newsfirstkannada.com

ಪೋಷಕರೇ ಎಚ್ಚರ! ಮಕ್ಕಳನ್ನು ಕಾಡುತ್ತಿದೆ ಹೊಸ ವೈರಸ್; ಇದು ಓದಲೇಬೇಕಾದ ಸ್ಟೋರಿ

Share :

05-09-2023

    ನಗರದ ಮಕ್ಕಳಿಗೆ ಶರವೇಗದಲ್ಲಿ ಹರಡುತ್ತಿರುವ ಅಪಾಯಕಾರಿ ಸೋಂಕು

    ನಿತ್ಯ ನಾನಾ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಸಣ್ಣ ಮಕ್ಕಳು

    ಅಡೆನೊ ವೈರಸ್​ಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆ ನಗರದಲ್ಲಿ ಹೆಚ್ಚಳ..!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನಕ್ಕೊಂದು ವೆದರ್. ಒಂದು ದಿನ ಚಳಿ ಇದ್ದರೆ, ಇನ್ನೊಂದು ದಿನ ಶೆಕೆ ಇರುತ್ತೆ. ಮತ್ತೊಂದು ದಿನ ಧಾರಾಕಾರ ಮಳೆ. ಹೀಗೆ ಹವಾಮಾನದ ವೈಪರೀತ್ಯದ ಎಫೆಕ್ಟ್ ಈಗ ಚಿಕ್ಕ ಮಕ್ಕಳ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಪುಟ್ಟ ಮಕ್ಕಳನ್ನ ಈಗ ವೈರಸ್​ವೊಂದು ಕಾಡುವುದಕ್ಕೆ ಶುರುಮಾಡಿದೆ.

ಶರವೇಗದಲ್ಲಿ ಹರಡುತ್ತಿರುವ ಅಪಾಯಕಾರಿ ಸೋಂಕಿನ ಹೆಸರು ಅಡೆನೋ. ಅಡೆನೊ ವೈರಸ್​ಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆ ನಗರದಲ್ಲಿ ಹೆಚ್ಚಳವಾಗುತ್ತಿದೆ. ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

ನಗರದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲೇ ಹೆಚ್ಚೆಚ್ಚು ಕೇಸ್ ದಾಖಲಾಗುತ್ತಿದ್ದು ನಾನಾ ಸಮಸ್ಯೆಯಿಂದ ಚಿಕಿತ್ಸೆ ದಾಖಲಾಗಿರುವ ಮಕ್ಕಳಲ್ಲಿ ಶೇ.20 ಕ್ಕಿಂತ ಹೆಚ್ಚು ಮಕ್ಕಳು ಅಡೆನೋ ವೈರಸ್ ಸೋಂಕಿಗೆ ತುತ್ತಾಗುತ್ತಿದ್ದಾರೆ. ಸಾಮಾನ್ಯ ಶೀತ ಅಥವಾ ಜ್ವರ ಆರಂಭಿಕ ಲಕ್ಷಣವಾಗಿರುತ್ತೆ. ಮುಂದುವರಿದು ಗಂಟಲು ಕೆರತ ಮತ್ತು ನೋವು ಕಾಣಿಸಿ ಕೊಳ್ಳುತ್ತದೆ. ಅದರ ಜೊತೆಗೆ ಬ್ರಾಂಕೈಟಿಸ್ ಅಂದರೆ ಶ್ವಾಸಕೋಶದಲ್ಲಿನ ಶ್ವಾಸನಾಳದ ಉರಿಯೂತ, ಹಾಗೂ ನ್ಯುಮೋನಿಯಾ ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುತ್ತದೆ. ಹಾಗೇ ಗುಲಾಬಿ ಕಣ್ಣು , ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್ ಇದರ ಪ್ರಮುಖ ಗುಣ ಲಕ್ಷಣ ಆಗಿರುತ್ತದೆ.

ಅಡಿನೋ ವೈರಸ್ ಸೋಂಕಿಗೆ ಒಳಗಾದವರಲ್ಲಿ ಜ್ವರದ ಜತೆಗೆ ವಾಂತಿ ಮತ್ತು ಅತಿಸಾರ ಕಾಣಿಸಿಕೊಳ್ಳುವುದರಿಂದ ದೇಹ ನಿರ್ಜಲೀಕರಣಗೊಳಿಸುವ ಸಾಧ್ಯತೆ ಇರುತ್ತೆ. ಸೋಂಕಿಗೆ ತುತ್ತಾದವರಿಗೆ ಸಾಕಷ್ಟು ನೀರು, ಹಣ್ಣಿನ ಜ್ಯೂಸ್​ ನೀಡಬೇಕು. ಶೀತ ಕಾಣಿಸಿಕೊಳ್ಳುವುದರಿಂದ ವೈದ್ಯರ ಸಲಹೆಯನ್ನ ಪಾಲಿಸಬೇಕು. ಮಗುವಿನ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಿಸಿ ಹಾಗೂ ತಾಜಾ ಆಹಾರ ನೀಡಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ನೀಡಬಾರದು. ಬದಲಾಗುತ್ತಿರುವ ಹವಾಮಾನದಿಂದ ಅಡಿನೋ ವೈರಸ್ ಉಪಟಳ ಹೆಚ್ಚುತ್ತಿದ್ದು ಮಕ್ಕಳ ಆರೈಕೆಯಲ್ಲಿ ನೋ ಕಾಂಪ್ರಮೈಸ್​ ಅಂತಿದ್ದಾರೆ ವೈದ್ಯರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಎಚ್ಚರ! ಮಕ್ಕಳನ್ನು ಕಾಡುತ್ತಿದೆ ಹೊಸ ವೈರಸ್; ಇದು ಓದಲೇಬೇಕಾದ ಸ್ಟೋರಿ

https://newsfirstlive.com/wp-content/uploads/2023/09/viras-1.jpg

Load More