newsfirstkannada.com

×

ನಟಿ ನಯನಾ ತಾರಾದ್ದು ಒರಿಜಿನಲ್​​ ಫೇಸ್​ ಅಲ್ವಾ? ಪ್ಲಾಸ್ಟಿಕ್​ ಸರ್ಜರಿ ಮಾಡಿಸಿದ್ರಾ?

Share :

Published October 28, 2024 at 9:07pm

Update October 28, 2024 at 9:08pm

    ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರಾ ಸ್ಟಾರ್ ನಟಿ ನಯನತಾರಾ

    ಊಹಾಪೋಹಗಳಿಗೆ ತೆರೆ ಎಳೆದ ದಕ್ಷಿಣ ಭಾರತದ ಪ್ರಸಿದ್ಧ ನಟಿ

    ನನ್ನ ದೇಹದ ತೂಕದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ ಆದರೆ..!

ಲೇಡಿ ಸೂಪರ್‌ಸ್ಟಾರ್ ನಯನತಾರಾ ದಕ್ಷಿಣ ಭಾರತದ ಪ್ರಸಿದ್ಧ ನಟಿ. ಆದರೆ ಸ್ಟಾರ್​ ನಟಿಯ ಬಗ್ಗೆ ಕೆಲವೊಂದು ಆರೋಪಗಳು ಕೇಳಿ ಬಂದಿವೆ. ನಟಿ ನಯನತಾರಾ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾರೆ ಅಂತ ಊಹಾಪೋಹಗಳು ಹರಿದಾಡುತ್ತಿದ್ದವು. ಆದರೆ ಇದೀಗ ಆ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: BBK11: ಬಿಗ್​ಬಾಸ್​ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಐಶ್ವರ್ಯಾ.. ಆ ತಪ್ಪು ಮಾಡಬಾರದಿತ್ತು ಅಂತ ಹೇಳಿದ್ದೇಕೆ?

ಇತ್ತೀಚೆಗೆ ಅಟ್ಲಿ ನಿರ್ದೇಶನದ ಜವಾನ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಈ ಹಿಂದೆ ನಟಿ ನಯನತಾರಾ ಅವರು ಅವರು ಚೆನ್ನಾಗಿ ಮತ್ತು ಬೆಳ್ಳಗೆ ಕಾಣಲು ಸರ್ಜರಿ ಮಾಡಿಸಿದ್ದಾರೆ ಎನ್ನಲಾದ ಟೀಕೆಗಳು ಎದುರಾಗಿತ್ತು. ಅದಕ್ಕೆ ನಟಿ ಸಂದರ್ಶನದಲ್ಲಿ ತಕ್ಕ ಉತ್ತರ ಕೊಟ್ಟಿದ್ದಾರೆ. ನಾನು ಪ್ರತಿಯೊಂದು ಕಾರ್ಯಕ್ರಮಕ್ಕೆ ಹೋಗುವ ಮುನ್ನ ನಾನು ನನ್ನ ಹುಬ್ಬುಗಳನ್ನು ಶೇಪ್ ಮಾಡಿಸುತ್ತೇನೆ. ನನ್ನ ಮುಖ ಬದಲಾದಂತೆ ಕಾಣಲು ಇದೇ ಕಾರಣ ಎನ್ನುವುದು ನನ್ನ ಭಾವನೆ ಎಂದಿದ್ದಾರೆ. ಹುಬ್ಬುಗಳನ್ನು ಶೇಪ್ ಮಾಡಿಸುವುದರಿಂದ ನನ್ನ ಮುಖದಲ್ಲಿನ ಬದಲಾವಣೆಯನ್ನು ನೋಡಿ ಅನೇಕರು ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಅಂದುಕೊಂಡಿದ್ದಾರೆ. ಅದು ಸುಳ್ಳು ಎಂದಿದ್ದಾರೆ.

ನಾನು ಡಯಟ್ ಮಾಡುತ್ತೇನೆ ಆ ಕಾರಣಕ್ಕೆ ನನ್ನ ದೇಹದ ತೂಕದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಇದರಿಂದ ನನ್ನ ಕೆನ್ನೆ ಕೆಲ ಒಮ್ಮೆ ಒಳಗೆ ಹೋದಂತೆ ಕಾಣುತ್ತದೆ. ಇನ್ನೂ ಕೆಲವೊಮ್ಮೆ ಕೆನ್ನೆ ಊದಿಕೊಂಡಂತೆ ಕಾಣಿಸುತ್ತೆ ಎಂದಿದ್ದಾರೆ. ಬೇಕಿದ್ದರೆ ನೀವು ನನ್ನನ್ನು ಮುಟ್ಟಿ ನೋಡಬಹುದು, ಸಮಾಧಾನ ಆಗದಿದ್ದರೆ ಸುಟ್ಟು ನೋಡಬಹುದು. ಆಗ ನಿಮಗೆ ಯಾವ ಪ್ಲಾಸ್ಟಿಕ್ ಇಲ್ಲ ಎನ್ನುವುದು ಗೊತ್ತಾಗುತ್ತದೆ ಸ್ಪಷ್ಟನೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟಿ ನಯನಾ ತಾರಾದ್ದು ಒರಿಜಿನಲ್​​ ಫೇಸ್​ ಅಲ್ವಾ? ಪ್ಲಾಸ್ಟಿಕ್​ ಸರ್ಜರಿ ಮಾಡಿಸಿದ್ರಾ?

https://newsfirstlive.com/wp-content/uploads/2024/10/nayanatara.jpg

Load More