newsfirstkannada.com

ಮತ್ತೆ ಆಸ್ಪತ್ರೆಗೆ ದಾಖಲಾದ ನಟಿ ಖುಷ್ಬೂ ಸುಂದರ್; ಇಲ್ಲಿವೆ ಟಾಪ್​​ 5 ಸಿನಿಮಾ ಸುದ್ದಿಗಳು!

Share :

24-06-2023

  ಕೊನೆಗೂ ಅಭಿಮಾನಿಗಳಿಗೆ ಸರ್ಪ್ರೈಸ್​ ಸುದ್ದಿ ಕೊಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

  ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕುರಿತ ಚಿತ್ರದ ಟೀಸರ್ ಬಿಡುಗಡೆ

  ನಟ ದುಲ್ಕರ್ ಸಲ್ಮಾನ್ ನಟನೆಯ 'ಪೀಪಲ್ ಆಫ್ ಕೊಥ' ಚಿತ್ರದ ಪೋಸ್ಟರ್​ ರಿಲೀಸ್

ಡಬಲ್ ಸುದ್ದಿ ಕೊಟ್ಟ ಕಿಚ್ಚ ಸುದೀಪ್

ಜೂನ್ ಮೊದಲ ವಾರದಲ್ಲಿ ಹೊಸ ಚಿತ್ರದ ಟೀಸರ್ ಲಾಂಚ್ ಮಾಡುತ್ತೇವೆ ಅಂತೇಳಿ ಮೌನವಾಗಿದ್ದ ಕಿಚ್ಚ ಸುದೀಪ್ ಕೊನೆಗೂ ಸರ್ಪ್ರೈಸ್​ ಸುದ್ದಿ ಕೊಟ್ಟಿದ್ದಾರೆ. ಜೂನ್ 25ಕ್ಕೆ ತನ್ನ ಸೋದರಳಿಯ ಸಂಚಿತ್ ಸಂಜೀವ್ ಚೊಚ್ಚಲ ಬಾರಿಗೆ ನಟಿಸಿ, ನಿರ್ದೇಶಿಸುತ್ತಿರುವ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಅದಾದ ಬಳಿಕ ಜೂನ್ 27ಕ್ಕೆ ತಮ್ಮ 46ನೇ ಚಿತ್ರದ ಟೀಸರ್​ ರಿಲೀಸ್ ಬಿಡುಗಡೆ ಮಾಡುವ ದಿನಾಂಕವನ್ನ ಘೋಷಿಸಲಿದ್ದೇವೆ ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

‘ಮೂವಿ ಮಾಫಿಯಾ’ದ ವಿರುದ್ಧ ಗುಡುಗಿದ ಕಂಗನಾ

‘ಟಿಕು ವೆಡ್ಸ್​ ಶೇರು’ ಚಿತ್ರದ ವಿರುದ್ಧ ನೆಗೆಟಿವ್ ಪ್ರಚಾರ ಮಾಡಲಾಗುತ್ತಿದೆ ಎಂದು ಕಂಗನಾ ರಣಾವತ್ ಕಿಡಿ ಕಾರಿದ್ದಾರೆ. ‘ಮೂವಿ ಮಾಫಿಯಾ’ ತಂಡದವರು ಬೇಕು ಅಂತಲೇ ನನ್ನ ಚಿತ್ರಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಆದ್ರೆ ಇದು ವರ್ಕ್​ ಆಗಲ್ಲ ಅಂತ ತನ್ನ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಕಂಗನಾ ಆಕ್ರೋಶ ಹೊರಹಾಕಿದ್ದಾರೆ. ‘ಟಿಕು ವೆಡ್ಸ್​ ಶೇರು’ ಚಿತ್ರವನ್ನ ಕಂಗನಾ ರಣಾವತ್ ನಿರ್ಮಾಣ ಮಾಡಿದ್ದು, ನವಾಜುದ್ದೀನ್ ಸಿದ್ದಿಕಿ ಮತ್ತು ಅವ್ನೀತ್ ಕೌರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

View this post on Instagram

A post shared by Kangana Ranaut (@kanganaranaut)

ಆಂಧ್ರ CM ಜಗನ್​ ಸಿನಿಮಾದ ಟೀಸರ್

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಕುರಿತು ತಯಾರಾಗುತ್ತಿರುವ ‘ವ್ಯೂಹಂ’ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಚಿತ್ರ ನಿರ್ದೇಶಿಸಿದ್ದು, ಟೀಸರ್​ ಭಾರಿ ಸದ್ದು ಮಾಡ್ತಿದೆ. ಆಂಧ್ರಪ್ರದೇಶದ ಮಾಜಿ ಸಿಎಂ ವೈಎಸ್​ ರಾಜಶೇಖರ್ ಅವರ ಹಠಾತ್ ನಿಧನದ ನಂತರ ರಾಜಕೀಯದಲ್ಲಿ ನಡೆದ ವಿದ್ಯಮಾನಗಳನ್ನ ಆಧರಿಸಿ ಕಥೆ ಮಾಡಲಾಗಿದ್ದು, ಕುತೂಹಲ ಹೆಚ್ಚಿಸಿದೆ.

ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದೇಕೆ ಖುಷ್ಬೂ?

ತಮಿಳು ನಟಿ ಖುಷ್ಬೂ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಕ್ಸಿಕ್ಸ್ ಮೂಳೆ ಸಮಸ್ಯೆಯಿಂದ ಬಳಲುತ್ತಿರುವ ನಟಿ ಎರಡನೇ ಸಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸ್ವತಃ ಖುಷ್ಬೂ ಅವರೇ ಟ್ವೀಟ್ ಮಾಡಿದ್ದು, ‘ಕೋಕ್ಸಿಕ್ಸ್ ಮೂಳೆಯ ಚಿಕಿತ್ಸೆಗಾಗಿ ನಾನು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆದಷ್ಟು ಬೇಗ ಗುಣಮುಖಳಾಗುವ ವಿಶ್ವಾಸವಿದೆ’ ಎಂದಿದ್ದಾರೆ. ಅಂದ್ಹಾಗೆ, ಖುಷ್ಬೂ ಬಹಳದ ದಿನಗಳಿಂದ ಕೋಕ್ಸಿಕ್ಸ್ ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಮುಂಚೆಯೂ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಮತ್ತೊಮ್ಮೆ ಆಸ್ಪತ್ರೆ ಸೇರಿರುವ ಕಾರಣ ಅಭಿಮಾನಿಗಳು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತಿದ್ದಾರೆ.

ದುಲ್ಕರ್ ಸಲ್ಮಾನ್ ಹೊಸ ಸಿನಿಮಾ

ಮಲಯಾಳಂ ನಟ ದುಲ್ಕರ್ ಸಲ್ಮಾನ್ ನಟಿಸುತ್ತಿರುವ ‘ಪೀಪಲ್ ಆಫ್ ಕೊಥ’ ಚಿತ್ರದ ಮೋಷನ್ ಪೋಸ್ಟರ್​ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ಜೂನ್ 28ಕ್ಕೆ ಈ ಚಿತ್ರದ ಟೀಸರ್​ ಲಾಂಚ್ ಆಗ್ತಿದ್ದು, ಅದಕ್ಕೂ ಮುಂಚೆ ಮೋಷನ್ ಪೋಸ್ಟರ್​ ಬಿಡುಗಡೆ ಮಾಡಿ ಕುತೂಹಲ ಹೆಚ್ಚಿಸಿದೆ. ಅಂದ್ಹಾಗೆ, ಈ ಚಿತ್ರವನ್ನ ಖುದ್ದು ದುಲ್ಕರ್ ಸಲ್ಮಾನ್ ನಿರ್ಮಾಣ ಮಾಡ್ತಿದ್ದು, ಅಭಿಲಾಷ್ ಜೋಶಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡ್ತಾ ಇದ್ದಾರೆ. ಇನ್ನುಳಿದಂತೆ ಐಶ್ವರ್ಯ ಮೆನನ್ ನಾಯಕಿಯಾಗಿದ್ದು, ಮಲಯಾಳಂ ಜೊತೆ ಕನ್ನಡ, ತೆಲುಗು, ತಮಿಳಿನಲ್ಲೂ ಸಿನಿಮಾ ರಿಲೀಸ್ ಆಗಲಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮತ್ತೆ ಆಸ್ಪತ್ರೆಗೆ ದಾಖಲಾದ ನಟಿ ಖುಷ್ಬೂ ಸುಂದರ್; ಇಲ್ಲಿವೆ ಟಾಪ್​​ 5 ಸಿನಿಮಾ ಸುದ್ದಿಗಳು!

https://newsfirstlive.com/wp-content/uploads/2023/06/Khusbu-Sundar.jpg

Load More