ಎರಡನೇ ಮಗುವಿನ ಬೇಬಿ ಬಂಪ್ ಎಂಜಾಯ್ ಮಾಡಿದ್ದ ಕ್ಯೂಟ್ ನಟಿ
ಪೊರ್ಕಿ ಸಿನಿಮಾದ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದ ಪ್ರಣಿತಾ ಸುಭಾಷ್
ಇನ್ಸ್ಟಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುತ್ತಾರೆ ಬಹುಭಾಷಾ ನಟಿ ಪ್ರಣಿತಾ
ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಅವರ ಮನೆಯಲ್ಲಿ ಸಂಭ್ರಮ ಮೊಳಗಿದೆ. ನಟಿ ಪ್ರಣಿತಾ ಸುಭಾಷ್ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸಿನಿಮಾಗಳಿಗೆ ಬ್ರೇಕ್ ನೀಡಿ, ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದ, ಜೊತೆಗೆ ಬೇಬಿ ಬಂಪ್ ಎಂಜಾಯ್ ಮಾಡುತ್ತಿದ್ದ ನಟಿ ತಮ್ಮ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ.
ನಟಿ ಪ್ರಣಿತಾ ಸುಭಾಷ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ ಮಗು ಕೂಡ ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ನಿನ್ನೆಯಷ್ಟೇ ನಟಿ ಪ್ರಣಿತಾ ಸುಭಾಷ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೊನೆಯ ಬೇಬಿ ಬಂಪ್ ಚಿತ್ರ ಅಂತ ಶೇರ್ ಮಾಡಿಕೊಂಡಿದ್ದರು. 2022 ಮೇ 30 ನಟಿ ಪ್ರಣಿತಾ ಸುಭಾಷ್ ಅವರು ನಿತಿನ್ ರಾಜು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದನ್ನೂ ಓದಿ: ಇದು ಸಂತೂರ್ ಮಮ್ಮಿಯ ಹೊಸ ಅವತಾರ.. ನಟಿ ಪ್ರಣೀತಾ ಬಾತ್ ಟಬ್ ವಿಡಿಯೋ ವೈರಲ್!
ಆಗಾಗ ಮಗಳು ಅರ್ನಾ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದ ಫೋಟೋಗಳನ್ನು ನಟಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಸದ್ಯ ನಟಿಗೆ ಗಂಡು ಮಗುವಾಗಿರುವ ವಿಚಾರ ಕೇಳಿದ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಕನ್ನಡ ಮಾತ್ರವಲ್ಲ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಪ್ರಣಿತಾ ಆ್ಯಕ್ಟಿಂಗ್ ಮಾಡಿದ್ದಾರೆ. ಈಗ ಸಿನಿಮಾ ರಂಗದಿಂದ ದೂರು ಉಳಿದು ಕುಟುಂಬದ ಜೊತೆ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ.
ತಮ್ಮ ಮಗಳಾದ ಆರ್ನಾ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಮತ್ತೊಂದು ಮಗುವನ್ನು ಬರಮಾಡಿಕೊಂಡ ಸುಂದರ ಕ್ಷಣವನ್ನು ಅನುಭವಿಸುತ್ತಿದ್ದಾರೆ. ಪ್ರಣಿತಾ ಅವರು ಯಾವಾಗಲೂ ಇನ್ಸ್ಟಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುತ್ತಾರೆ. ಹೀಗಾಗಿಯೇ ತಮ್ಮ ಹೊಸ ಹೊಸ ಫೋಟೋಗಳನ್ನು, ಕೆಲವೊಂದು ಅಪ್ಡೇಟ್ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ