newsfirstkannada.com

ಯುವ ರಾಜ್​ಕುಮಾರ್‌ ಪತ್ನಿ ಶ್ರೀದೇವಿಗೆ ಬಿಗ್​​ ಶಾಕ್​; ಕಾನೂನು ಸಮರಕ್ಕೆ ಮುಂದಾದ ನಟಿ ಸಪ್ತಮಿ ಗೌಡ

Share :

Published June 16, 2024 at 6:10am

    ಮಾನಹಾನಿ ಹೇಳಿಕೆ ನೀಡದಂತೆ ಕೋರ್ಟ್​​ನಿಂದ ನಿರ್ಬಂಧ

    ನಿರ್ಬಂಧ ಹೇರಿ ಆದೇಶ ನೀಡಿದ ಸಿಟಿ ಸಿವಿಲ್ ಕೋರ್ಟ್

    ಶ್ರೀದೇವಿಗೆ ನೋಟಿಸ್ ಜಾರಿ ಮಾಡಿರೋ ನ್ಯಾಯಾಲಯ​

ದೊಡ್ಮನೆಯಲ್ಲಿ ಡಿವೋರ್ಸ್​ ಗಾಳಿ ಬಿರುಗಾಳಿಯಂತೆ ಎಲ್ಲೇಡೆ ಹಬ್ಬಿತ್ತು. ಯುವ ಹಾಗೂ ಶ್ರೀದೇವಿ ಬಾಳಲ್ಲಿ ಉಂಟಾದ ಬಿರುಕಿಗೆ ಅಕ್ರಮ ಸಂಬಂಧದ ಬಣ್ಣ ಬಳಿಯಲಾಗಿತ್ತು. ಇದೀಗ ತನ್ನ ವಿರುದ್ಧದ ಆರೋಪಕ್ಕೆ ನಟಿ ಸಪ್ತಮಿ ಗೌಡ ರೊಚ್ಚಿಗೆದ್ದಿದ್ದಾರೆ. ಯುವ ಪತ್ನಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ. ದೊಡ್ಮನೆಯ ಕುಡಿ ಯುವ ರಾಜ್​ಕುಮಾರ್ ತನ್ನ ಪತ್ನಿ ವಿರುದ್ಧ​ ಲೀಗಲ್​ ನೋಟಿಸ್​ ಕೊಟ್ಟಿದ್ದಕ್ಕೆ ಪತ್ನಿ ಶ್ರೀದೇವಿ ಬೈರಪ್ಪ ರಿಪ್ಲೈ ನೋಟೀಸ್​ ನೀಡಿದ್ರು.

ಇದನ್ನೂ ಓದಿ: ನಟ ದರ್ಶನ್ ‘die hard fans’ಗೆ ಸ್ಟಾರ್ ಡೈರೆಕ್ಟರ್‌ ರಾಮ್‌ಗೋಪಾಲ್ ವರ್ಮಾ ಎಚ್ಚರಿಕೆ; ಏನಂದ್ರು?

ಈ ನೋಟಿಸ್​ನಲ್ಲಿ ನಟಿ ಸಪ್ತಮಿ ಗೌಡ ಅವ್ರ ಬಗೆಗಿನ ಸಂಬಂಧದ ಬಗ್ಗೆ ಉಲ್ಲೇಖವೂ ಆಗಿತ್ತು. ಆದ್ಯಾವಾಗ ಯುವ ಸಿನಿಮಾದಿಂದ ಯುವರಾಜ್​ ಹಾಗೂ ಸಪ್ತಮಿಗೌಡ ಒಡನಾಟ ಲವ್ವಿ ಡವ್ವಿ ಅಂತೆಲ್ಲಾ ಸುದ್ದಿ ಆಯ್ತೋ ಇತ್ತ ಸೋಶಿಯಲ್​ ಮಿಡಿಯಾದಲ್ಲಿ ನಟಿ ಸಪ್ತಮಿಗೌಡ ವಿರುದ್ಧ ಟ್ರೋಲ್ಸ್​. ಅವಹೇಳನಕಾರಿ ಪೋಸ್ಟ್​ ವೈರಲ್​ ಆಯ್ತು. ಇದೀಗ ಈ ಎಲ್ಲಾ ಆರೋಪಗಳಿಗೂ ಖುದ್ದು, ನಟಿ ಸಪ್ತಮಿ ಗೌಡ ಕಾನೂನಿನ ಚಾಟಿ ಬೀಸಿದ್ದಾರೆ. ಹೌದು, ಯುವ ಪತ್ನಿ ಶ್ರೀದೇವಿ ಮಾಡಿದ್ದ ಆರೋಪಕ್ಕೆ ನಟಿ ಸಪ್ತಮಿ ಗೌಡ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತನ್ನ ವಿರುದ್ಧ ಅಪಪ್ರಚಾರ ಮಾಡದಂತೆ ಸಿಟಿ ಸಿವಿಲ್ ಕೋರ್ಟ್​ ಮೊರೆ ಹೋಗಿದ್ದು, ಸಪ್ತಮಿ ಗೌಡ ಪರ ಇಂದು ಕೋರ್ಟ್‌ನಲ್ಲಿ ಹಿರಿಯ ವಕೀಲ ಶಂಕರಪ್ಪ ವೆಂಕಟರಾಯಪ್ಪ ಅವರು ಈ ಸಂಬಂಧ​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಕೋರ್ಟ್​ ಮೆಟ್ಟಿಲೇರಿದ ಸಪ್ತಮಿಗೌಡ

ಯುವ ರಾಜ್​ಕುಮಾರ್ ಕೇಸಲ್ಲಿ ನನ್ನ ಹೆಸರು ತಳುಕು ಹಾಕಲಾಗಿದೆ. ಇಲ್ಲಸಲ್ಲದ ಆರೋಪಗಳನ್ನ ಹೊರಿಸಿ ಚಾರಿತ್ರ್ಯವಧೆ ಮಾಡಲಾಗಿದೆ. ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲದಿದ್ದರೂ ಅಪಪ್ರಚಾರ ಮಾಡಲಾಗಿದೆ. ಆಧಾರರಹಿತವಾಗಿ ಆರೋಪ ಮಾಡಲಾಗಿದೆ. ಶ್ರೀದೇವಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು.
– ನಟಿ ಸಪ್ತಮಿ ಗೌಡ

ಸದ್ಯ ವಾದ ಆಲಿಸಿದ ಕೋರ್ಟ್​, ಇದೀಗ ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಜೊತೆಗೆ ಯುವ ಪತ್ನಿ ಶ್ರೀದೇವಿ ಭೈರಪ್ಪಗೂ ​ಸಪ್ತಮಿ ಹೆಸರನ್ನ ಎಲ್ಲೂ ಬಳಕೆ ಮಾಡುವಂತಿಲ್ಲ್ಲ ಅಂತ ನ್ಯಾಯಾಲಯ​ ನೋಟಿಸ್ ಜಾರಿ ಮಾಡಿದೆ. ದೊಡ್ಮನೆಯ ಮೊದಲ ವಿಚ್ಛೇದನ ಕೇಸ್​ ಆರೋಪ ಪ್ರತ್ಯಾರೋಪದಿಂದ ಸದ್ದು ಮಾಡ್ತಿದ್ದು ಇನ್ಯಾವ ತಿರುವು ಪಡೆದುಕೊಳ್ಳತ್ತೆ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವ ರಾಜ್​ಕುಮಾರ್‌ ಪತ್ನಿ ಶ್ರೀದೇವಿಗೆ ಬಿಗ್​​ ಶಾಕ್​; ಕಾನೂನು ಸಮರಕ್ಕೆ ಮುಂದಾದ ನಟಿ ಸಪ್ತಮಿ ಗೌಡ

https://newsfirstlive.com/wp-content/uploads/2024/06/yuva.jpg

Load More