newsfirstkannada.com

ಬೇಬಿ ಬಂಪ್ ಲುಕ್​​ನಲ್ಲಿ ಕನ್ನಡದ ಗೊಂಬೆ; ನೇಹಾ ಗೌಡ ಕ್ಯೂಟ್​ ಫೋಟೋ ವೈರಲ್

Share :

Published July 8, 2024 at 5:23pm

    ಕೂರ್ಗ್​ನ ಗಾರ್ಡನ್​ನಲ್ಲಿ ಗೆಳತಿಯರು ಜೊತೆ ಫೋಟೋಗೆ ಪೋಸ್​​

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ನಟಿಯ ಫೋಟೋಸ್​

    2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನೇಹಾ ಹಾಗೂ ಚಂದನ ಗೌಡ

ಕನ್ನಡ ಕಿರುತೆರೆಯಲ್ಲಿ ಗೊಂಬೆ, ಬಿಗ್​ಬಾಸ್​ ಬೆಡಗಿ ನೇಹಾ ಗೌಡ ಮನೆಯಲ್ಲಿ ಸಂತಸ ಮನೆ ಮಾಡಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಕನ್ನಡಿಗರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರೋ ನೇಹಾ ಗೌಡ ದಂಪತಿ ಜೂನ್​ 1ರಂದು ಅಭಿಮಾನಿಗಳಿಗೆ ಗುಡ್​ ನ್ಯೂಸ್ ಕೊಟ್ಟಿದ್ದರು.

ಇದನ್ನೂ ಓದಿ: ದರ್ಶನ್ ಮಾಸ್ ಹೀರೋ.. ಜನ ಥಿಯೇಟರ್​ಗೆ ಬಂದೇ ಬರ್ತಾರೆ -ಬೇರೆಯದ್ದೇ ಇದೆ ಶಾಸ್ತ್ರಿ ರೀ-ರಿಲೀಸ್ ಲೆಕ್ಕಾಚಾರ..!

ಮದುವೆಯಾಗಿ 6 ವರ್ಷಗಳ ಬಳಿಕ ನೇಹಾ ಹಾಗೂ ಚಂದನ್‌ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ನೇಹಾ ಗೌಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬ್ಯೂಟಿಫುಲ್​ ಬೇಬಿ ಬಂಪ್​ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನೇಹಾ ಗೌಡ ಬೇಬಿ ಬಂಪ್ ಕಾಣಿಸುತ್ತಿದೆ.

ಈ ಫೋಟೋವನ್ನು ಶೇರ್ ಮಾಡಿಕೊಂಡ ನಟಿ ಪ್ರಕೃತಿಯ ಪ್ರಶಾಂತತೆಯಿಂದ ಸುತ್ತುವರೆದಿರುವ ಕೂರ್ಗ್‌ನಲ್ಲಿ ವಿಶ್ರಾಂತಿಯ ವಿಹಾರವನ್ನು ಆನಂದಿಸುತ್ತಿದ್ದೇವೆ. ಅದನ್ನು ಸುಲಭವಾಗಿ ತೆಗೆದುಕೊಳ್ಳುವುದು, ಶಾಂತತೆಯನ್ನು ನೆನೆಯುವುದು ಮತ್ತು ಈ ವಿಶೇಷ ಸಮಯದ ಪ್ರತಿ ಕ್ಷಣವನ್ನು ಸವಿಯುವುದು ಎಂದು ಬರೆದುಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

View this post on Instagram

A post shared by Neha Ramakrishna (@neharamakrishna)

ಇದೇ ಫೋಟೋಗಳನ್ನು ನೋಡಿದ ನೆಟ್ಟಿಗರು, ನಮ್ಮ ನೇಹಾ ಅಕ್ಕ, ಕ್ಯೂಟ್​ ಬೇಬಿ ಬಂಪ್​ ಅಂತಾ ಕಾಮೆಂಟ್​ ಮಾಡಿದ್ದಾರೆ. ನೇಹಾ ಗೌಡ ಅವರು ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಗೊಂಬೆ ಪಾತ್ರದಲ್ಲಿ ಅಭಿನಯಿಸಿದವರು. ಗೊಂಬೆ ಪಾತ್ರದ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ನಟಿ ನೇಹಾ ಗೌಡ ಹಾಗೂ ಚಂದನ್​ ಗೌಡ ಫೆಬ್ರವರಿ 18, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಮದುವೆಯಾಗಿ 6 ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೇಬಿ ಬಂಪ್ ಲುಕ್​​ನಲ್ಲಿ ಕನ್ನಡದ ಗೊಂಬೆ; ನೇಹಾ ಗೌಡ ಕ್ಯೂಟ್​ ಫೋಟೋ ವೈರಲ್

https://newsfirstlive.com/wp-content/uploads/2024/07/neha-gowda.jpg

Load More