newsfirstkannada.com

5 ತಿಂಗಳಲ್ಲಿ 55 ಭಾರತೀಯ ಕ್ರಿಕೆಟರ್ಸ್​ಗೆ ಡೋಪಿಂಗ್​ ಟೆಸ್ಟ್; ರೋಹಿತ್, ಕೊಹ್ಲಿ, ಪಾಂಡ್ಯ ಕಥೆ ಏನು..?

Share :

13-08-2023

    ​ಜಡೇಜಾಗೆ 5 ತಿಂಗಳಲ್ಲಿ 3 ಬಾರಿ ಡೋಪಿಂಗ್​ ಟೆಸ್ಟ್..!

    ಡೋಪಿಂಗ್ ಟೆಸ್ಟ್​ನಿಂದ ದೂರ ಉಳಿದ ಸ್ಟಾರ್​​ ಕ್ರಿಕೆಟರ್ಸ್​..!

    ರೋಹಿತ್- ವಿರಾಟ್​ ಕೊಹ್ಲಿ ದಾರಿಯಲ್ಲೇ ಹಾರ್ದಿಕ್ ಪಾಂಡ್ಯ

ಒಲಿಂಪಿಕ್ಸ್ ವೇಳೆ ಹೆಚ್ಚಾಗಿ ನಾವ್ ಕೇಳುವ ಒಂದು ಪದ ಡೋಪಿಂಗ್​. ಒಲಿಂಪಿಕ್ಸ್ ಮಾತ್ರವೇ ಅಲ್ಲ. ಕ್ರಿಕೆಟ್​​​ನಲ್ಲೂ ಈ ಕುರಿತು ನಾವ್​ ಕೇಳಿದ್ದೇವೆ. ಬ್ಯಾನ್ ಆಗಿ ಒಂದಷ್ಟು ದಿನ ಮನೆಯಲ್ಲಿ ಕಳೆದ ಕ್ರಿಕೆಟರ್​​ಗಳನ್ನೂ ನೋಡಿದ್ದೇವೆ. ಇದೀಗ ಈ ಡೋಪಿಂಗ್ ಟೆಸ್ಟ್​ಗೆ ಟೀಮ್ ಇಂಡಿಯಾ ಕ್ರಿಕೆಟಿಗರು ಒಳಪಟ್ಟಿದ್ದಾರೆ.

ಕ್ರೀಡಾಪಟುಗಳು ಹೆಚ್ಚು ದಿನ ಸಕ್ಸಸ್​​ನ ಅಲೆಯಲ್ಲೇ ತೇಲುವುದು ಅಸಹಜ ಮಾತು. ಹೀಗೆ ಲಾಂಗ್​ ಟರ್ಮ್​ ಸಕ್ಸಸ್​​ಗಾಗಿ ಆಟಗಾರರು ಕೆಲ ಸ್ಟಿರಾಯ್ಡ್​ಗಳ ಮೊರೆ ಹೋಗ್ತಾರೆ. ನಿಷೇಧಿತ ಮದ್ದುಗಳಿಂದ ಇಂಜುರಿ ತೀವ್ರ ಗುಣಮುಖವಾಗೋದೇ ಅಲ್ಲ. ಆಟಗಾರನ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಹೀಗಾಗಿಯೇ ಕೆಲವರು ನಿಷೇಧಿತ ಮದ್ದು ಸೇವಿಸ್ತಾರೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿಯೇ NADA, ಕಾಲಕಾಲಕ್ಕೆ ಆಟಗಾರರನ್ನ ಡೋಪ್ ಟೆಸ್ಟ್​​​ ಒಳಪಡಿಸುತ್ತೆ. ಅದೇ ರೀತಿ ಕೆಲ ಟೀಮ್ ಇಂಡಿಯಾ ಆಟಗಾರರು, ಈ ವರ್ಷ ಡೋಪಿಂಗ್​ ಟೆಸ್ಟ್​ಗೆ ಒಳಪಟ್ಟಿದ್ದು, ಈ ಬಗೆಗಿನ ಮಾಹಿತಿ ಹೊರಬಿದ್ದಿದೆ.

ಡೋಪ್ ಟೆಸ್ಟ್​ನಿಂದ ದೂರ ಉಳಿದ ಸ್ಟಾರ್​​ ಕ್ರಿಕೆಟರ್ಸ್..​!

ಪ್ರಸಕ್ತ ವರ್ಷ ಬರೋಬ್ಬರಿ 55 ಕ್ರಿಕೆಟಿಗರು ಡೋಪಿಂಗ್​​ ಟೆಸ್ಟ್​ಗೆ ಒಳಪಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಾಡಾ ಬಿಡುಗಡೆಗೊಳಿಸಿದೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ 2021 ಹಾಗೂ 2022ರಲ್ಲಿ ಮೂರು ಬಾರಿ ಸ್ಯಾಂಪಲ್​​​​ಗಳನ್ನ ನೀಡಿದ್ದ ರೋಹಿತ್​, ಈ ವರ್ಷ ಒಮ್ಮೆಯೂ ಡೋಪಿಂಗ್​ ಟೆಸ್ಟ್​ಗೆ ಒಳಟ್ಟಿಲ್ಲ. ಸಪ್ರೈಸಿಂಗ್ ವಿಷ್ಯ ಅಂದ್ರೆ 2021, 2022ರಲ್ಲೂ ಡೋಪಿಂಗ್ ಟೆಸ್ಟ್​ನಿಂದ ದೂರ ಉಳಿದಿದ್ದ ವಿರಾಟ್​, ಪ್ರಸಕ್ತ ವರ್ಷವೂ ಒಮ್ಮೆಯೂ ಒಳಪಟ್ಟಿಲ್ಲ ಅನ್ನೋದು ವಿಶೇಷ.

ಅತಿ ಹೆಚ್ಚು ಬಾರಿ ಟೆಸ್ಟ್​​​​​​​​​​​​​​​​​​​​​​​​​​​​​​​​​​​​ಗೆ ಒಳಪಟ್ಟ ರವೀಂದ್ರ ಜಡೇಜಾ..!

ಒಂದ್ಕಡೆ ನಾಯಕ-ಮಾಜಿ ನಾಯಕರು ಡೋಪಿಂಗ್ ಟೆಸ್ಟ್​​ನಿಂದ ಅಂತರ ಕಾಯ್ದುಕೊಂಡರೆ, ಮತ್ತೊಂದೆಡೆ ಸ್ಟಾರ್ ಆಲ್​​ರೌಂಡರ್ ರವೀಂದ್ರ ಜಡೇಜಾ, ಜನವರಿಯಿಂದ ಬರೋಬ್ಬರಿ 3 ಬಾರಿ ಡೋಪ್ ಟೆಸ್ಟ್​ ನೀಡಿದ್ದಾರೆ. ಜಡೇಜಾ ಜೊತೆಗೆ ಹರ್ಮನ್‌ಪ್ರೀತ್ ಕೌರ್ ಹಾಗೂ ಸ್ಮೃತಿ ಮಂದಾನ ಗರಿಷ್ಠ 3 ಬಾರಿ ಪರೀಕ್ಷೆಗೆ ಒಳಗಾದ ಆಟಗಾರರಾಗಿದ್ದಾರೆ.

ವಾರ್ಷಿಕ ಒಪ್ಪಂದದಲ್ಲಿ 26.. ಟೆಸ್ಟ್​ಗೆ ಮಾತ್ರ 14 ಆಟಗಾರರು..!

ಬಿಸಿಸಿಐನ ಕೇಂದ್ರಿಯ ಒಪ್ಪಂದದಲ್ಲಿ ಸ್ಥಾನ ಪಡೆದ ಒಟ್ಟು ಆಟಗಾರರ ಸಂಖ್ಯೆ 26. ಆದರೆ ಈ ಪೈಕಿ ಡೋಪಿಂಗ್ ಟೆಸ್ಟ್​ಗೆ ಒಳಪಟ್ಟಿರುವ ಆಟಗಾರರು ಮಾತ್ರ 14 ಮಂದಿ. ಇನ್ನುಳಿದ 12 ಮಂದಿ ಡೋಪಿಂಗ್ ಟೆಸ್ಟ್​ಗೆ ಒಳಪಟ್ಟಿದ್ದೇ ಇಲ್ಲ. ಈ ಪಟ್ಟಿಯಲ್ಲಿ ರೋಹಿತ್​​ ಆ್ಯಂಡ್​ ವಿರಾಟ್​​ ಕೊಹ್ಲಿ ಮಾತ್ರವೇ ಅಲ್ಲ. ಹಾರ್ದಿಕ್ ಪಾಂಡ್ಯ ಕೂಡ ಸೇರ್ಪಡೆಯಾಗ್ತಾರೆ.

ಡೋಪಿಂಗ್ ಟೆಸ್ಟ್​ಗೆ ಒಳಪಡದ ಆಟಗಾರರು

  • ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ
  • ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್
  • ಶ್ರೀಕರ್ ಭರತ್, ಶಾರ್ದೂಲ್, ವಾಷಿಂಗ್ಟನ್ ಸುಂದರ್
  • ಮೊಹಮ್ಮದ್ ಶಮಿ, ಉಮೇಶ್ ಯಾದವ್, ಅರ್ಷದೀಪ್ ಸಿಂಗ್

ಇನ್ನುಳಿದಂತೆ ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್​ ಟೆಸ್ಟ್​ಗೆ ಒಳಪಟ್ಟಿರುವ ಪ್ರಮುಖ ಕ್ರಿಕೆಟಿಗರಾಗಿದ್ದಾರೆ. ಈ ಟೆಸ್ಟ್​ನ ಎರಡು ಮಾದರಿಯಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗುತ್ತೆ. ಒಂದು ರಕ್ತದ ಮಾದರಿ ಸಂಗ್ರಹಿಸಿ, ಮತ್ತೊಂದು URINE ಸಂಗ್ರಹಿಸಿ ಮಾಡಲಾಗುವ ಟೆಸ್ಟ್ ಆಗಿದೆ. ಇದಿಷ್ಟೇ ಅಲ್ಲ.. ಸ್ಯಾಂಪಲ್ ಎ ಆ್ಯಂಡ್ ಸ್ಯಾಪಲ್ ಬಿ ಎಂದು ವಿಂಗಡಿಸಲಾಗುತ್ತದೆ.

ಸ್ಯಾಂಪಲ್ ಎ ರಿಸಲ್ಟ್​ ಪಾಸಿಟಿವ್ ಎಂದಾದ್ರೆ ಸ್ಯಾಂಪಲ್ ಬಿ ಮಾದರಿ ಪರೀಕ್ಷೆಗೆ ವಿನಂತಿಸುವ ಹಕ್ಕು ಆಟಗಾರರಿಗೆ ಇದೆ. ಅಕಸ್ಮಾತ್​ ಸ್ಯಾಂಪಲ್ ಬಿನಲ್ಲೂ ತಪ್ಪಿತಸ್ಥರು ಎಂಬುವುದು ಸಾಬೀತಾದ್ರೆ, ಆಟಗಾರನ ಅಮಾನತು ಗ್ಯಾರಂಟಿ. ಹೆಚ್ಚುವರಿ ದಂಡವೂ ಪಾವತಿಸಬೇಕಾಗುತ್ತೆ. ಈ ಡೋಪಿಂಗ್ ಟೆಸ್ಟ್​ ಆಟಗಾರರ ಸ್ವ-ಇಚ್ಚೆಯಿಂದ ಒಳಪಡಬಹುದು. ಅನುಮಾನಸ್ಪದ ಆಟಗಾರನ ಗುರಿಯಾಗಿಸಿ ನಾಡ ಟೆಸ್ಟ್​ಗೆ ಒಳಪಡಿಸಲುಬಹುದಾಗಿದೆ. ಅದೇನೇ ಆಗಲಿ.. ಡೋಪ್ ಪರೀಕ್ಷೆಯಲ್ಲಿ ಭಾರತೀಯ ಕ್ರಿಕೆಟಿಗರು ಇತರ ದೇಶಗಳಿಗಿಂತ ಹಿಂದಿರುವುದು ನಿಜಕ್ಕೂ ಬೇಸರದ ಸಂಗತಿ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

5 ತಿಂಗಳಲ್ಲಿ 55 ಭಾರತೀಯ ಕ್ರಿಕೆಟರ್ಸ್​ಗೆ ಡೋಪಿಂಗ್​ ಟೆಸ್ಟ್; ರೋಹಿತ್, ಕೊಹ್ಲಿ, ಪಾಂಡ್ಯ ಕಥೆ ಏನು..?

https://newsfirstlive.com/wp-content/uploads/2023/08/Kohli_Rohit-Sharma.jpg

Load More