newsfirstkannada.com

WATCH: ಮದುವೆಗೆ ಮುನ್ನವೇ ಹರ್ಷಿಕಾ ಪೂಣಚ್ಚಗೆ ಸಿಕ್ತು ಸರ್ಪ್ರೈಸ್ ಗಿಫ್ಟ್; ಸ್ಟಾರ್‌ ಜೋಡಿಗೆ ಜಯಮಾಲಾ ಸ್ಪೆಷಲ್ ವಿಶ್‌

Share :

20-08-2023

  ಹರ್ಷಿಕಾ ಪೂಣಚ್ಚಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ನಟಿ ಜಯಮಾಲಾ

  ಸ್ಯಾಂಡಲ್​​ವುಡ್​​​ ಸ್ಟಾರ್​​ ಜೋಡಿ ಮದುವೆಗೆ ತಯಾರಿ ಭರ್ಜರಿ

  ಕೊಡವ ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ಅದ್ಧೂರಿ ಕಲ್ಯಾಣ

ಬೆಂಗಳೂರು: ಸ್ಯಾಂಡಲ್​​ವುಡ್​ನಲ್ಲಿ ಮತ್ತೊಂದು ಸ್ಟಾರ್‌ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ. ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಈಗ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ನಟಿ ಹರ್ಷಿಕಾ ಪೂಣಚ್ಚಗೆ ಸರ್ಪ್ರೈಸ್ ಗಿಫ್ಟ್​​ವೊಂದು ಸಿಕ್ಕಿದೆ. ಹಿರಿಯ ನಟಿ ಜಯಮಾಲಾ ಅವರು ಹರ್ಷಿಕಾಗೆ ಚಿನ್ನದ ಓಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನು ಓದಿ: ಸದ್ಯದಲ್ಲೇ ಭುವನ್​​, ಹರ್ಷಿಕಾ ಪೂಣಚ್ಚ ಮದುವೆ; ಇಬ್ಬರಲ್ಲಿ ಯಾರು ಫಸ್ಟ್​ ಪ್ರಪೋಸ್​ ಮಾಡಿದ್ದು..​​?

ನಟ ಭುವನ್​ ಹಾಗೂ ಹರ್ಷಿಕಾಗೆ ಮದುವೆಗೂ ಮುನ್ನ ಚಿನ್ನದ ಉಡುಗೊರೆ ಕೊಟ್ಟು ಜಯಮಾಲಾ ಅವರು ಸರ್ಪ್ರೈಸ್ ಗಿಫ್ಟ್​​ ನೀಡಿದ್ದಾರೆ. ಇದರ ಜೊತೆಗೆ ಜಯಮಾಲಾ ಅವರು ತಾವೇ ತಮ್ಮ ಕೈಯಾರೆ ನಟಿ ಹರ್ಷಿಕಾಗೆ ಕಿವಿಯೋಲೆ ಹಾಕಿ ಖುಷಿಪಟ್ಟಿದ್ದಾರೆ. ಇನ್ನು, ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ಇವರಿಬ್ಬರ ವಿವಾಹ ಮಹೋತ್ಸವ ನಡೆಯಲಿದೆ. ಸ್ಟಾರ್ ಜೋಡಿಯ ಕಲ್ಯಾಣಕ್ಕೆ ಈಗಾಗಲೇ ಸಾಕಷ್ಟು ಸಿದ್ದತೆಗಳನ್ನು ಮಾಡಲಾಗುತ್ತಿದೆ. ಕೊಡವ ಶೈಲಿಯಲ್ಲಿ ನಟ ಭುವನ್ ಹಾಗೂ ನಟಿ ಹರ್ಷಿಕಾ ಮದುವೆಯಾಗುತ್ತಿದ್ದು ವಿರಾಜಪೇಟೆಯ ‘ಅಮ್ಮತಿ ಕೊಡವ ಸಮಾಜ’ ಅಲಂಕೃತಗೊಳ್ಳಲಿದೆ.

ಈಗಾಗಲೇ ಬ್ಯಾಚುಲರ್ ಪಾರ್ಟಿ ಮುಗಿಸಿಕೊಂಡ ಈ ಜೋಡಿ ಇತ್ತೀಚೆಗಷ್ಟೇ ಹಲವು ಸಿನಿಮಾ ಹಾಗೂ ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ಗಣ್ಯರನ್ನು ಮದುವೆಗೆ ಆಹ್ವಾನಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಮದುವೆಗೆ ಮುನ್ನವೇ ಹರ್ಷಿಕಾ ಪೂಣಚ್ಚಗೆ ಸಿಕ್ತು ಸರ್ಪ್ರೈಸ್ ಗಿಫ್ಟ್; ಸ್ಟಾರ್‌ ಜೋಡಿಗೆ ಜಯಮಾಲಾ ಸ್ಪೆಷಲ್ ವಿಶ್‌

https://newsfirstlive.com/wp-content/uploads/2023/08/ring.jpg

Load More