newsfirstkannada.com

ವಯಸ್ಸಿನ ಬಗ್ಗೆ ಮಾತಾಡಿದವರ ವಿರುದ್ಧ ತಮನ್ನಾ ಕೆಂಡಾಮಂಡಲ; ಇಲ್ಲಿದೆ ಟಾಪ್​​​ 5 ಸಿನಿಮಾ ಸುದ್ದಿ!

Share :

01-08-2023

  ಯುವ ಶೂಟಿಂಗ್ ಸೆಟ್​ಗೆ ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಎಂಟ್ರಿ

  ಪೋಸ್ಟ್​ ಪ್ರೊಡಕ್ಷನ್ ಹಂತಕ್ಕೆ ಬಂದ ರಿಯಲ್ ಸ್ಟಾರ್ ಯು/ಐ ಚಿತ್ರ

  ವಯಸ್ಸಿನ ಅಂತರದ ಬಗ್ಗೆ ನಟಿ ತಮನ್ನಾ ಭಾಟಿಯಾ ಏನಂದ್ರು?

ಎಡಿಟಿಂಗ್ ಆರಂಭಿಸಿದ ಉಪ್ಪಿ ಯ/ಐ

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ ಯು/ಐ ಸಿನಿಮಾ ಪೋಸ್ಟ್​ ಪ್ರೊಡಕ್ಷನ್ ಹಂತಕ್ಕೆ ಬಂದಿದೆ. ಕಂಪ್ಲೀಟ್​ ಪೋಷನ್ ಮುಗಿಸಿರುವ ಉಪ್ಪಿ ಈಗ ಚಿತ್ರದ ಸಂಕಲನ ಆರಂಭಿಸಿದ್ದಾರೆ. ಕೆಪಿ ಶ್ರೀಕಾಂತ್, ಲಹರಿ ಸಂಸ್ಥೆ ಜಂಟಿಯಾಗಿ ನಿರ್ಮಾಣ ಮಾಡ್ತಿರುವ ಈ ಚಿತ್ರ ಇದೇ ವರ್ಷ ತೆರೆಗೆ ಬರಲಿದೆ.

‘ಯುವ’ ಸೆಟ್​ನಲ್ಲಿ ಆ್ಯಕ್ಷನ್ ಪ್ರಿನ್ಸ್​!

ಯುವರಾಜ್ ಕುಮಾರ್ ನಟನೆಯ ಯುವ ಸಿನಿಮಾದ ಚಿತ್ರೀಕರಣ ಸದ್ಯ ಬೆಂಗಳೂರಿನ ಬಸವನಗುಡಿಯಲ್ಲಿ ಸಾಗುತ್ತಿದೆ. ಈ ವೇಳೆ ಯುವ ಶೂಟಿಂಗ್ ಸೆಟ್​ಗೆ ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಭೇಟಿ ಕೊಟ್ಟಿದ್ದು, ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವ ಚಿತ್ರ ಕಳೆದ 50 ದಿನಗಳಿಂದ ನಿರತಂರವಾಗಿ ಚಿತ್ರೀಕರಣ ಮಾಡಿದೆ. ಕಾಂತಾರ ಖ್ಯಾತಿಯ ಸಪ್ತಮಿಗೌಡ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

ಸೌಜನ್ಯ ಕೇಸ್​ನಲ್ಲಿ ನ್ಯಾಯ ಕೇಳಿದ ವಿಜಯ್

ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಟ-ನಿರ್ದೇಶಕ ದುನಿಯಾ ವಿಜಯ್​ ಬೇಡಿಕೆಯಿಟ್ಟಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ದುನಿಯಾ ವಿಜಯ್, ಸೌಜನ್ಯ ಕೇಸ್​ನಲ್ಲಿ ನ್ಯಾಯ ಸಿಗೋವರೆಗೂ ಧರ್ಮಸ್ಥಳಕ್ಕೆ ಭೇಟಿ ನೀಡದಿರಲು ನಿರ್ಧರಿಸಿದ್ದಾರೆ. ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆ. ಆದ್ರೆ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಎಂದು ನಿರ್ಧರಿಸಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಹೀರೋಯಿನ್​ಗಿಂತ ದೀಪಿಕಾ ಸಂಭಾವನೆ ಜಾಸ್ತಿ?

ಜವಾನ್ ಚಿತ್ರದಲ್ಲಿ ನಾಯಕಿ ಪಾತ್ರ ಮಾಡಿರುವ ನಯನತಾರಗಿಂತ ಅತಿಥಿ ಪಾತ್ರ ಮಾಡಿರುವ ದೀಪಿಕಾ ಪಡುಕೋಣೆ ಸಂಭಾವನೆ ಜಾಸ್ತಿ ತಗೊಂಡಿದ್ದಾರಂತೆ. ಶಾರುಖ್ ಖಾನ್ ನಟನೆಯ ಜವಾನ್ ಚಿತ್ರಕ್ಕಾಗಿ ನಯನತಾರ 10 ರಿಂದ 11 ಕೋಟಿ ಸಂಭಾವನೆ ಪಡೆದಿದ್ದರೆ, ಅತಿಥಿ ಪಾತ್ರ ಮಾಡಿರೋ ದೀಪಿಕಾ 15 ರಿಂದ 17 ಕೋಟಿ ಚಾರ್ಜ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರವು ಸೆಪ್ಟೆಂಬರ್ 7ಕ್ಕೆ ಜವಾನ್​​ ಸಿನಿಮಾ ರಿಲೀಸ್ ಆಗುತ್ತಿದೆ.

ವಯಸ್ಸಿನ ಅಂತರದ ಬಗ್ಗೆ ತಮನ್ನಾ ಏನಂದ್ರು?

ವಯಸ್ಸಾಗಿರುವ ನಟರ ಚಿತ್ರಗಳಲ್ಲಿ ತಮನ್ನಾ ನಾಯಕಿಯಾಗ್ತಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಆಗುತ್ತಿತ್ತು. ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ತಮನ್ನಾ, ‘ಯಾಕೆ ಎಲ್ಲರೂ ವಯಸ್ಸಿನ ಅಂತರದ ಬಗ್ಗೆ ಚರ್ಚೆ ಮಾಡ್ತೀರಾ? ಸಿನಿಮಾ ಅಂದ್ಮೇಲೆ ಎರಡು ವಿಭಿನ್ನ ಪಾತ್ರಗಳಾಗಿ ನೋಡಬೇಕು ಅಷ್ಟೇ. ಎಲ್ಲರಂತೆ ನಾನು ವಯಸ್ಸಿನ ಬಗ್ಗೆ ಮಾತನಾಡಬೇಕು ಅಂದ್ರೆ ಟಾಮ್ ಕ್ರೂಸ್‌ ನೋಡಿ 60 ವರ್ಷ ಆದರೂ ಎಷ್ಟು ಸ್ಟಂಟ್ ಮಾಡ್ತಾರೆ. ನಾನು ಕೂಡ ಆ ವಯಸ್ಸಿನಲ್ಲಿ ಅವರ ಥರಾ ಡ್ಯಾನ್ಸ್‌ ಆಂಡ್ ಸ್ಟಂಟ್ ಮಾಡಲು ಇಷ್ಟ ಪಡುತ್ತೀನಿ’ ಎಂದು ತಿರುಗೇಟು ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ವಯಸ್ಸಿನ ಬಗ್ಗೆ ಮಾತಾಡಿದವರ ವಿರುದ್ಧ ತಮನ್ನಾ ಕೆಂಡಾಮಂಡಲ; ಇಲ್ಲಿದೆ ಟಾಪ್​​​ 5 ಸಿನಿಮಾ ಸುದ್ದಿ!

https://newsfirstlive.com/wp-content/uploads/2023/08/tammanna.jpg

Load More