newsfirstkannada.com

‘ರಣ ವಿಕ್ರಮ‘ ನಟಿಗೆ ಅನಾರೋಗ್ಯ.. ಆಸ್ಪತ್ರೆಗೆ ದಾಖಲಾದ ಅದಾ ಶರ್ಮಾ

Share :

03-08-2023

  ಆಸ್ಪತ್ರೆಗೆ ದಾಖಲಾದ ‘ದಿ ಕೇರಳ ಸ್ಟೋರಿ’ ಸಿನಿಮಾದ ನಟಿ

  ಕಮಾಂಡೊ ಸಿನಿಮಾ ಪ್ರಚಾರದ ವೇಳೆ ಹುಷಾರು ತಪ್ಪಿದ ನಟಿ

  ಅದಾ ಶರ್ಮಾಗೆ ಏನಾಯ್ತು? ಈಗ ಹೇಗಿದ್ದಾರೆ ಬಾಲಿವುಡ್​ ಬ್ಯೂಟಿ

‘ರಣ ವಿಕ್ರಮ’ ಸಿನಿಮಾದ ನಟಿ ಅದಾ ಶರ್ಮಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತಿಸಾರ ಮತ್ತು ಫುಡ್​ ಅಲರ್ಜಿಯಿಂದಾಗಿ ಅನಾರೋಗ್ಯ ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪುನೀತ್​ ರಾಜ್​ಕುಮಾರ್​ ಅಭಿನಯದ ರಣವಿಕ್ರಮ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಅದಾ ಶರ್ಮಾರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾದ ಮೂಲಕ ಮತ್ತಷ್ಟು ಜನಪ್ರಿಯರಾಗಿದ್ದ ಅದಾ ಶರ್ಮಾ ಅವರು ಸದ್ಯ ‘ಕಮಾಂಡೊ’ ಸಿನಿಮಾದಲ್ಲಿ ಭಾವನಾ ರೆಡ್ಡಿ ಪಾತ್ರ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೀಗ ಇದ್ದಕ್ಕಿಂದ್ದಂತೆಯೇ ಫುಡ್​ ಅಲರ್ಜಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಅವರನ್ನು ಸೂಕ್ಷ್ಮವಾಗಿ ಗಮನಿಸಿ ಚಿಕಿತ್ಸೆ ಮುಂದುವರಿಸಿದ್ದಾರೆ.

ಅದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಇರುತ್ತಾರೆ. ಸದ್ಯ ಈ ನಟಿ ಆಸ್ಪತ್ರೆ ದಾಖಲಾಗಿದ್ದಾರೆ ಎಂಬ ಮಾಹಿತಿ ತಿಳಿದು ಅವರ ಫ್ಯಾನ್ಸ್​ ಶಾಕ್‌ಗೆ ಒಳಗಾಗಿದ್ದಾರೆ. ಬೇಗ ಚೇತರಿಸಿಕೊಳ್ಳಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕುವ ಮೂಲಕ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

‘ರಣ ವಿಕ್ರಮ‘ ನಟಿಗೆ ಅನಾರೋಗ್ಯ.. ಆಸ್ಪತ್ರೆಗೆ ದಾಖಲಾದ ಅದಾ ಶರ್ಮಾ

https://newsfirstlive.com/wp-content/uploads/2023/08/Adah-Sharma.jpg

Load More