newsfirstkannada.com

×

ಮಲಗಿರುವಾಗಲೇ ಪ್ರಾಣ ಬಿಟ್ಟ ಖ್ಯಾತ ನಟ ವಿಕಾಸ್ ಸೇಠಿ; ಆರೋಗ್ಯಕ್ಕೆ ಏನಾಗಿತ್ತು?

Share :

Published September 9, 2024 at 8:36am

Update September 9, 2024 at 8:38am

    ವಿಕಾಸ್ ಸೇಠಿ ಸಾವಿನ ಸುದ್ದಿ ಕೇಳಿ ಆಪ್ತರು, ಸ್ನೇಹಿತರು ಶಾಕ್

    ಹಿಂದಿ ಕಿರುತೆರೆಯ ಖ್ಯಾತ ನಟ ವಿಕಾಸ್ ಸೇಠಿ ನಿಧನ

    ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದ ನಟ ವಿಕಾಸ್

ಹಿಂದಿ ಕಿರುತೆರೆಯ ಖ್ಯಾತ ನಟ ವಿಕಾಸ್ ಸೇಠಿ ಮೃತಪಟ್ಟಿದ್ದಾರೆ. 48 ವರ್ಷದ ವಿಕಾಸ್ ಸೇಠಿ ಅದ್ಭುತ ನಟನೆಯ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ‘ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ’ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿ, ಫೇಮಸ್ ಆಗಿದ್ದ ವಿಕಾಸ್ ಸೇಠಿ, ಸೆಪ್ಟೆಂಬರ್ 8 ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಮಗಳ ಮೊದಲ ಫೋಟೋ ರಿಲೀಸ್‌.. ಪುಟಾಣಿ ‘ದೀಪ್ಸ್’ ಹೆಸರೇನು ಗೊತ್ತಾ?

ಮಲಗಿರುವಾಗಲೇ ವಿಕಾಸ್ ಸೇಠಿ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ವರದಿಯಾಗಿದೆ. ನಟ ವಿಕಾಸ್ ಅವರು ಪತ್ನಿ ಜಾಹ್ನವಿ ಸೇಠಿ ಮತ್ತು ಇಬ್ಬರು ಅವಳಿ ಮಕ್ಕಳನ್ನು ಅಗಲಿದ್ದಾರೆ. ನಟ ವಿಕಾಸ್ ಸೇಠಿ ಅವರು 2 ದಶಕಕ್ಕೂ ಹೆಚ್ಚು ಸಮಯದಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. 2000ರಲ್ಲಿ ಪ್ರಸಾರ ಆರಂಭಿಸಿ 1800ಕ್ಕೂ ಅಧಿಕ ಸಂಚಿಕೆಗಳನ್ನ ಪೂರೈಸಿದ್ದ ‘ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ’ ಧಾರಾವಾಹಿಯಲ್ಲಿ ವಿಕಾಸ್ ನಟಿಸಿ ಸೈ ಎನಿಸಿಕೊಂಡಿದ್ದರು. ಬಳಿಕ ಕಹೀ ತೋ ಹೋಗ, ಕೆ ಸ್ಟ್ರೀಟ್ ಪಾಲಿ ಹಿಲ್, ಕಸೌತಿ ಜಿಂದಗಿ ಕೇ, ಸಂಸ್ಕಾರ್ ಲಕ್ಷ್ಮೀ, ಸಸುರಾಲ್ ಸಿಮರ್ ಕಾ, ದೊ ದಿಲ್ ಬಂಧೆ ಏಕ್ ದೊರಿ ಸೆ ಸೇರಿದಂತೆ ಮುಂತಾದ ಧಾರಾವಾಹಿಗಳಲ್ಲಿ ವಿಕಾಸ್ ಸೇಠಿ ಬಣ್ಣ ಹಚ್ಚಿದ್ದರು.

ಜೊತೆಗೆ ನಟ ವಿಕಾಸ್ ಸೇಠಿ ಕೆಲವೊಂದು ಸಿನಿಮಾಗಳಲ್ಲಿ ನಟಿದ್ದಾರೆ. ದೀವಾನಪನ್ ಕಭೀ ಖುಷಿ ಕಭೀ ಗಮ್, ಊಪ್ಸ್, ಮೋದ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಅವರು ಯಾವ ಸಿನಿಮಾವಾಗಲಿ, ಧಾರಾವಾಹಿಯಾಗಲಿ ನಟಿಸುತ್ತಿರಲಿಲ್ಲ. ವಿಕಾಸ್ ಸೇಠಿ  ಅಕಾಲಿಕ ನಿಧನದ ಸುದ್ದಿ ಅವರ ಅಭಿಮಾನಿಗಳಿಗೆ, ಆಪ್ತರಿಗೆ ಶಾಕ್ ಉಂಟಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಲಗಿರುವಾಗಲೇ ಪ್ರಾಣ ಬಿಟ್ಟ ಖ್ಯಾತ ನಟ ವಿಕಾಸ್ ಸೇಠಿ; ಆರೋಗ್ಯಕ್ಕೆ ಏನಾಗಿತ್ತು?

https://newsfirstlive.com/wp-content/uploads/2024/09/Vikas-Sethi.jpg

Load More