ಅತ್ತಿಗೆ ಸ್ಪಂದನಾ ಅಂತಿಮ ದರ್ಶನದ ಸಿದ್ಧತೆ ಪರಿಶೀಲಿಸಿದ ಮುರುಳಿ
ಬಿ.ಕೆ ಶಿವರಾಮ್ ಅವರ ಮನೆ ಬಳಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ
ಬ್ಯಾಂಕಾಕ್‌ನಿಂದ ಹೊರಟಿರೋ ವಿಮಾನ ಮಧ್ಯರಾತ್ರಿ ಬೆಂಗಳೂರಿಗೆ
ಬೆಂಗಳೂರು: ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಮೃತದೇಹವನ್ನು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ತರಲಾಗುತ್ತಿದೆ. ಬ್ಯಾಂಕಾಕ್‌ನಿಂದ ಹೊರಟಿರೋ ವಿಮಾನ ಇಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪೋ ಸಾಧ್ಯತೆ ಇದೆ. ಪತ್ನಿ ಪಾರ್ಥಿವ ಶರೀರ ತರಲು ಬ್ಯಾಂಕಾಕ್‌ಗೆ ಹೋಗಿದ್ದ ವಿಜಯ ರಾಘವೇಂದ್ರ ಹಾಗೂ ಆಪ್ತರು ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ಸ್ಪಂದನಾ ಅವರ ಮೃತದೇಹವನ್ನು ಮಲ್ಲೇಶ್ವರಂನಲ್ಲಿರುವ ಬಿ.ಕೆ ಶಿವರಾಮ್ ಅವರ ನಿವಾಸಕ್ಕೆ ತೆಗೆದುಕೊಂಡು ಬರಲಾಗುತ್ತಿದೆ. ಸ್ಪಂದನಾ ಅವರ ತಂದೆ ಬಿ.ಕೆ ಶಿವರಾಮ್ ಅವರ ಮನೆ ಬಳಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ವಿಜಯ ರಾಘವೇಂದ್ರ ಅವರ ಸಹೋದರ ಶ್ರೀಮುರುಳಿ ಅವರು ಈಗಾಗಲೇ ಬಿ.ಕೆ ಶಿವರಾಮ್ ಅವರ ನಿವಾಸಕ್ಕೆ ಆಗಮಿಸಿ ಕುಟುಂಬದ ಆಪ್ತರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಸ್ಪಂದನಾ ಅವರ ಅಂತ್ಯ ಸಂಸ್ಕಾರ ನಾಳೆ ನಡೆಯಲಿದ್ದು, ಅಂತಿಮ ವಿಧಿ ವಿಧಾನಗಳ ಬಗ್ಗೆ ಬಿ.ಕೆ ಶಿವರಾಮ್, ಚಿನ್ನೇಗೌಡರು, ಬಿ.ಕೆ ಹರಿಪ್ರಸಾದ್, ಶ್ರೀಮುರುಳಿ ಅವರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬಿ.ಕೆ ಶಿವರಾಮ್ ಅವರ ಮನೆ ಮುಂದೆಯೇ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಬಿ.ಕೆ ಶಿವರಾಮ್ ಅವರ ಮನೆ ಮುಂದೆ ಫ್ರೀಜರ್ ಶವಪೆಟ್ಟಿಗೆ ತರಲಾಗಿದೆ. ಅಂತಿಮ ದರ್ಶನಕ್ಕೆ ಹಾಕಲಾಗಿರೋ ಸ್ಟೇಜ್ ಅನ್ನು ಶ್ರೀಮುರುಳಿ ಅವರು ಪರಿಶೀಲಿಸಿದ್ದಾರೆ. ಅತ್ತಿಗೆಯ ಅಂತಿಮ ದರ್ಶನದ ವ್ಯವಸ್ಥೆ ನೋಡುವಾಗ ಮುರುಳಿ ಅವರು ಭಾವುಕಾಗಿ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಮಗ ಶೌರ್ಯನನ್ನ ಹೀರೋ ಮಾಡುವ ಕನಸು ಕಟ್ಟಿಕೊಂಡಿದ್ದ ಸ್ಪಂದನಾ; ರಾಘು ಪತ್ನಿಯ ಆಸೆಗಳ ಬುತ್ತಿ ಬಿಚ್ಚಿಟ್ಟ ನಿರ್ದೇಶಕ ಮಹೇಶ್
ಬಿ.ಕೆ ಶಿವರಾಮ್ ಅವರ ಮನೆಯಲ್ಲಿ ಚಿನ್ನೇಗೌಡ್ರು ಸೇರಿದಂತೆ ಕುಟುಂಬದ ಅತ್ಯಾಪ್ತರು ಸ್ಪಂದನಾ ಅವರ ಪಾರ್ಥಿವ ಶರೀರದ ಆಗಮನವನ್ನೇ ಎದುರು ನೋಡುತ್ತಿದ್ದಾರೆ. ಇಂದು ತಡರಾತ್ರಿ ಬೆಂಗಳೂರಿಗೆ ಸ್ಪಂದನಾ ಮೃತದೇಹವನ್ನು ವಿಜಯ ರಾಘವೇಂದ್ರ ಅವರ ತರುತ್ತಿದ್ದಾರೆ. ವಿಜಯ ರಾಘವೇಂದ್ರ ಅವರು ಬಂದ ಮೇಲೆ ಕುಟುಂಬದ ಸದಸ್ಯರು ನಾಳೆ ನಡೆಸುವ ವಿಧಿ ವಿಧಾನದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ