newsfirstkannada.com

‘ನನ್ನ, ಸೂರ್ಯ ಮಧ್ಯೆ ಆ ಇಂಟೆನ್ಸ್​​ ಇತ್ತು, ಗೌತಮ್​ ಮ್ಯಾಜಿಕ್​ ಮಾಡಿದ್ರು- ನಟಿ ರಮ್ಯಾ

Share :

16-07-2023

  ತಮಿಳು ಸಿನಿಮಾ ನೆನೆದ ಸ್ಯಾಂಡಲ್​ವುಡ್​ ಕ್ವೀನ್​​

  ಸೂರ್ಯ ಜತೆಗೆ ನಟಿಸಿದ್ದ ಮೋಹಕ ತಾರೆ ರಮ್ಯಾ

  ಸೂರ್ಯ ಸನ್ ಆಫ್​ ಕೃಷ್ಣಮೂರ್ತಿ ಬಗ್ಗೆ ಟ್ವೀಟ್​​​

ಹಲವು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದ ಸ್ಯಾಂಡಲ್​ವುಡ್​ ಕ್ವೀನ್​​ ಮೋಹಕ ತಾರೆ ರಮ್ಯಾ ಮತ್ತೆ ಕಮ್​ಬ್ಯಾಕ್​ ಮಾಡಿದ್ದಾರೆ. ಇತ್ತೀಚೆಗಷ್ಟೇ ‘ಆ್ಯಪಲ್​​ ಬಾಕ್ಸ್ ಸ್ಟುಡಿಯೋಸ್’ ಎಂಬ ನಿರ್ಮಾಣ ಸಂಸ್ಥೆ ಮೂಲಕ ಹೊಸ ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ. ಸದ್ಯ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರೋ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಎಂಬ ಸಿನಿಮಾ ಕೂಡ ರಿಲೀಸ್​ಗೆ ರೆಡಿಯಾಗಿದೆ. ಈ ಮಧ್ಯೆ ತಮಿಳು ನಟ ಸೂರ್ಯ ಜತೆ ನಟಿಸಿದ ಹಳೇ ಸಿನಿಮಾದ ಬಗ್ಗೆ ರಮ್ಯಾ ಭಾವುಕ ಪೋಸ್ಟ್​​ವೊಂದು ಹಾಕಿದ್ದಾರೆ.

ಸೂರ್ಯ ಸನ್ ಆಫ್​ ಕೃಷ್ಣಮೂರ್ತಿ ಸಿನಿಮಾದ ಪೋಸ್ಟರ್​​ ಹಾಕಿ ಟ್ವೀಟ್​ ಮಾಡಿರುವ ರಮ್ಯಾ, ನನಗೆ ಆಗ 22 ವರ್ಷ. ಈ ಚಿತ್ರದಲ್ಲಿ ಕೆಲಸ ಮಾಡುವಾಗ ನಾನು ಎಂದೂ ತೀವ್ರವಾದ ಭಾವನೆಗಳಿಗೆ ಒಳಗಾಗಿದ್ದೆ. ಇದೇ ಸಿನಿಮಾ ಮೂಲಕ ತಾಳ್ಮೆ ಮತ್ತು ಪ್ರೀತಿ ಕಲಿತಿದ್ದೇನೆ ಎಂದರು.

ರಮ್ಯಾ ಪೋಸ್ಟ್​​ನಲ್ಲಿ ಏನಿತ್ತು?

ಸಿನಿಮಾದ ಸಾಂಗ್​​ಗಾಗಿ ದೆಹ್ರಾಡೂನ್​​ಗೆ ಹೋಗಿದ್ದೆವು. ಶೂಟ್​ ಮಾಡಲು ಪರ್ಮೀಷನ್​ ಇರಲಿಲ್ಲ. ಲಾಸ್ಟ್​ ಮಿನಿಟ್​​ಗೆ ನಮಗೆ ಶೂಟ್​ ಮಾಡಲು ಅನುಮತಿ ಸಿಕ್ಕಿದ್ದು. ಕೊರಿಯೋಗ್ರಾಫರ್​ ಇರಲಿಲ್ಲ. ನನ್ನ, ಸೂರ್ಯ ಮಧ್ಯೆ ಇಂಟೆನ್ಸ್​​ ಇತ್ತು. ಇಬ್ಬರ ಮಧ್ಯೆ ಗೌತಮ್​ ಮೆನನ್​ ಮ್ಯಾಜಿಕ್​ ಕ್ರಿಯೇಟ್​ ಮಾಡಿದ್ರು. ಪ್ರಿಯಾ ಪಾತ್ರವನ್ನು ಜನ ಇನ್ನೂ ಮರೆತಿಲ್ಲ. ಇಂದಿಗೂ ಅನೇಕರಿಗೆ ಈ ಸಿನಿಮಾ ಫೇವರಿಟ್ ಆಗಿದೆ ಎಂದು ಮತ್ತೊಂದು ಟ್ವೀಟ್​ ಮಾಡಿದ್ದಾರೆ ರಮ್ಯಾ.

ರಮ್ಯಾ, ಸೂರ್ಯ ಅಭಿನಯದ ಸೂರ್ಯ ಸನ್ ಆಫ್​ ಕೃಷ್ಣಮೂರ್ತಿ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ರಮ್ಯಾಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಈ ಸಿನಿಮಾ ಮೂಲಕ ತಮಿಳುನಲ್ಲಿ ರಮ್ಯಾ ಸಖತ್​​ ಮಿಂಚಿದ್ದರು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

‘ನನ್ನ, ಸೂರ್ಯ ಮಧ್ಯೆ ಆ ಇಂಟೆನ್ಸ್​​ ಇತ್ತು, ಗೌತಮ್​ ಮ್ಯಾಜಿಕ್​ ಮಾಡಿದ್ರು- ನಟಿ ರಮ್ಯಾ

https://newsfirstlive.com/wp-content/uploads/2023/07/Ramya_Surya.jpg

Load More