newsfirstkannada.com

ಮೋಹಕ ತಾರೆ ಸಾವಿನ ಬಗ್ಗೆ ವದಂತಿ; ನಟಿ ರಮ್ಯಾ ಈಗ ಎಲ್ಲಿದ್ದಾರೆ? ಜೊತೆಗಿರೋ ಸ್ನೇಹಿತೆ ಹೇಳಿದ್ದೇನು?

Share :

06-09-2023

    ಸ್ಯಾಂಡಲ್​ವುಡ್​ ಕ್ವೀನ್​ ಬಗ್ಗೆ ಹರಿದಾಡುತ್ತಿದೆ ಫೇಕ್​ ಸುದ್ದಿ

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ನಟಿ ರಮ್ಯಾ ಸಾವಿನ ಬಗ್ಗೆ ವದಂತಿ

    ನಟಿ ರಮ್ಯಾ ಬಗ್ಗೆ ಸ್ಪಷ್ಟನೆ ಕೊಟ್ಟ ಖ್ಯಾತ ಪತ್ರಕರ್ತೆ; ಏನಂದ್ರು ಗೊತ್ತಾ?

ಸ್ಯಾಂಡಲ್​ವುಡ್​​ ನಟಿ ರಮ್ಯಾ ಬಗ್ಗೆ ವದಂತಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನಟಿ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸಾಕಷ್ಟು ಜನರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದಿವ್ಯಾ ಸ್ಪಂದನಾ ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ.

‘X’​ನಲ್ಲಿ ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ಅವರು ‘ಅತ್ಯಂತ ಪ್ರತಿಭಾವಂತ ಮತ್ತು ಸೌಮ್ಯ ಸ್ವಭಾವದ ಮಹಿಳೆ ದಿವ್ಯಾ ಸ್ಪಂದನಾ ಅವರನ್ನು ಜಿನೀವಾದಲ್ಲಿ ಭೇಟಿ ಮಾಡಿದ್ದೇನೆ. ಬೆಂಗಳೂರು ಮೇಲಿನ ಪ್ರೀತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದೆವು’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಇಬ್ಬರು ಊಟಕ್ಕೆ ಕುಳಿತ ಫೋಟೋವನ್ನು ಹಂಚಿಕೊಂಡಿದ್ದಾರೆ.

Image

ಬಳಿಕ ಮತ್ತೊಂದು ಟ್ವೀಟ್​ ಮಾಡಿದ ಚಿತ್ರಾ ಸುಬ್ರಮಣ್ಯಂ ‘ನಾನು ಈಗಷ್ಟೇ ರಮ್ಯಾ ಜೊತೆಗೆ ಮಾತನಾಡಿದೆ ಚೆನ್ನಾಗಿಯೇ ಇದ್ದಾರೆ. ಜೀನೀವಾದಿಂದ ಪ್ರೇಗ್ ಗೆ ನಾಳೆ ಹೋಗುತ್ತಿದ್ದಾರೆ, ಬಳಿಕ ಬೆಂಗಳೂರಿಗೆ ತೆರಳುತ್ತಾರೆ’ ಎಂದು ಬರೆದುಕೊಂಡಿದ್ದಾರೆ.

ಸದ್ಯ ರಮ್ಯಾ ವಿದೇಶದಲ್ಲಿದ್ದು, ಸದ್ಯದಲ್ಲೇ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಉತ್ತರಾಕಾಂಡ ಸಿನಿಮಾದಲ್ಲೂ ನಟಿ ಬಣ್ಣ ಹಚ್ಚುತ್ತಿದ್ದು, ಸಿನಿಮಾ ತಂಡವನ್ನು ಸೇರಲಿದ್ದಾರೆ.

ಇವಿಷ್ಟು ಮಾತ್ರವಲ್ಲದೆ ಮೋಹಕ ತಾರೆ ರಮ್ಯಾ ಕೇಂದ್ರ ಸರ್ಕಾರ ಇಂಡಿಯಾ ಹೆಸರು ಮರುನಾಮಕರಣದ ವಿಚಾರವಾಗಿಯೂ ಟ್ವೀಟ್​ ಮಾಡಿದ್ದಾರೆ. ಟ್ವೀಟ್​ನಲ್ಲಿ ‘ಹೆಸರಲ್ಲೇನಿದೆ? ಬಹಳಷ್ಟು, ಸ್ಪಷ್ಟವಾಗಿ’ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋಹಕ ತಾರೆ ಸಾವಿನ ಬಗ್ಗೆ ವದಂತಿ; ನಟಿ ರಮ್ಯಾ ಈಗ ಎಲ್ಲಿದ್ದಾರೆ? ಜೊತೆಗಿರೋ ಸ್ನೇಹಿತೆ ಹೇಳಿದ್ದೇನು?

https://newsfirstlive.com/wp-content/uploads/2023/09/Ramya-1.jpg

Load More