ಹಾಸ್ಟೆಲ್ ಹುಡುಗರ ಸಿನಿಮಾಗೆ ಸ್ಯಾಂಡಲ್‌ವುಡ್ ಕ್ವೀನ್ ‘ಕಿರಿಕ್’
ನೋಟಿಸ್ ಜಾರಿ ಮಾಡಿ 1 ಕೋಟಿ ರೂ. ಪರಿಹಾರದ ವಾರ್ನಿಂಗ್
ಜು. 21ಕ್ಕೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಿಲೀಸ್
ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇದೇ ಜುಲೈ 21ರಂದು ಭರ್ಜರಿಯಾಗಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಇದೀಗ ಕೊನೇ ಘಳಿಗೆಯಲ್ಲಿ ಚಿತ್ರತಂಡ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಹಲವು ವರ್ಷಗಳ ಗ್ಯಾಪ್ನ ನಂತರ ಹೊಸಬರು ಸೇರಿಕೊಂಡು ನಿರ್ಮಿಸಿದ್ದ ಸಿನಿಮಾದಲ್ಲಿ ನಟಿ ರಮ್ಯಾ ಗೆಸ್ಟ್ ಅಪೀಯರೆನ್ಸ್ ಮಾಡಿದ್ದರು. ಬಹಳ ವರ್ಷಗಳ ನಂತರ ನೆಚ್ಚಿನ ನಟಿಯನ್ನು ನೋಡೋಕೆ ಅಭಿಮಾನಿಗಳು ಖುಷ್ ಆಗಿದ್ದರು.
ಆದರೆ ಇದೀಗ ತನ್ನ ಒಪ್ಪಿಗೆ ಇಲ್ಲದೇ ಯಾವ ದೃಶ್ಯವನ್ನೂ ಬಳಸಬಾರದು ಅಂತಾ ನಟಿ ರಮ್ಯಾ ತಡೆಯಾಜ್ಞೆ ನೋಟಿಸ್ ಕಳಿಸಿದ್ದಾರೆ. ಅನುಮತಿ ಇಲ್ಲದೆ ನನ್ನ ದೃಶ್ಯ ಬಳಸಿದರೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ಈ ಕುರಿತು ಕರ್ಮಷಿಯಲ್ ಕೋರ್ಟ್ನಲ್ಲಿ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಇದು ಈಗ ಚಿತ್ರತಂಡಕ್ಕೆ ದಿಕ್ಕೇ ತೋಚದಂತೆ ಆಗಿದೆ. ಈಗ ಕೊನೆಯ ಕ್ಷಣದಲ್ಲಿ ನಟಿ ರಮ್ಯಾ ಅವರಿಂದ ಲೀಗಲ್ ನೋಟೀಸ್ ಬಂದಿದ್ದರಿಂದ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಆದರೆ ನಟಿ ರಮ್ಯಾ ಅವರ ನಡೆಗೆ ಅಚ್ಚರಿ ಮೂಡಿಸಿದೆ.
ಇಷ್ಟು ದಿನ ಬರೀ ಪ್ರಮೋಷನ್ನಲ್ಲೇ ಕಿಕ್ ಕೊಡುತ್ತಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಈಗ ಥಿಯೇಟರ್ಗೆ ಬರೋಕೆ ಸಜ್ಜಾಗಿ ನಿಂತಿದೆ. ಜುಲೈ 21ಕ್ಕೆ ಬಿಗ್ ಪರದೆ ಮೇಲೆ ಹಾಸ್ಟೆಲ್ ಹೈಕ್ಳ ಹಾವಳಿ ಶುರುವಾಗಲಿದ್ದು, ಸಿನಿಪ್ರೇಕ್ಷಕರ ಕಾತುರನೂ ಜಾಸ್ತಿ ಆಗ್ತಿದೆ. ಮೊದಲ ದಿನದಿಂದಲೂ ಇಲ್ಲಿಯವರೆಗೂ ಹಲವು ಸ್ಟಾರ್ ನಟರು ಹಾಸ್ಟೆಲ್ ಹುಡುಗರಿಗೆ ಸಾಥ್ ಕೊಟ್ಟಿದ್ದಾರೆ. ಅಪ್ಪು ಅವರಿಂದ ಶುರುವಾದ ಈ ಜರ್ನಿ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಮ್ಯಾ, ದಿಗಂತ್, ಧ್ರುವ ಸರ್ಜಾ ಅವರವರೆಗೂ ಸಾಗಿ ಬಂದಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ