ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವನ್ನಪ್ಪಿ 11 ದಿನ
ಪುಣ್ಯಸ್ಮರಣೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ,ಗಣ್ಯರ ಆಗಮನ
ಶಿವರಾಜ್‌ಕುಮಾರ್, ಗೀತಾ ಶಿವರಾಜ್ ಕುಮಾರ್ ಕೂಡ ಭಾಗಿ
ಬೆಂಗಳೂರು: ನಟ ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನಾ ಅವರು ಹೃದಯಾಘಾತಕ್ಕೆ ಸಾವನ್ನಪ್ಪಿ ಇಂದಿಗೆ 11 ದಿನ. ವಿಜಯ್ ರಾಘವೇಂದ್ರ ಅವರ ಕುಟುಂಬಸ್ಥರು ಇನ್ನೂ ಆ ನೋವಿನಿಂದ ಹೊರ ಬಂದಿಲ್ಲ. ಈ ದುಃಖದ ಮಧ್ಯೆ ಸ್ಪಂದನಾ ಅವರ 11ನೇ ದಿನದ ಪುಣ್ಯಕಾರ್ಯವನ್ನು ಇಂದು ನಡೆಸಲಾಗುತ್ತಿದೆ.
ಸ್ಪಂದನಾ ಅವರ 11ನೇ ದಿನದ ಪುಣ್ಯಕಾರ್ಯ ವಿಜಯ್ ರಾಘವೇಂದ್ರ ಅವರ ಮಾವ ಬಿ.ಕೆ ಶಿವರಾಮ್ ಅವರ ನಿವಾಸದ ಬಳಿ ಮಾಡಲಾಗುತ್ತಿದೆ. ಮಲ್ಲೇಶ್ವರಂನ ಬಿಜೆಪಿ ಕಚೇರಿ ಎದುರಿನ ಮೈದಾನದಲ್ಲಿ ಸ್ಪಂದನಾ ಅವರ ಪುಣ್ಯಸ್ಮರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಸ್ಪಂದನಾ ಅವರ ಪುಣ್ಯಸ್ಮರಣೆ ಹಿನ್ನೆಲೆ ಬಿ.ಕೆ ಶಿವರಾಮ್ ಅವರ ನಿವಾಸಕ್ಕೆ ವಿಜಯ್ ರಾಘವೇಂದ್ರ ಹಾಗೂ ಅವರ ಮಗ ಶೌರ್ಯ ಭಾರವಾದ ಹೆಜ್ಜೆಯಿಡುತ್ತಾ ಆಗಮಿಸಿದರು.
ಅಶ್ವಿನಿ ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ಗೀತಾ ಶಿವರಾಜ್ ಕುಮಾರ್, ನಟಿ ಅನುಪ್ರಭಾಕರ್, ರಘು ಮುಖರ್ಜಿ ಕೂಡ ಸ್ಪಂದನಾ ಅವರ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದಾರೆ.
ಸ್ಪಂದನಾ ಅವರ ಪುಣ್ಯ ಕಾರ್ಯಕ್ಕೆ ಆಗಮಿಸುವ ಗಣ್ಯರು, ಸಂಬಂಧಿಕರು ಮತ್ತು ಸಾಮಾನ್ಯ ಜನರ ಆತಿಥ್ಯಕ್ಕೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ