ಎಲ್ಲರ ಮುಂದೆಯೇ ಬಾಯ್ಫ್ರೆಂಡ್ಗೆ ಮುತ್ತಿಟ್ಟ ನಟಿ ಅಮಲಾ ಪೌಲ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿಯ ವಿಡಿಯೋ!
ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ ನೆಟ್ಟಿಗರು!
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಕಿಚ್ಚ ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾದ ನಟಿ ಅಮಲಾ ಪೌಲ್ ತಮ್ಮ ಬಾಯ್‌ಫ್ರೆಂಡ್ ಜೊತೆ ಎಲ್ಲರ ಮುಂದೆಯೇ ಲಿಪ್ ಲಾಕ್ ಮಾಡಿದ್ದಾರೆ. ಹೌದು, ಬಹುಭಾಷಾ ನಟಿ ಅಮಲಾ ಪೌಲ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು.
ಹುಟ್ಟು ಹಬ್ಬದ ಖುಷಿಯಲ್ಲಿದ್ದ ನಟಿಗೆ ಡಬಲ್ ಗಿಫ್ಟ್ ಸಿಕ್ಕಿದೆ. ನಟಿ ಅಮಲಾ ಪೌಲ್ ಬಾಯ್‌ಫ್ರೆಂಡ್ ಜಗತ್ ದೇಸಾಯಿ ಅವರು ವಿಶೇಷ ಡ್ಯಾನ್ಸ್ ಮಾಡಿದ್ದಾರೆ. ಇದರ ಜೊತೆಗೆ ರಿಂಗ್ ಕೊಟ್ಟು ವಿಲ್ ಯು ಮ್ಯಾರಿ ಮಿ ಎಂದು ಪ್ರೇಮ ನಿವೇದನೆ ಮಾಡಿದ್ದಾರೆ. ಇದಕ್ಕೆ ನಟಿ ಕೂಡ ಯೆಸ್ ಎಂದು ಒಪ್ಪಿಕೊಂಡಿದ್ದಾರೆ.
View this post on Instagram
ವಿಡಿಯೋದಲ್ಲಿ ಏನಿದೆ..?
ಅಮಲಾ ಪೌಲ್ ಹಾಗೂ ಜಗತ್ ಅವರು ರೆಸ್ಟೋರೆಂಟ್‌ವೊಂದರಲ್ಲಿ ಕುಳಿತುಕೊಂಡಿದ್ದರು. ನಟಿಯು ಪಿಂಕ್ ಬಣ್ಣದ ಜಂಪ್‌ಸೂಟ್‌ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದರು. ಜಗತ್ ಅವರು ಬಿಳಿ ಬಣ್ಣದ ಟೀ ಶರ್ಟ್, ಜಾಕೆಟ್ ಧರಿಸಿಕೊಂಡಿದ್ದರು. ಇನ್ನೂ ಮೊದ ಮೊದಲು ಕೆಲ ಡ್ಯಾನ್ಸರ್‌ಗಳು ಜಗತ್ ಅವರಿಗೆ ಡ್ಯಾನ್ಸ್ ಮಾಡಲು ಬನ್ನಿ ಎಂದು ಕರೆದಿದ್ದಾರೆ. ಆಗ ಜಗತ್ ಅಲ್ಲಿಂದ ಹೋಗಿ ಡ್ಯಾನ್ಸ್ ಮಾಡುತ್ತಾರೆ. ಅದೇ ವೇಳೆ ಡ್ಯಾನ್ಸರ್‌ಗಳು ನಟಿಯನ್ನು ಎಳೆದುಕೊಂಡು ಬರುತ್ತಾರೆ. ಇನ್ನೂ ಡ್ಯಾನ್ಸ್ ಮಾಡುತ್ತಿದ್ದಂತೆ ನಟಿಗೆ ಜಗತ್ ದೇಸಾಯಿ ಅವರು ರಿಂಗ್ ಕೊಡುವ ಮೂಲಕ ವಿಲ್ ಯು ಮ್ಯಾರಿ ಮಿ ಎಂದು ಪ್ರೇಮ ನಿವೇದನೆ ಮಾಡಿದ್ದಾರೆ. ಇನ್ನೂ ಈ ಸರ್ಪ್ರೈಸ್ ನೋಡಿ ಅಮಲಾ ಫುಲ್ ಖುಷಿ ಆಗಿದ್ದಾರೆ. ಬಳಿಕ ಜಗತ್ ಅವರಿಗೆ ಮುತ್ತು ಕೊಟ್ಟು ಡ್ಯಾನ್ಸ್ ಮಾಡಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
ಮೊದಲ ಮದುವೆ ಮುರಿದು ಬೀಳಲು ಕಾರಣವೇನು..?
‘ದೈವ ತಿರುಮಗಳ್’ ಸಿನಿಮಾ ಸಮಯದಲ್ಲಿ ನಿರ್ದೇಶಕ ವಿಜಯ್ ಹಾಗೂ ಅಮಲಾ ಡೇಟ್ ಮಾಡುತ್ತಿದ್ದರು. ಆನಂತರ ಈ ಜೋಡಿ 2014ರ ಜೂನ್ 12ರಂದು ವಿವಾಹವಾಗಿತ್ತು. 2017ರಲ್ಲಿ ಈ ಜೋಡಿ ವಿಚ್ಛೇದನ ಪಡೆದಿತ್ತು. ಬಳಿಕ ವಿಜಯ್ ಅವರು ಬೇರೆ ಮದುವೆ ಆಗಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಕೌಟುಂಬಿಕ ಕಾರಣಗಳಿಂದ ದೂರವಾದರು.
ಎರಡನೇ ಮದುವೆ ಬಗ್ಗೆ ವದಂತಿ ಆಗಿದ್ದೇಗೆ..?
ಇನ್ನೂ ಮೊದಲನೆ ಮದುವೆ ಬಳಿಕ ನಟಿ ಮುಂಬೈ ಮೂಲದ ಗಾಯಕ ಭವಿಂದರ್ ಸಿಂಗ್ ಜೊತೆ ಅಮಲಾ ಅವರು ಲಿವ್ ಇನ್ ರಿಲೇಶನ್‌ಶಿಪ್‌ಲ್ಲಿದ್ದರು ಎಂಬ ವಿಷಯ ಸಾಕಷ್ಟು ಸುದ್ದಿಯಾಗಿತ್ತು. ಬಳಿಕ ಈ ಇಬ್ಬರ ಮದುವೆ ಆಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇದ್ಯಾವುದಕ್ಕೂ ಅಮಲಾ ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ದಿನ ಕಳೆದಂತೆ ನನ್ನ ಖಾಸಗಿ ಫೋಟೋಗಳನ್ನು ಭವನಿಂದರ್ ಸಿಂಗ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದರು. ಅಲ್ಲಿಗೆ ಅಮಲಾ ಅವರ ಎರಡನೇ ಮದುವೆ ವಿಷಯವೂ ಕೊನೆಗೊಂಡಿತ್ತು. ಸದ್ಯ ನಟಿ ಅಮಲಾ ಪೌಲ್ ಅವರು ಜಗತ್ ದೇಸಾಯಿ ಅವರ ಜೊತೆ ಕಾಲಕಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಜೋಡಿ ಮದುವೆಯಾಗುತ್ತಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ