/newsfirstlive-kannada/media/post_attachments/wp-content/uploads/2024/10/AYYAPPA.jpg)
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಮುಖ್ಯವಾಗಿ ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ಭಕ್ತರ ಸಂಖ್ಯೆ ತುಂಬಾ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಹಾಗೂ ಸರ್ಕಾರಗಳು ಅಯ್ಯಪ್ಪನ ಭಕ್ತರಿಗೆ ಗುಡ್​ನ್ಯೂಸ್ ನೀಡಿವೆ.
ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ವಿಮಾನ ಸೇವೆಗಳನ್ನು ಘೋಷಿಸಿವೆ. ವಿಶೇಷವಾಗಿ ಸಂಕ್ರಾಂತಿ ಮತ್ತು ಮಕರವೀಧಿ ಪೂಜೆಯ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಭಕ್ತರಿಗೆ ಅನುಕೂಲ ಆಗಲಿ ಎಂದು ಹೆಚ್ಚುವರಿ ವಿಮಾನ ಸೇವೆಗಳನ್ನು ಒದಗಿಸಲು ವಿಮಾನಯಾನ ಸಂಸ್ಥೆಗಳು ನಿರ್ಧರಿಸಿವೆ.
ಇದನ್ನೂ ಓದಿ: ಅಯ್ಯಪ್ಪ ಭಕ್ತರಿಗೆ ರೈಲ್ವೆ ಸಿಹಿಸುದ್ದಿ.. ಶಬರಿಮಲೆಗೆ ವಿಶೇಷ ರೈಲುಗಳು
ಹೆಚ್ಚುವರಿ ವಿಮಾನಗಳು ಶಬರಿಮಲೆಗೆ ಭೇಟಿ ನೀಡುವ ಭಕ್ತರಿಗೆ ಒಳ್ಳೆಯ ಪರಿಹಾರ ಮಾರ್ಗ. ಶೀಘ್ರವಾಗಿ ಶಬರಿ ಮಲೆ ತಲುಪಬಹುದು ಅನ್ನೋದು ಕೆಲವು ಭಕ್ತರ ಅಭಿಮತ. ಶಬರಿಮಲೆ ಭಕ್ತರ ಅನುಕೂಲಕ್ಕಾಗಿ ಚೆನ್ನೈನಿಂದ ಕೊಚ್ಚಿಗೆ ಪ್ರತಿದಿನ ಎಂಟು ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಚೆನ್ನೈನಿಂದ ಎಂಟು ವಿಮಾನಗಳ ಜೊತೆಗೆ, ಬೆಂಗಳೂರಿನಿಂದ ಚೆನ್ನೈಗೆ ಮೂರು ವಿಮಾನಗಳು ಜನವರಿ 25 ರವರೆಗೆ ಹಾರಾಟ ನಡೆಸಲಿವೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ ಮತ್ತು ಸ್ಪೈಸ್ ಜೆಟ್ ಕಂಪನಿಗಳು ಚೆನ್ನೈನಿಂದ ಕೊಚ್ಚಿಗೆ ವಿಮಾನ ಸೇವೆಗಳನ್ನು ಒದಗಿಸುತ್ತವೆ. ಅಷ್ಟೇ ಅಲ್ಲದೇ ಕರ್ನಾಟಕ ಸರ್ಕಾರ ಶಬರಿಮಲೆಗೆ ಕೆಎಸ್​ಆರ್​ಟಿಸಿ ವೋಲ್ವೋ ಬಸ್​ಗಳನ್ನೂ ಕೂಡ ಬಿಟ್ಟಿದೆ. ಅಲ್ಲದೇ ಹೈದರಾಬಾದ್​​ನಿಂದ ವಿಶೇಷ ರೈಲು ಸೇವೆ ಕೂಡ ಇದೆ.
ಇದನ್ನೂ ಓದಿ:ಅಯ್ಯಪ್ಪ ಭಕ್ತರಿಗೆ ರೈಲ್ವೆ ಸಿಹಿಸುದ್ದಿ.. ಶಬರಿಮಲೆಗೆ ವಿಶೇಷ ರೈಲುಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us