newsfirstkannada.com

ಬ್ರಹ್ಮಾಸ್ತ್ರ ರೆಕಾರ್ಡ್​ ಬ್ರೇಕ್​ ಮಾಡಿದ ಆದಿಪುರುಷ.. ಫಸ್ಟ್​ ಡೇ ಪ್ರಭಾಸ್ ಸಿನಿಮಾದ ಕಲೆಕ್ಷನ್ ಎಷ್ಟು ಕೋಟಿ?

Share :

17-06-2023

    ಬಹುನಿರೀಕ್ಷಿತ ಆದಿಪುರುಷ ಸಿನಿಮಾದ ಫಸ್ಟ್​ ಡೇ ಕಲೆಕ್ಷನ್ ಎಷ್ಟು ಕೋಟಿ?

    ಪಠಾಣ್, KGF- 2 ಸಿನಿಮಾ​ ನಂತರದ ಸ್ಥಾನ ಪಡೆದ ಆದಿಪುರುಷ ಕಲೆಕ್ಷನ್

    ವಿವಾದ, ಟೀಕೆ ಏನೇ ಇದ್ರೂ ಬಾಕ್ಸ್​ ಆಫೀಸ್​ನಲ್ಲಿ ಕೋಟಿ, ಕೋಟಿ ಗಳಿಕೆ

ಬಾಹುಬಲಿ ಪ್ರಭಾಸ್‌ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಆದಿಪುರುಷ’ ನಿನ್ನೆ ವಿಶ್ವದಲ್ಲೆಡೆ ತೆರೆಗೆ ಅಪ್ಪಳಿಸಿದೆ. ಆದಿಪುರುಷ ಚಿತ್ರವು ಬಿಡುಗಡೆಯಾದ ಒಂದೇ ದಿನಕ್ಕೆ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ರಣಬೀರ್​ ಕಪೂರ ನಟನೆಯ ಬ್ರಹ್ಮಾಸ್ತ್ರ ಸಿನಿಮಾವನ್ನು ಗಳಿಕೆಯಲ್ಲಿ ಹಿಂದಿಕ್ಕಿ ಮುನ್ನುಗ್ಗುತ್ತಿದೆ.

ಪ್ರಭಾಸ್​ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಆದಿಪುರುಷ ಸಿನಿಮಾ ಮೊದಲ ದಿನ ಹಿಂದಿ ಭಾಷೆಯಲ್ಲಿ ಬರೋಬ್ಬರಿ 38 ಕೋಟಿ ರೂ.ಗಳನ್ನು ಸಂಗ್ರಹ ಮಾಡಿದೆ. ಹಿಂದಿ ಚಿತ್ರರಂಗದಲ್ಲಿ​ ಬ್ರಹ್ಮಾಸ್ತ್ರ ಸಿನಿಮಾದ ರೆಕಾರ್ಡ್​ ಅನ್ನು ಬ್ರೇಕ್​ ಮಾಡಿದಂತಾಗಿದೆ. ಬ್ರಹ್ಮಾಸ್ತ್ರವು ರಿಲೀಸ್ ಆದ ದಿನ 36 ಕೋಟಿ ರೂ.ಗಳನ್ನು ಗಳಿಕೆ ಮಾಡಿತ್ತು. ಶಾರುಖ್‌ ಖಾನ್​ ನಟಿಸಿದ ಪಠಾಣ್ ಮತ್ತು ಯಶ್​ ಅವರ ಕೆಜಿಎಫ್- 2 ನಂತರ ಅತಿದೊಡ್ಡ ಓಪನಿಂಗ್ ಸಿಕ್ಕ 3ನೇ ಸಿನಿಮಾ ಆದಿಪುರುಷ ಆಗಿದೆ.

ಹಿಂದಿ ಭಾಷೆಯಲ್ಲಿ ಮಾತ್ರ ಆದಿಪುರುಷ ಸಿನಿಮಾ 38 ಕೋಟಿ ರೂ.ಗಳನ್ನು ಬಾಕ್ಸ್​ ಆಫೀಸ್​ನಲ್ಲಿ ಕಲೆಕ್ಷನ್ ಮಾಡಿದೆ. ಇನ್ನು ಸಿನಿಮಾ ರಿಲೀಸ್​ ಆದ ಹಿಂದಿ ಸೇರಿ ಇನ್ನುಳಿದ ಭಾರತದ ಭಾಷೆಗಳಲ್ಲಿನ ಕಲೆಕ್ಷನ್ ತೆಗೆದುಕೊಂಡರೇ ಒಟ್ಟು 90 ಕೋಟಿ ರೂ.ಗಳನ್ನು ಆದಿಪುರುಷ ಬಾಚಿಕೊಂಡಿದೆ. ಇದರ ಜೊತೆಗೆ ಈ ಸಿನಿಮಾ ವಿಶ್ವದಲ್ಲೆಡೆ ಜಬರ್ದಸ್ತ್​ ಆಗಿ ದುಡ್ಡನ್ನು ಕೊಳ್ಳೆ ಹೊಡೆದಿದೆ. ಅಂದರೆ ವಿಶ್ವದಲ್ಲೆಡೆ ರಿಲೀಸ್​ ಆದ 2ನೇ ದಿನಕ್ಕೆ 150 ಕೋಟಿ ರೂ.ಗಳನ್ನು ಆದಿಪುರುಷ ಬಾಚಿಕೊಂಡಿದೆ.

ಈ ಮೊದಲು ಹಿಂದಿ ವರ್ಷಿನ್​ನಲ್ಲಿ ರಿಲೀಸ್​ ಆಗಿದ್ದ ಯಶ್​ ಅಭಿನಯದ KGF- 2 ಸಿನಿಮಾ 54 ಕೋಟಿ ರೂ.ಗಳನ್ನು ಗಳಿಸಿ ಬಾಕ್ಸ್​ ಆಫೀಸ್​ ಅನ್ನು ಚಿಂದಿ ಮಾಡಿತ್ತು. ಕಳೆದ ವರ್ಷ ರಿಲೀಸ್​ ಆಗಿದ್ದ ಶಾರುಖ್​ ನಟನೆಯ ಪಠಾಣ್ ಸಿನಿಮಾ 57 ಕೋಟಿ ರೂ.ಗಳನ್ನು ಗಳಿಸಿ KGF- 2 ಸಿನಿಮಾದ ರೆಕಾರ್ಡ್​ ಬ್ರೇಕ್​ ಮಾಡಿತ್ತು. ಸದ್ಯ ಆದಿಪುರುಷ ಸಿನಿಮಾ 38 ಕೋಟಿ ರೂ.ಗಳನ್ನು ಸಂಗ್ರಹ ಮಾಡಿ ಪಠಾಣ್, KGF- 2 ಸಿನಿಮಾ​ ನಂತರದ ಸ್ಥಾನ ಪಡೆದುಕೊಂಡಿದೆ.

ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ರೆ, ರಾವಣ ಪಾತ್ರದಲ್ಲಿ ಸೈಫ್ ಅಲಿಖಾನ್ ಅಭಿನಯಿಸಿದ್ದಾರೆ. ಶ್ರೀರಾಮನ ಪತ್ನಿ ಸೀತೆಯ ಪಾತ್ರದಲ್ಲಿ ನಟಿ ಕೃತಿ ಸನೋನ್ ಸಿನಿಮಾದಲ್ಲಿದ್ದಾರೆ. ಈ ಚಿತ್ರವು ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿ ಒಟ್ಟು 5 ಭಾಷೆಗಳಲ್ಲಿ ತೆರೆ ಕಂಡಿದೆ. ಇನ್ನು, ಈ ಸಿನಿಮಾವನ್ನು ನೋಡಿದ ಪ್ರಭಾಸ್​ ಅಭಿಮಾನಿಗಳು ಚಿತ್ರ ಚನ್ನಾಗಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಬ್ರಹ್ಮಾಸ್ತ್ರ ರೆಕಾರ್ಡ್​ ಬ್ರೇಕ್​ ಮಾಡಿದ ಆದಿಪುರುಷ.. ಫಸ್ಟ್​ ಡೇ ಪ್ರಭಾಸ್ ಸಿನಿಮಾದ ಕಲೆಕ್ಷನ್ ಎಷ್ಟು ಕೋಟಿ?

https://newsfirstlive.com/wp-content/uploads/2023/06/PRABHAS_ADIPURUSH.jpg

Load More