newsfirstkannada.com

ಇನ್ಮೇಲೆ ಕರ್ನಾಟಕದ ಭವಿಷ್ಯ ಚೆನ್ನಾಗಿರುತ್ತೆ, ಶಾಂತಿಯುತ ಸರ್ಕಾರ ನಡೆಸ್ತಾರೆ: ಸಿದ್ದರಾಮಯ್ಯ ಮೇಲೆ ನಿಶ್ವಿಕಾ ನಾಯ್ಡು ವಿಶ್ವಾಸ

Share :

20-05-2023

    ರಾಜ್ಯದಲ್ಲಿ ಇನ್ಮುಂದೆ ಶಾಂತಿ, ಶಾಂತಿ, ಶಾಂತಿ

    ಸಿದ್ದು ಸಿಎಂ ಆಗೋದು ನನಗೆ ತುಂಬಾ ಖುಷಿ

    ಹೊಸ ಸರ್ಕಾರದ ಮೇಲೆ ನಿಶ್ವಿಕಾ ನಾಯ್ಡು ವಿಶ್ವಾಸ

ಬೆಂಗಳೂರು: ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಶಾಂತಿಯುತವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಾರೆ ಎಂದು ನಟಿ ನಿಶ್ವಿಕಾ ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ. ಇದೇ ಖುಷಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ನಿಶ್ವಿಕಾ ನಾಯ್ಡು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರೋದು ನನಗೆ ತುಂಬಾ ಖುಷಿ ಇದೆ. ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ. ರಾಜ್ಯವು ಇನ್ನಷ್ಟು ಅಭಿವೃದ್ಧಿ ಆಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಮಾತ್ರವಲ್ಲ ಶಾಂತಿಯುತವಾಗಿ ಆಡಳಿತ ನಡೆಸಿಕೊಂಡು ಹೋಗಲಿದ್ದಾರೆ. ಶಾಂತಿಯುತವಾಗಿ ಅಧಿಕಾರ ನಡೆಸೋದು ತುಂಬಾನೇ ಮುಖ್ಯ. ಇನ್ಮೇಲೆ ಯಾವುದೇ ಗಲಾಟೆಗಳು ನಡೆಯುವುದಿಲ್ಲ. ಇಡೀ ಕರ್ನಾಟಕ ಅಭಿವೃದ್ಧಿಯಾದರೆ ಆಗಷ್ಟೇ ನಮಗೆ ಖುಷಿ. ನಾನು ಸಿದ್ದರಾಮಯ್ಯ ಪರ ಮೂರು ದಿನ ವರುಣಾದಲ್ಲಿ ಪ್ರಚಾರ ಮಾಡಿದ್ದೆ. ನಮ್ಮ ಅಪ್ಪಾಜಿ ಮೇಲೆ ಇಟ್ಟಿರುವ ಪ್ರೀತಿ ನೋಡಿ ನನಗೆ ತುಂಬಾ ಖುಷಿ ಆಯಿತು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಮಹಿಳೆಯರು, ಹಿಂದೂಳಿದ ವರ್ಗಗಳಿಗೆ ಅನುಕೂಲ ಆಗಲಿದೆ ಎಂದರು.

ಇನ್ಮೇಲೆ ಕರ್ನಾಟಕದ ಭವಿಷ್ಯ ಚೆನ್ನಾಗಿರುತ್ತೆ, ಶಾಂತಿಯುತ ಸರ್ಕಾರ ನಡೆಸ್ತಾರೆ: ಸಿದ್ದರಾಮಯ್ಯ ಮೇಲೆ ನಿಶ್ವಿಕಾ ನಾಯ್ಡು ವಿಶ್ವಾಸ

https://newsfirstlive.com/wp-content/uploads/2023/05/SIDDARAMAIAH-7.jpg

Load More