newsfirstkannada.com

ಕೊರಗಜ್ಜನ ಪವಾಡ.. ಕಟ್ಟಿಕೊಂಡ ಹರಕೆ ತೀರಿಸಿದ ನಟಿ ಮಾಲಾಶ್ರೀ

Share :

10-08-2023

    ಕೊರಗಜ್ಜನ ಆದಿ‌ ಸ್ಥಳಕ್ಕೆ ಭೇಟಿ ನೀಡಿದ ಮಾಲಾಶ್ರೀ

    ಮೂರೇ ತಿಂಗಳಲ್ಲಿ ಬೇಡಿಕೆ ಈಡೇರಿಸಿದ ಕೊರಗಜ್ಜ

    ಹರಕೆ ತೀರಿಸಿ ಕೊರಗಜ್ಜನ ಆಶೀರ್ವಾದ ಪಡೆದ ನಟಿ

ಕೊರಗಜ್ಜನ ಭಕ್ತರು ಕೇವಲ ತುಳುನಾಡಿಗೆ ಮಾತ್ರ ಸೀಮಿತವಾಗಿಲ್ಲ, ರಾಜ್ಯದ ನಾನಾ ಭಾಗಗಳಿಂದ ಜನ ಕೊರಗಜ್ಜನ ಆದಿ‌ ಸ್ಥಳಕ್ಕೆ ಭೇಟಿ‌ ನೀಡುತ್ತಿದ್ದಾರೆ. ನಿನ್ನೆ ಖ್ಯಾತ ನಟಿ ಮಾಲಾಶ್ರೀ ಸಹ ಮಂಗಳೂರಿನ‌ ಕುತ್ತಾರುವಿನಲ್ಲಿರುವ ಕೊರಗಜ್ಜನ ಆದಿ‌ ಸ್ಥಳಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.

ನಟಿ ಮಾಲಾಶ್ರೀ ಕುಟುಂಬ
ನಟಿ ಮಾಲಾಶ್ರೀ ಕುಟುಂಬ

ಮೂರೇ ತಿಂಗಳಲ್ಲಿ ಬೇಡಿಕೆ ಈಡೇರಿಸಿದ ಕೊರಗಜ್ಜನ ಕುತ್ತಾರು ಆದಿಸ್ಥಳಕ್ಕೆ ಬಂದು ಮಾಲಾಶ್ರೀ ಹರಕೆ ತೀರಿಸಿದ್ದಾರೆ. ಮಾಲಾಶ್ರೀ ಜೊತೆ ಅವರ ಪುತ್ರಿ ಅನನ್ಯಾ ಸಹ ಭೇಟಿ ನೀಡಿ ಹರಕೆ ತೀರಿಸಿದ್ದಾರೆ‌. ಈ ವೇಳೆ ಮಾತನಾಡಿ ಮಾಲಾಶ್ರೀ, ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆವು. ಎಲ್ಲವೂ ಅಂದುಕೊಂಡಂತೆ ನಡೆದಿದೆ. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ. ಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ. ಮುಂದೆಯೂ ಬರುತ್ತೇನೆ ಎಂದು ಹೇಳಿದರು.

ಈ ಸಂದರ್ಭ ಶ್ರೀಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಸಮಿತಿಯ ಟ್ರಸ್ಟಿಗಳು ನಟಿ ಮಾಲಾಶ್ರೀ ಹಾಗೂ ಪುತ್ರಿಯನ್ನು ಸನ್ಮಾನಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊರಗಜ್ಜನ ಪವಾಡ.. ಕಟ್ಟಿಕೊಂಡ ಹರಕೆ ತೀರಿಸಿದ ನಟಿ ಮಾಲಾಶ್ರೀ

https://newsfirstlive.com/wp-content/uploads/2023/08/Malashree-1.jpg

Load More