/newsfirstlive-kannada/media/post_attachments/wp-content/uploads/2024/10/deepak.jpg)
ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಅಮೂಲ್ಯ ಸಹೋದರ ಇಂದು ಮೃತಪಟ್ಟಿದ್ದಾರೆ. ಮೃತಪಟ್ಟ ನಟಿ ಅಮೂಲ್ಯ ಅಣ್ಣ ಸ್ಯಾಂಡಲ್​ವುಡ್​ನಲ್ಲಿ ಕೆಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ದೀಪಕ್ ಅರಸ್ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
/newsfirstlive-kannada/media/post_attachments/wp-content/uploads/2024/10/deepak2.jpg)
ದೀಪಕ್ ಅರಸ್ ಮೃತಪಟ್ಟ ಸುದ್ದಿಯೂ ನ್ಯೂಸ್​ಫಸ್ಟ್​ಗೆ​ ಆಪ್ತಮೂಲಗಳಿಂದ ತಿಳಿದು ಬಂದಿದೆ. ಇಂದು ಸಂಜೆ 7 ಗಂಟೆ ಸುಮಾರಿಗೆ ದೀಪಕ್ ಅರಸ್ ಅವರು ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಮೃತ ಕನ್ನಡದ ನಿರ್ದೇಶಕ ದೀಪಕ್​ ಅವರಿಗೆ ಸುಮಾರು 42 ವರ್ಷ ವಯಸ್ಸಾಗಿತ್ತು.
ಇದನ್ನೂ ಓದಿ: ಘೋರ ದುರಂತ.. ಕೊಚ್ಚಿ ಹೋಗಿದ್ದ ನಿವೇದನ್ ಬದುಕಿ ಬರಲೇ ಇಲ್ಲ; ಆಗಿದ್ದೇನು?
ದೀಪಕ್ ಅರಸ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರಾಗಿದ್ದರು. 2011ರಲ್ಲಿ ತೆರೆಕಂಡ ಬಿಗ್​ಬಾಸ್​ ಖ್ಯಾತಿಯ ನಟ ರಾಕೇಶ್ ನಾಯಕನಾಗಿ ಮತ್ತು ಅಮೂಲ್ಯ ನಾಯಕಿಯಾಗಿ ನಟಿಸಿದ ಮನಸಾಲಜಿ, ಸೋನಲ್ ಮೊಂಥೆರೋ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/10/deepak1.jpg)
ಇನ್ನೂ ದೀಪಕ್ ಅರಸ್ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಸ್ನೇಹಿತರು, ಬಂಧು ಮಿತ್ರರು ಹಾಗೂ ಸ್ಯಾಂಡಲ್​ವುಡ್​ ನಟ ನಟಿಯರು ಸಂತಾಪ ಸೂಚಿಸುತ್ತಿದ್ದಾರೆ. ದೀಪಕ್ ಅರಸ್ ಅವರ ನಿವಾಸದಲ್ಲಿ ಮೌನ ಆವರಿಸಿದೆ. ನಾಳೆ ದೀಪಕ್ ಅರಸ್ ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us