ಡೀಪ್‌ಫೇಕ್ ಬಗ್ಗೆ ಸೂಕ್ತ ತನಿಖೆಗೆ ಮುಂದಾದ ದೆಹಲಿ ಪೊಲೀಸ್
ಡೀಪ್‌ಫೇಕ್ ವಿಡಿಯೋ ಮಾಡೋದವರಿಗೆ 3 ವರ್ಷ ಜೈಲು ಶಿಕ್ಷೆ ಸಾಧ್ಯತೆ
ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋದಲ್ಲಿರೋದು ಝರಾ ಪಟೇಲ್
ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಲಿಫ್ಟ್ ಒಳಗೆ ಓಡೋಡಿ ಬರುವ ಝರಾ ಪಟೇಲ್ ವಿಡಿಯೋಗೆ ಡೀಫ್ ಫೇಕ್ ಮಾಡಲಾಗಿತ್ತು. ಕಪ್ಪು ಬಣ್ಣದ ಔಟ್ ಫಿಟ್ ಹಾಕಿರುವ ಡೀಪ್ ಫೇಕ್ ವಿಡಿಯೋ ಫುಲ್ ವೈರಲ್ ಆಗಿ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.
ಕೆಲ ಕಿಡಿಗೇಡಿಗಳು ಡೀಪ್ ಫೇಕ್ ಟೆಕ್ನಾಲಜಿ ಬಳಸಿಕೊಂಡು ರಶ್ಮಿಕಾ ಮಂದಣ್ಣ ಅವರ ಹೆಸರಿಗೆ ಮಸಿ ಬಳೆಯೋ ಕೆಲಸ ಮಾಡಿದ್ದಾರೆ. ಶ್ರೀವಲ್ಲಿ ಫೇಕ್ ವಿಡಿಯೋ ಹರಿಬಿಟ್ಟು ರಶ್ಮಿಕಾಗೆ ಇರುಸು ಮುರುಸು ಉಂಟು ಮಾಡುವಂತೆ ಮಾಡಿದ್ದರು.ಇದೀಗ ರಶ್ಮಿಕಾ ಮಂದಣ್ಣ ಅವರ AI ಡೀಪ್‌ಫೇಕ್ ವಿಡಿಯೋ ಮಾಡಿದ ಕಿಡಿಗೇಡಿಗಳ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 465 (ನಕಲಿ) ಮತ್ತು 469 (ಪ್ರತಿಷ್ಠೆಗೆ ಹಾನಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ, 2000ರ ಸೆಕ್ಷನ್ 66 ಸಿ (ಗುರುತಿನ ಕಳ್ಳತನ) ಮತ್ತು 66 ಇ (ಗೌಪ್ಯತೆ ಉಲ್ಲಂಘನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮತ್ತು ಇದರ ವಿರುದ್ಧ ಸೂಕ್ತ ತನಿಖೆ ಮಾಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಡೀಪ್‌ಫೇಕ್ ಎನ್ನುವುದು ಡಿಜಿಟಲ್ ವಿಧಾನವಾಗಿದ್ದು, ಬಳಕೆದಾರರು AI ತಂತ್ರಜ್ಞಾನವನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯ ಹೋಲಿಕೆಯನ್ನು ಇನ್ನೊಬ್ಬರ ಹೋಲಿಕೆಯೊಂದಿಗೆ ಮನವೊಪ್ಪಿಸುವ ರೀತಿಯಲ್ಲಿ ಬದಲಾಯಿಸಬಹುದು. ಸದ್ಯ ಕೇಸ್ ದಾಖಲಿಸಿರುವ ದೆಹಲಿ ಪೊಲೀಸರು ಕಿಡಿಗೇಡಿಗಳನ್ನ ಬಂಧಿಸಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ