newsfirstkannada.com

ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹಾರಿದ ಸಮಂತಾ; ಇಲ್ಲಿದೆ ಟಾಪ್​​ ಸಿನಿಮಾ ಸುದ್ದಿಗಳು!

Share :

14-07-2023

  ಕಾವಾಲಯ್ಯ ಹಾಡಿಗೆ ಸ್ಯಾಂಡಲ್​ವುಡ್​​ ಖ್ಯಾತ ನಟಿ ಮಯೂರಿ ಮಸ್ತ್ ಡ್ಯಾನ್ಸ್

  ಆನಂದ್ ದೇವರಕೊಂಡ ನಟನೆಯ ಬೇಬಿ ಚಿತ್ರದ ಪ್ರೀಮಿಯರ್​ನಲ್ಲಿ ರಶ್ಮಿಕಾ!

  ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್​ನ 'ಶಿವಮ್ಮ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ವಿದೇಶಿ ಪ್ರಯಾಣಕ್ಕೂ ಮುಂಚೆ ಸಮಂತಾ ಪಾರ್ಟಿ

ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಪ್ರಯಾಣ ಮಾಡಲಿದ್ದಾರೆ. ಸದ್ಯ ಖುಷಿ ಹಾಗೂ ಸಿಟಾಡೆಲ್ ಚಿತ್ರಗಳು ಶೂಟಿಂಗ್ ಕಂಪ್ಲೀಟ್​ ಮಾಡಿರುವ ಸಮಂತಾಗೆ ತಮ್ಮ ಆಪ್ತರು ಬೀಳ್ಕೊಡುಗೆ ಕೊಟ್ಟಿದ್ದಾರೆ. ​​ಚಿಕಿತ್ಸೆಗಾಗಿ ಯುಎಸ್​ಗೆ ಹೋಗುತ್ತಿರುವ ಹಿನ್ನೆಲೆ ಡಿನ್ನರ್ ಪಾರ್ಟಿ ಆಯೋಜಿಸಿದ್ದ ಸ್ನೇಹಿತರು ಸಮಂತಾಗೆ ಬೀಳ್ಕೊಡುಗೆ ನೀಡಿದ್ದಾರೆ. ಈ ಫೋಟೋಗಳನ್ನ ಸಮಂತಾ ಹೇರ್​ಸ್ಟೈಲಿಸ್ಟ್​ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಮೊದಲಿಗಿಂತ ಸ್ಟ್ರಾಂಗ್ ಆಗಿ ವಾಪಸ್ ಆಗಿ ಅಂತ ವಿಶ್ ಮಾಡಿದ್ದಾರೆ.

View this post on Instagram

A post shared by Samantha (@samantharuthprabhuoffl)

ರಿಷಬ್ ಶೆಟ್ಟಿ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿಗಳು

ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್​ನಲ್ಲಿ ತಯಾರಾಗಿರುವ ‘ಶಿವಮ್ಮ’ ಚಿತ್ರ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನ ಗೆದ್ದುಕೊಂಡಿದೆ. ಸ್ವಿಟ್ಜರ್ಲ್ಯಾಂಡ್, ಇರಾನ್, ಸ್ಪೀಡನ್, ಫಾಜರ್, ಚೀನಾದ ಹೈನನ್, ಬುಸಾನ್, ನಾಂಟೆಸ್ ಸೇರಿ ಇನ್ನು ಹಲವು ದೇಶಗಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ಶಿವಮ್ಮ ಸಿನಿಮಾ ಹತ್ತಕ್ಕೂ ಹೆಚ್ಚು ಪ್ರಶಸ್ತಿ ಬಾಚಿಕೊಂಡಿದೆ. ಅಂದ್ಹಾಗೆ, ‘ಶಿವಮ್ಮ’ ಸಿನಿಮಾ ಕೊಪ್ಪಳ ಜಿಲ್ಲೆಯ ಯಾರೇಹಂಚಿನಾಳ ಗ್ರಾಮದ ಶಿವಮ್ಮ ಎಂಬ ಪಾತ್ರದ ಸುತ್ತ ಕಥೆ ಮಾಡಲಾಗಿದ್ದು, ಈ ಚಿತ್ರವನ್ನ ಜೈ ಶಂಕರ್ ಆರ್ಯರ್ ನಿರ್ದೇಶಿಸಿದ್ದಾರೆ.

ಕಾವಾಲಯ್ಯ ಹಾಡಿಗೆ ಮಯೂರಿ ಮಸ್ತ್ ಡ್ಯಾನ್ಸ್

ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಕಾವಾಲಯ್ಯ ಟ್ರೆಂಡ್ ಈಗ ಸ್ಯಾಂಡಲ್​ವುಡ್​ಗೂ ಹಬ್ಬಿದೆ. ಮ್ಯೂಸಿಕ್ ಲೋಕದ ಮ್ಯಾಜಿಕಲ್ ಸಾಂಗ್​ಗೆ ಈಗ ಕನ್ನಡದ ಖ್ಯಾತ ನಟಿ ಮಯೂರಿ ಡ್ಯಾನ್ಸ್​ ಮಾಡಿದ್ದಾರೆ. ತಮನ್ನಾ ಸ್ಟೈಲ್​ನಲ್ಲೇ ಮಯೂರಿಯೂ ಹೆಜ್ಜೆ ಹಾಕಿದ್ದು, ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಈಗ ಮಯೂರಿ ಅವ್ರ ಕಾವಾಲಯ್ಯ ಸ್ಟೆಪ್​ ಎಲ್ಲೆಲ್ಲೂ ವೈರಲ್ ಆಗ್ತಿದೆ.

‘ಬೇಬಿ’ ಪ್ರೀಮಿಯರ್​ನಲ್ಲಿ ರಶ್ಮಿಕಾ-ದೇವರಕೊಂಡ

ವಿಜಯ್ ದೇವರಕೊಂಡ ಅವರ ಸಹೋರದ ಆನಂದ್ ದೇವರಕೊಂಡ ನಟನೆಯ ಬೇಬಿ ಚಿತ್ರದ ಪ್ರೀಮಿಯರ್​ನಲ್ಲಿ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದರು. ಕಳೆದ ರಾತ್ರಿ ಹೈದರಾಬಾದ್​ನಲ್ಲಿ ಆಯೋಜಿಸಲಾಗಿದ್ದ ‘ಬೇಬಿ’ ಪ್ರೀಮಿಯರ್​ ಶೋನಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಸಹ ಸಿನಿಮಾ ವೀಕ್ಷಿಸಿದ್ದಾರೆ. ಇದಕ್ಕೂ ಮುಂಚೆಯೂ ಆನಂದ್ ದೇವರಕೊಂಡ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಸಾಥ್ ಕೊಟ್ಟಿದ್ದರು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹಾರಿದ ಸಮಂತಾ; ಇಲ್ಲಿದೆ ಟಾಪ್​​ ಸಿನಿಮಾ ಸುದ್ದಿಗಳು!

https://newsfirstlive.com/wp-content/uploads/2023/07/top-5-1-1.jpg

Load More