newsfirstkannada.com

’ನನ್ನ ಸಾಧನೆಗೆ ಅವನೇ ಕಾರಣ’.. ಕುಚುಕು ಗೆಳೆಯ ತೇಜಸ್ ಬಗ್ಗೆ ವರುಣ್​ ಆರಾಧ್ಯ ಹೇಳಿದ್ದೇನು?

Share :

Published June 30, 2024 at 6:29pm

Update June 30, 2024 at 6:34pm

    ಸ್ನೇಹಿತನ ಜೊತೆ ಬರುತ್ತಿದ್ದಾಗ ನಡೆದ ಭೀಕರ ಅಪಘಾತದಲ್ಲಿ ತೇಜಸ್ ಸಾವು

    ತೇಜಸ್​ಗೆ ಗೆಳೆಯರು ಎಂದರೆ ಪಂಚಪ್ರಾಣ, ಏನ್ ಬೇಕಾದ್ರೂ ಮಾಡುತ್ತಿದ್ದ

    ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ನಡೆದ ದುರ್ಘಟನೆ

ಹೊಸ ಹೊಸ ರೀಲ್ಸ್​ಗಳ ಮೂಲಕ ನೆಟ್ಟಿಗರಿಗೆ ಚಿರಪರಿಚಿತ ಆಗಿರೋ ತೇಜಸ್ ಮೊನ್ನೆಯಷ್ಟೇ ಅಪಘಾತದಲ್ಲಿ ಮೃತಪಟ್ಟಿದ್ದರು. ತೇಜಸ್​ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಿರುತೆರೆ ನಟ ನಟಿಯರು ಫುಲ್​ ಶಾಕ್​ಗೆ ಒಳಗಾಗಿದ್ದರು. ಈ ಸುದ್ದಿ ಕೇಳಿದ ಅಭಿಮಾನಿಗಳಿಗೆ ಬರ ಸಿಡಿಲು ಬಡಿದಂತೆ ಆಗಿ ಬಿಟ್ಟಿತ್ತು.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್‌ ಗಾಡಿಯಲ್ಲಿ ಬರುತ್ತಿದ್ದ ತೇಜಸ್‌ ಸಾವನ್ನಪ್ಪಿದ್ದು ಹೇಗೆ? ಆಘಾತಕಾರಿ ವಿಷಯ ಬಯಲು

ಹೌದು, ಕಿರುತೆರೆ ನಟ ವರುಣ್ ಆರಾಧ್ಯ ಆಪ್ತ ಸ್ನೇಹಿತ ತೇಜಸ್ (23) ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಜೂನ್​ 26 ರಂದು ಬೆಳಗಿನ ಜಾವ 12 ಗಂಟೆ 30 ನಿಮಿಷಕ್ಕೆ ಕೆಲಸದ ನಿಮಿತ್ತ ಸ್ನೇಹಿತನ ಜೊತೆಯಲ್ಲಿ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ವಾಪಸ್ಸು ಬರುತ್ತಿದ್ದಾಗ ದುರ್ಘಟನೆ ಸಂಭವಿಸಿತ್ತು. ಈ ಘಟನೆಯಲ್ಲಿ ತೇಜಸ್ ಸ್ಥಳದಲ್ಲೇ ಮೃತಪಟ್ಟಿದ್ದರು. ಜೊತೆಗೆ ಬೈಕ್​ನಲ್ಲಿದ್ದ ಆಕಾಶ್ (19) ಎಂಬಾತನಿಗೆ ಗಂಭೀರ ಗಾಯಗಳಾಗಿದ್ದವು. ಸದ್ಯ ಗಂಭೀರವಾಗಿ ಗಾಯಗೊಂಡಿದ್ದ ಆಕಶ್​​ ಚೇತರಿಸಿಕೊಳ್ಳುತ್ತಿದ್ದಾರೆ.

ಆದರೆ ತೇಜಸ್ ಅವರ ನಿಧನದ ಸುದ್ದಿ ಸಾಕಷ್ಟು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿತ್ತು. ಹೀಗಾಗಿ ತೇಜಸ್​ ಅಭಿಮಾನಿಗಳು ಅವರ ಸ್ನೇಹಿತ ವರುಣ್​ ಆರಾಧ್ಯ ಅವರಿಗೆ ಕಾಮೆಂಟ್ಸ್​ ಮಾಡುವ ಮೂಲಕ ರಿಕ್ವೆಸ್ಟ್ ಮಾಡಿಕೊಂಡಿದ್ದರು. ಹೀಗಾಗಿ ವರುಣ್​ ಆರಾಧ್ಯ, ಸೂರ್ಯ ಗೌಡ, ವರುಣ್​ ಅಕ್ಕ ಚೈತ್ರ ಆರಾಧ್ಯ ಹಾಗೂ ತಾಯಿ ಮತ್ತು ಕಾರ್ತಿಕ್​ ಗೌಡ ಸೇರಿ ವಿಡಿಯೋ ಮಾಡುವ ಮೂಲಕ ಕಂಬನಿ ಮಿಡಿದಿದ್ದಾರೆ. ಇನ್ನು ಈ ವಿಡಿಯೋ ಶೇರ್​ ಮಾಡಲು ಏನು ಕಾರಣ ಅಂತ ಹೇಳಿಕೊಂಡಿದ್ದಾರೆ.

ಇನ್ನು, ಈ ಬಗ್ಗೆ ವರುಣ್​ ಆರಾಧ್ಯ ಅವರು ತಮ್ಮ ಯ್ಯೂಟೂಬ್ ಚಾನೆಲ್​ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಎಲ್ಲರಿಗೂ ನಮಸ್ಕಾರ, ತೇಜಸ್​ ಅಭಿಮಾನಿಗಳು ಒಂದು ವಿಡಿಯೋ ಮಾಡಿ ಏನಾಯ್ತು ಅಂತ ಹೇಳಿ ಅಂತ ಕೇಳಿಕೊಂಡಿದ್ದರು. ಹೀಗಾಗಿ ಈ ಸಂದರ್ಭದಲ್ಲಿ ಈ ವಿಡಿಯೋ ಮಾಡ್ತಾ ಇದ್ದೇನೆ. ತುಂಬಾ ನೋವಾಗುತ್ತದೆ. ತೇಜಸ್​ ನನ್ನ ಫಸ್ಟ್​ ದೋಸ್ತ್​​. 3ನೇ ತರಗತಿಯಿಂದಲೂ ಅವನು ನನಗೆ ಫ್ರೆಂಡ್. ತೇಜು ನಮ್ಮ ಮನೆಯಲ್ಲೇ ಇರುತ್ತಿದ್ದ. ನನಗೆ ಹಾಗೂ ನನ್ನ ಅಕ್ಕನಿಗೆ ತಮ್ಮ ಆಗಿದ್ದ. ತುಂಬಾ ಎಲ್ಲರ ಜೊತೆ ಕ್ಲೋಸ್​ ಆಗಿದ್ದ. ತುಂಬಾ ನೊಂದು ಹೋಗಿದ್ದೇವೆ. ಇದು ಕನಸಾ ನನಸಾ ಅಂತ ಒಂದು ಗೊತ್ತಾಗುತ್ತಿಲ್ಲ. ಆದರೂ ಅವನು ಎಲ್ಲೂ ಹೋಗಿಲ್ಲ. ನಮ್ಮನ್ನ ಬಿಟ್ಟು ಹೋಗಿಲ್ಲ. ನಮ್ಮ ಸುತ್ತಮುತ್ತನೇ ಇರುತ್ತಿದ್ದ. ಅವನಿಗೆ ಗೆಳೆಯರು ಎಂದರೆ ಪಂಚಪ್ರಾಣ. ಫ್ರೆಂಡ್ಸ್​ಗಾಗಿ ಪ್ರಾಣ ಬೇಕಾದರೂ ಕೊಡ್ತಾ ಇದ್ದ. ನನಗೆ ಇಷ್ಟ ಆಗೋರೆಲ್ಲ ತುಂಬಾ ದೂರ ಆಗ್ತಾ ಇದ್ದಾರೆ. ನಮ್ಮ ಅಕ್ಕನಿಗೆ ಅಮ್ಮ ಅಮ್ಮ ಅಂತಾ ಇದ್ದ. ಆದರೆ ನಮ್ಮ ಅಕ್ಕ ಕೂಡ ತುಂಬಾ ನೊಂದು ಹೋಗಿದ್ದಾರೆ ಅಂತ ಭಾವುಕರಾಗಿ ಮಾತಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

’ನನ್ನ ಸಾಧನೆಗೆ ಅವನೇ ಕಾರಣ’.. ಕುಚುಕು ಗೆಳೆಯ ತೇಜಸ್ ಬಗ್ಗೆ ವರುಣ್​ ಆರಾಧ್ಯ ಹೇಳಿದ್ದೇನು?

https://newsfirstlive.com/wp-content/uploads/2024/06/varun1.jpg

Load More