newsfirstkannada.com

ಮಲಯಾಳಂ ಬಳಿಕ ತೆಲುಗಮ್ಮಾಯಿಗಳ ಸರದಿ.. ಸಮಂತಾ ಸ್ಫೋಟಕ ಹೇಳಿಕೆಯಿಂದ ಹೊಸ ಕಂಪನ; ಏನಾಯ್ತು?

Share :

Published September 1, 2024 at 11:14pm

    ಕೇರಳದ ಹೇಮಾ ಕಮಿಟಿ ವರದಿ ಬಗ್ಗೆ ನಟಿ ಸಮಂತಾ ಮೆಚ್ಚುಗೆ

    ಟಾಲಿವುಡ್​​ನಲ್ಲೂ ನಟಿಯರಿಗೆ ಲೈಂಗಿಕ ಕಿರುಕುಳದ ಆರೋಪ

    ಕೊನೆಗೂ ಮೌನ ಮುರಿದ ಮಲಯಾಳಂ ದಿಗ್ಗದ ನಟ ಮುಮ್ಮಟ್ಟಿ

ಮಾಲಿವುಡ್​​​ ಇಂಡಸ್ಟ್ರೀಯಲ್ಲಿ MeToo ಪ್ರಕರಣಗಳು ಭಾರೀ ಕೋಲಾಹಲ ಸೃಷ್ಟಿಸಿವೆ. ಹೇಮಾ ಕಮಿಟಿ ವರದಿ ​ಬೆನ್ನಲ್ಲೇ ಕೆಲವು ಆಘಾತಕಾರಿ ವಿಚಾರಗಳು ಬಹಿರಂಗಗೊಂಡು ಗದ್ದಲಕ್ಕೆ ಕಾರಣವಾಗಿದೆ. ಇದರ ನಡುವೆ ಟಾಲಿವುಡ್​​ನಲ್ಲೂ ​​ಅಂಥಾದ್ದೇ ರಿಪೋರ್ಟ್‌ಗಾಗಿ ನಟಿ ಸಮಂತಾ ಪ್ರಭು ಆಗ್ರಹಿಸಿದ್ದು, ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಖ್ಯಾತ ನಟರಿಂದಲೇ ಲೈಂಗಿಕ ಕಿರುಕುಳ.. ಮಲಯಾಳಂ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಹೇಮಾ ಕಮಿಟಿ; ವರದಿಯಲ್ಲಿ ಏನಿದೆ? 

ಪಲ್ಲಂಗದ ಕಥೆಗಳ ಆರೋಪ ಹೊತ್ತಿರುವ ಮಲಯಾಳಂ ಚಿತ್ರರಂಗದಲ್ಲಿ ಈಗ ಕೋಲಾಹಲವೇ ಎದ್ದಿದೆ. ಮಾಲಿವುಡ್​​​ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಹೇಮಾ ಆಯೋಗ ಚಿತ್ರರಂಗದ ಕರಾಳತೆಯಲ್ಲಿ ರಿವೀಲ್​ ಮಾಡಿತ್ತು. ಇದ್ರ ಬೆನ್ನಲ್ಲೇ ಸೌತ್​​ ಬ್ಯೂಟಿ ಸಮಂತಾ ಈ ಬಗ್ಗೆ ಧ್ವನಿ ಎತ್ತಿದ್ದಾರೆ.

ಹೇಮಾ ಕಮಿಟಿ ವರದಿ ಮೆಚ್ಚಿದ ನಟಿ ಸಮಂತಾ
ಟಾಲಿವುಡ್​​ನಲ್ಲೂ ಇದೇ ರೀತಿ ವರದಿಗೆ ಆಗ್ರಹ
ಹೇಮಾ ವರದಿ ಸಲ್ಲಿಕೆಯಾದ ಬಳಿಕ ಮಲಯಾಳಂ ಚಿತ್ರರಂಗ ಶೇಕ್ ಆಗಿದೆ. ಮಲಯಾಳಂ ಚಿತ್ರರಂಗದಲ್ಲಿ ನಟಿಯರಿಗೆ ಸುರಕ್ಷತೆ ಇಲ್ಲ ಅನ್ನೋದನ್ನು ವರದಿಯಲ್ಲಿ ಬಹಿರಂಗವಾಗಿದೆ. ಜೊತೆಗೆ #MeToo ಅಭಿಯಾನ ಕೂಡ ಆರಂಭವಾಗಿದೆ. ಹಲವು ನಟಿಯರು ತಮಗಾದ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಲು ಶುರು ಮಾಡಿದ್ದಾರೆ. ಇದ್ರ ಬೆನ್ನಲ್ಲೇ ನಟಿ ಸಮಂತಾ ಕೇರಳದ ಹೇಮಾ ಕಮಿಟಿ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಟಾಲಿವುಡ್​​ ಚಿತ್ರರಂಗದಲ್ಲೂ ಇದೇ ರೀತಿ ವರದಿ ಬೇಕೆಂದು ತೆಲಂಗಾಣ ಸರ್ಕಾರಕ್ಕೆ ನಟಿ ಸಮಂತಾ ಆಗ್ರಹಿಸಿದ್ದಾರೆ.

ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದು ಕೊಂಡಿರುವ ಸಮಂತಾ, ನಾವು, ತೆಲುಗು ಚಿತ್ರರಂಗದ ಮಹಿಳೆಯರು, ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸುತ್ತೇವೆ. ಹಾಗೆಯೇ ವುಮನ್ಸ್ ಕಲೆಕ್ಟಿವ್ ಕೇರಳ ಹಾಕಿದ ಪ್ರಯತ್ನಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸುತ್ತೇವೆ. ಅದು ಇಲ್ಲಿವರೆಗೂ ಬರುವುದಕ್ಕೆ ದಾರಿ ಮಾಡಿ ಕೊಟ್ಟಿದೆ. ಟಾಲಿವುಡ್​​ನಲ್ಲೂ ಲೈಂಗಿಕ ಕಿರುಕುಳದ ಕುರಿತು ಸಲ್ಲಿಸಿದ್ದ ಉಪ ಸಮಿತಿಯ ವರದಿಯನ್ನು ಪ್ರಕಟಿಸಲು ತೆಲಂಗಾಣ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇವೆ ಅಂತ ಸಮಂತಾ ಪೋಸ್ಟ್​​ ಮಾಡಿದ್ದಾರೆ.

ಹೇಮಾ ವರದಿ ಬಗ್ಗೆ ಕೊನೆಗೂ ಮೌನ ಮುರಿದ ಮಮ್ಮುಟ್ಟಿ!
ಹೇಮಾ ವರದಿ ಸದ್ಯ ಕೇರಳ ಚಿತ್ರರಂಗದಲ್ಲಿ ಕೋಲಾಹಲ ಎಬ್ಬಿಸಿದ್ದು, ಇದುವರೆಗೂ ಚಿತ್ರರಂಗದ ಹಲವು ನಟ ನಿರ್ದೇಶಕರ ಮೇಲೆ ಎಫ್​ಐಆರ್​​ ದಾಖಲಾಗಿದೆ. ಈ ಕುರಿತು ಮಲಯಾಳಂ ಚಿತ್ರರಂಗದ ದಿಗ್ಗದ ನಟ ಮುಮ್ಮಟ್ಟಿ ಕೊನೆಗೂ ಮೌನ ಮುರಿದಿದ್ದಾರೆ. ಚಿತ್ರರಂಗದಲ್ಲಿ ಯಾವುದೇ ಶಕ್ತಿ ಕೇಂದ್ರವಿಲ್ಲ, ಹೇಮಾ ಕಮಿಟಿ ವರದಿಯನ್ನು ಸ್ವಾಗತಿಸುತ್ತೇನೆ ಎಂದು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಯುವ ನಟಿಯರಿಗೆ ಕಿರುಕುಳ.. ಹೇಮಾ ಕಮಿಟಿ ವರದಿ ಬಳಿಕ ಮಲಯಾಳಂ ಚಿತ್ರರಂಗದ ಇಬ್ಬರು ರಾಜೀನಾಮೆ 

ಕೇರಳದಲ್ಲಿ ಬಿರುಗಾಳಿ ಎಬ್ಬಿಸಿದ ಹೇಮಾ ಕಮಿಟಿ ವರದಿ ನಡುವೆ, ತೆಲುಗಿನಲ್ಲೂ ಅಂತಹದ್ದೇ ರಿಪೋರ್ಟ್‌ಗಾಗಿ ಸಮಂತಾ ಪ್ರಭು ಆಗ್ರಹ ಅಚ್ಚರಿಗೆ ಕಾರಣವಾಗಿದೆ. ಟಾಲಿವುಡ್​​ನಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆಯಾ ಎಂಬ ಅನುಮಾನ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಲಯಾಳಂ ಬಳಿಕ ತೆಲುಗಮ್ಮಾಯಿಗಳ ಸರದಿ.. ಸಮಂತಾ ಸ್ಫೋಟಕ ಹೇಳಿಕೆಯಿಂದ ಹೊಸ ಕಂಪನ; ಏನಾಯ್ತು?

https://newsfirstlive.com/wp-content/uploads/2024/09/Samantha-ruth-prabhu.jpg

Load More