ರಜನಿಕಾಂತ್ ನಟನೆಯ 'ಜೈಲರ್' ಚಿತ್ರದ ಹೊಸ ಸಾಂಗ್ ರಿಲೀಸ್..!
ಕಿಸ್ ಬೆಡಗಿ ಶ್ರೀಲೀಲಾಗೆ ಟಾಲಿವುಡ್ನಲ್ಲಿ ಮತ್ತೊಂದು ಬಿಗ್ ಆಫರ್
'ಗೇಮ್ ಚೇಂಜರ್' ಚಿತ್ರದ ಹಾಡಿಗೆ 90 ಕೋಟಿ ಖರ್ಚು ಮಾಡ್ತಾರಾ!
‘ಜೈಲರ್’ ಎಮೋಷನಲ್ ಸಾಂಗ್
ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರದ ಹೊಸ ಸಾಂಗ್ ರಿಲೀಸ್ ಆಗಿದೆ. ಈಗಾಗಲೇ ಕಾವಾಲಯ್ಯ ಹಾಗೂ ಹುಕಂ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಜೈಲರ್ ಈಗ ಎಮೋಷನಲ್ ಸಾಂಗ್ ಬಿಟ್ಟು ಪ್ರೇಕ್ಷಕರನ್ನ ಸೆಳೆಯುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ ಸಿನಿಮಾ ಆಗಸ್ಟ್ 10ಕ್ಕೆ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ.
ಮೆಗಾಸ್ಟಾರ್ ಚಿತ್ರದಲ್ಲಿ ಶ್ರೀಲೀಲಾ!
ನಟಿ ಶ್ರೀಲೀಲಾಗೆ ಟಾಲಿವುಡ್ನಲ್ಲಿ ಮತ್ತೊಂದು ಬಿಗ್ ಆಫರ್ ಬಂದಿದೆ. ಮೆಗಾಸ್ಟಾರ್ ಚಿರಂಜೀವಿ ಮತ್ತು ತ್ರಿಷಾ ನಟಿಸಲಿರುವ ಹೊಸ ಚಿತ್ರದಲ್ಲಿ ಶ್ರೀಲೀಲಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ. ಮಲಯಾಳಂನ ‘ಬ್ರೋ ಡ್ಯಾಡಿ’ ಚಿತ್ರವನ್ನ ತೆಲುಗಿಗೆ ರಿಮೇಕ್ ಮಾಡುತ್ತಿದ್ದು, ಶರ್ವಾನಂದ್ಗೆ ಜೋಡಿಯಾಗಿ ಶ್ರೀಲೀಲಾ ನಟಿಸುವ ಸಾಧ್ಯತೆ ಇದೆಯಂತೆ.
ಮಗಳ ಆರೋಗ್ಯ ನೆನೆದ ಕಣ್ಣೀರಿಟ್ಟ ಬಿಪಾಶಾ ಬಸು!
ಬಾಲಿವುಡ್ ನಟಿ ಬಿಪಾಶಾ ಬಸು ಕಳೆದ ವರ್ಷ ನವೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಜನಿಸಿದ ಮೂರನೇ ದಿನಕ್ಕೆ ಮಗಳ ಹಾರ್ಟ್‌ನಲ್ಲಿ ರಂಧ್ರವಿರುವ ವಿಚಾರದ ಗೊತ್ತಾಗಿತ್ತಂತೆ. ಸರಿ ಆಗಬಹುದು ಎಂದು ಕಾದರೂ ಆಗಲಿಲ್ಲವಂತೆ. ಆನಂತರ ಮೂರು ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ತುಂಬಾ ಕಷ್ಟ ಅಂತ ಗೊತ್ತಿದ್ದರೂ ಕೊನೆಗೆ ಒಪ್ಪಿಕೊಳ್ಳಬೇಕಾಯಿತಂತೆ. ಸದ್ಯ ವೈದ್ಯರು ಓಪನ್ ಹಾರ್ಟ್ ಸರ್ಜರಿ ಮಾಡಿದ್ದು, ಮಗು ಆರಾಮಾಗಿದೆ ಎಂದು ಭಾವುಕರಾಗಿದ್ದಾರೆ.
ಒಂದು ಹಾಡಿಗೆ 90 ಕೋಟಿ ಖರ್ಚು ಮಾಡ್ತಾರಾ?
ಶಂಕರ್ ಹಾಗೂ ರಾಮ್ ಚರಣ್ ಕಾಂಬಿನೇಷನ್ನಲ್ಲಿ ಮೂಡಿಬರ್ತಿರುವ ‘ಗೇಮ್ ಚೇಂಜರ್’ ಸಿನಿಮಾದ ಹಾಡೊಂದಕ್ಕೆ ಬರೋಬ್ಬರಿ 90 ಕೋಟಿ ಖರ್ಚು ಮಾಡುವ ಯೋಜನೆ ಹಾಕಿಕೊಂಡಿದ್ದಾರಂತೆ. ಈ ಮುಂಚೆ ‘ತ್ರಿಬಲ್ ಆರ್’ ಚಿತ್ರದ ‘ನಾಟು ನಾಟು’ ಹಾಡಿಗೆ ಹೆಚ್ಚು ಖರ್ಚು ಮಾಡಿದ್ದರು. ಆದ್ರೀಗ ‘ಗೇಮ್ ಚೇಂಜರ್’ ಸಿನಿಮಾದ ಹಾಡಿಗೆ ಭಾರಿ ಪ್ಲಾನ್ ಮಾಡಿದ್ದು, ಇದು ಅಚ್ಚರಿ ಮೂಡಿಸಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ