲಿಲ್ಲ ಅಂತಾ ಹೇಳಿದ್ದಾರೆ. ವಕೀಲರನ್ನ ಈ ಬಗ್ಗೆ ಕೇಳಿದಾಗ, ಅವರು ಸುದ್ದಿಯಾಗೋದಿಲ್ಲ ಎಂದರು. ಹಾಗಾಗಿ, ದೂರು ನೀಡಿದೆ ಅಂತಾ ಸ್ಪಷ್ಟನೆ ನೀಡಿದ್ದಾರೆ. ನಾನು ಪ್ರವಾಸಕ್ಕೆ ಹೋದಾಗ ಕೆಲವೊಂದು ಫೋಟೋಸ್ ಮತ್ತು ವಿಡಿಯೋಸ್ ತೆಗೆದುಕೊಂಡಿದ್ವಿ.
ರಿಲೇಷನ್‌ಶೀಪ್‌ನಲ್ಲಿದ್ದಾಗ ಮಾಡಿದ ವಿಡಿಯೋಗಳು ಅವರ ಪ್ರೊಫೈಲ್‌ನಲ್ಲಿ ಇನ್ನೂ ಇದ್ದವು. ಹೀಗಾಗಿ ದೂರು ನೀಡುವ ಮುನ್ನ, ಅವರ ಸ್ನೇಹಿತರ ಮೂಲಕ ಸಂಪರ್ಕಿಸಿ, ಡಿಲೀಟ್ ಮಾಡುವಂತೆ ಮನವಿ ಮಾಡಿದೆ. ಅವರು ಡಿಲೀಟ್ ಮಾಡಲಿಲ್ಲ. ಹಾಗಾಗಿ ನಾನು ದೂರು ನೀಡಿದೆ ಎಂದು ಸ್ಪಷ್ಟತೆ ಕೊಟ್ಟಿದ್ದಾರೆ. ಇದೆಲ್ಲಾ ಓಕೆ, ಆದ್ರೆ, ಇವರು ಮಾತು, ಇವರ ತೀರ್ಮಾನಗಳನ್ನ ನೋಡಿದರೇ, ಇದು ಪಬ್ಲಿಸಿಟಿ ಗಿಮ್ಮಿಕ್ಕಾ? ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸಿದೆ. ಇನ್ನೊಂದೆಡೆ, ದೂರು ವಾಪಸ್ ತೆಗೆದುಕೊಂಡಿದ್ದರ ಬಗ್ಗೆ ದೂರುದಾರೆಯೇ ಸ್ವತಃ ಸ್ಪಷ್ಟನೆ ನೀಡಬೇಕಿದೆ. ಒಟ್ನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಆಡುವ ಮಕ್ಳಾಟಗಳು, ಸಮಾಜದ ಮುಖ್ಯವಾಹಿನಿಯಲ್ಲಿ ನಡೆಯೋಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ