‘ಮಹಾಭಾರತ’ ರಾಜಮೌಳಿಯ ಡ್ರೀಮ್ ಪ್ರಾಜೆಕ್ಟ್
ರಾಜಮೌಳಿಯ ಹಳೇ ವಿಡಿಯೋ ವೈರಲ್, ಮಾತಾಡಿದ್ದೇನು?
ಜಕ್ಕಣ್ಣನ ಪ್ರತಿ ಸಿನಿಮಾದಲ್ಲೂ ರಾಮ, ರಾಮಾಯಣದ ಪ್ರತಿಬಿಂಬ
ಆದಿಪುರುಷ್ ಸಿನಿಮಾ ನೋಡಿದ್ಮೇಲೆ ಪ್ರತಿಯೊಬ್ಬ ಪ್ರೇಕ್ಷಕನಿಗೂ ಅನಿಸ್ತಿರೋದೊಂದೇ ಇದನ್ನು ರಾಜಮೌಳಿ ಮಾಡ್ಬೇಕಿತ್ತು.. ರಾಜಮೌಳಿ ಮಾಡಿದ್ರೆ ಮತ್ತೊಂದು ಬಾಹುಬಲಿ ಅಥವಾ ತ್ರಿಬಲ್ ಆರ್ ಆಗ್ತಿತ್ತು. ರಾಮಾಯಣ ಆಧರಿಸಿ ತಯಾರಾಗಿದ್ದ ಆದಿಪುರುಷ್ ಸಿನಿಮಾಗೆ ಭಾರಿ ವಿರೋಧ ವ್ಯಕ್ತವಾಗಿದೆ. ಪಾತ್ರಗಳ ಪ್ರೆಸೆಂಟೇಶನ್, ಮೇಕಿಂಗ್, ಸಂಭಾಷಣೆ ಎಲ್ಲದರಲ್ಲಿಯೂ ಚಿತ್ರತಂಡ ಎಡವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾಗಿ, ಪೌರಾಣಿಕ ಸಿನಿಮಾಗಳ ಮಾಡೋದಾದ್ರೆ ಅದು ಒಬ್ಬ ರಾಜಮೌಳಿಯಿಂದ ಸಾಧ್ಯ ಅನ್ನೋ ಮಾತುಗಳು ಈಗ ಚರ್ಚೆಗೆ ಬಂದಿದೆ.
ರಾಜಮೌಳಿ ರಾಮಾಯಣದ ಕಥೆ ಮಾಡ್ತಾರಾ? ರಾಮನ ಚರಿತ್ರೆ ಹೇಳ್ತಾರಾ ಎಂಬ ಕುತೂಹಲ ಕಾಡ್ತಿರೋವಾಗಲೇ ರಾಜಮೌಳಿ ಶ್ರೀರಾಮನ ಬಗ್ಗೆ ಮಾತಾಡಿರೋ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಾಜಮೌಳಿ ಅವತಾರಪುರುಷ ಶ್ರೀರಾಮನ ಬಗ್ಗೆ, ರಾಮನ ಸ್ವಭಾವದ ಬಗ್ಗೆ ಮಾತಾಡಿದ್ದಾರೆ. ಇದನ್ನ ಕೇಳಿದ ಸಿನಿಫ್ಯಾನ್ಸ್ ರಾಜಮೌಳಿ ಅವರೇ ದಯವಿಟ್ಟು ರಾಮಾಯಣ ಸಿನಿಮಾ ಮಾಡಿ ಅಂತ ಆಗ್ರಹಿಸ್ತಿದ್ದಾರೆ. ಅಷ್ಟಕ್ಕೂ ರಾಜಮೌಳಿಯ ಹಳೆ ವಿಡಿಯೋದಲ್ಲಿ ಏನು ಹೇಳಿದ್ದಾರೆ?
ರಾಮ-ಕೃಷ್ಣ ಇಬ್ಬರು ದೇವರು.. ದೇವರು ಅನ್ನೋದು ಪಕ್ಕಕ್ಕಿಟ್ಟು ನೋಡಿದ್ರೆ ಮನುಷ್ಯರಾಗಿ ಹುಟ್ಟಿ ಅವ್ರ ಸ್ವಭಾವ ಮತ್ತು ಸಾಧನೆಯಿಂದ ಅವರು ನಮಗೆ ದೇವರಾದ್ರು. ಸಾಮಾನ್ಯವಾಗಿ ಅವರು ಮನುಷ್ಯರು. ಒಂದು ಕಮರ್ಷಿಯಲ್ ಸಿನಿಮಾದ ಉದ್ದೇಶದಿಂದ ನೋಡಿದ್ರೆ ಶ್ರೀಕೃಷ್ಣನಿಗೆ 16 ಸಾವಿರ ಗರ್ಲ್ಫ್ರೆಂಡ್ಸ್ ಇದ್ದರು, ತುಂಬಾ ಲವಲವಿಕೆ ವ್ಯಕ್ತಿತ್ವ ಹೊಂದಿದ್ದರು. ನಮ್ಮ ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಲ್ಲಿ ಹೀರೋಗೆ ಏನೆಲ್ಲಾ ಗುಣಗಳು ಇರಬೇಕು ಅದೆಲ್ಲವೂ ಕೃಷ್ಣನಲ್ಲಿದೆ. ಆದ್ರೆ ರಾಮನ ಪಾತ್ರ ತಗೊಂಡ್ರೆ ತುಂಬಾ ಬೋರಿಂಗ್. ಒಂದೇ ಹುಡುಗಿ ಹಿಂದೆ ತಿರುಗ್ತಾನೆ. ಗಟ್ಟಿಯಾಗಿ ಮಾತಾಡಲ್ಲ. ತುಂಬಾ ಮೃದು ವ್ಯಕ್ತಿತ್ವ. ದೊಡ್ಡವರು ಹೇಳಿದ್ದನ್ನ ಕೇಳಿಸಿಕೊಂಡು ಹೋಗ್ತಾನೆ. ಹಾಗಾಗಿ ರಾಮ ರೆಗ್ಯುಲರ್ ಕಮರ್ಷಿಯಲ್ ಹೀರೋ ಅಲ್ಲ. ಆದ್ರೆ ಭಾರತದಲ್ಲಿ ಒಂದು ಕೃಷ್ಣನ ದೇವಾಲಯ ಇದ್ರೆ 50 ರಾಮನ ದೇವಾಸ್ಥಾನ ಇರುತ್ತೆ. ಕೃಷ್ಣನ ಬಗ್ಗೆ ಏನಾದ್ರು ಹೇಳಿದ್ರೆ ಸುಮ್ಮನಿರ್ತಾರೆ, ಆದ್ರೆ ರಾಮನ ಬಗ್ಗೆ ಮಾತಾಡಿದ್ರೆ ತೆಡೆದುಕೊಳ್ಳಲ್ಲ. ಆವೇಷ ಕಿತ್ತುಕೊಂಡು ಬರುತ್ತೆ. ರಾಮ ಅಂದ್ರೆ ಅಷ್ಟು ವೀರಪ್ರದರ್ಶನ ಮಾಡ್ತಾರೆ.
ರಾಜಮೌಳಿ, ನಿರ್ದೇಶಕ
ನಮ್ಮ ದೇಶದಲ್ಲಿ ಯಾಕೆ ಹೀಗೆ ಅಂತ ಆಲೋಷಿಸಿದ್ರೆ ವಾಲ್ಮಿಕಿ ರಾಮಾಯಣದಲ್ಲಿ ಕೆಲವು ಮಾಸ್ ಪಾತ್ರಗಳಿವೆ. ಹನುಮಂತ, ಲಕ್ಷ್ಮಣ ಅಂತಹ ಪಾತ್ರಗಳು ರಾಮನಿಗಾಗಿ ಜೀವ ಕೊಡ್ತಾರೆ. ಡೈರೆಕ್ಟ್ ಹೀರೋಯಿಸಂ ಅಲ್ಲ, ಇನ್ಡೈರೆಕ್ಟ್ ಹೀರೋಯಿಸಂ ನೋಡಬಹುದು. ಒಬ್ಬ ಮೃದ ವ್ಯಕ್ತಿಯ ಸುತ್ತ ಕೆಲವು ಗಟ್ಟಿ ಪಾತ್ರಗಳನ್ನ ಗಮನಿಸಿದ ನಾನೊಂದು ಕಥೆ ಮಾಡ್ಕೊಂಡೆ. ಅಮರೇಂದ್ರ ಬಾಹುಬಲಿಯಲ್ಲಿ ನಾನು ರಾಮನ ಕಂಡೆ, ಕಟ್ಟಪ್ಪ, ದೇವಸೇನಾ, ಶಿವಗಾಮಿ ಮಾಸ್ ಪಾತ್ರಗಳು ಇರಬೇಕು. ಅದು ನನಗೆ ವರ್ಕೌಟ್ ಆಯ್ತು ಎಂದಿದ್ದಾರೆ.
ಹಾಗೆ ನೋಡಿದ್ರೆ ರಾಜಮೌಳಿ ಮಾಡೋ ಪ್ರತಿ ಸಿನಿಮಾಗಳಲ್ಲಿಯೂ ರಾಮಾಯಣ ಅಥವಾ ಮಹಾಭಾರತದ ಪಾತ್ರಗಳು, ಸನ್ನಿವೇಶಗಳ ಸ್ಫೂರ್ತಿ ಇರುತ್ತೆ. ಸ್ವತಃ ರಾಜಮೌಳಿ ಹೇಳಿದಂತೆ ಬಾಹುಬಲಿ ಪಾತ್ರ ರಾಮನಿಂದ ಇನ್ಸ್ಪೈರ್ ಆಗಿದ್ದಂತೆ. ತ್ರಿಬಲ್ ಆರ್ ಚಿತ್ರದಲ್ಲೂ ರಾಮ್-ಭೀಮ್ ಪಾತ್ರಗಳು ರಾಮ-ಲಕ್ಷ್ಮಣನ ಛಾಯೆ ಹೊಂದಿತ್ತು. ಈಗ ಮಹೇಶ್ ಬಾಬು ಜೊತೆ ಸೈನ್ಸ್ ಫಿಕ್ಷನ್ ಸಿನಿಮಾ ಮಾಡ್ತಿದ್ದು, ಈ ಚಿತ್ರದಲ್ಲಿ ಮಹೇಶ್ ಬಾಬು ಅವರ ಪಾತ್ರ ಆಂಜನೇಯನಿಂದ ಸ್ಫೂರ್ತಿ ಪಡೆದುಕೊಂಡಿದೆಯಂತೆ. ಹೀಗೆ ಜಕ್ಕಣ್ಣನ ಪ್ರತಿ ಸಿನಿಮಾಗಳಲ್ಲಿಯೂ ರಾಮ, ರಾಮಾಯಣದ ಪ್ರತಿಬಿಂಬ ಕಾಣ್ತಿದೆ. ರಾಜಮೌಳಿ ಅವರೇಕೆ ಪೂರ್ಣ ಪ್ರಮಾಣದ ರಾಮಾಯಣ ಕುರಿತಾದ ಸಿನಿಮಾ ಮಾಡಬಾರದು ಅನ್ನೋದು ಈಗ ಅಭಿಮಾನಿಗಳ ಪ್ರಶ್ನೆ.
‘ಮಹಾಭಾರತ’ ರಾಜಮೌಳಿಯ ಡ್ರೀಮ್ ಪ್ರಾಜೆಕ್ಟ್
ಮಹಾಭಾರತ ಕುರಿತು ಸಿನಿಮಾ ಮಾಡ್ಬೇಕು ಅನ್ನೋದು ರಾಜಮೌಳಿಯ ಕನಸು. ಸದ್ಯಕ್ಕೆ ಇದು ಸಾಧ್ಯವಿಲ್ಲವಾದರೂ ಒಂದು ವೇಳೆ ಈ ಸಿನಿಮಾ ಕೈಗೆತ್ತಿಕೊಂಡರೇ ಇದೇ ನನ್ನ ಕೊನೆಯ ಚಿತ್ರವಾಗಬಹುದು ಅಂತ ಹೇಳಿಕೊಂಡಿದ್ದಾರೆ. ಯಾಕಂದ್ರೆ ಮಹಾಭಾರತ ಎನ್ನುವುದನ್ನ ಒಂದು ಚಿತ್ರದಲ್ಲಿ ತೋರಿಸೋಕೆ ಆಗಲ್ಲ. ಅದೊಂದು ಸರಣಿಯಾಗುತ್ತೆ. ಬಟ್ ಭವಿಷ್ಯದಲ್ಲಿ ಮಹಾಭಾರತದ ಮೇಲೆ ಸಿನಿಮಾ ಮಾಡಬೇಕು ಅನ್ನೋ ಆಸೆ ಇದೆ ಅಂತ ತುಂಬಾ ಸಲ ಹೇಳಿದ್ದಾರೆ. ಈಗ ಆದಿಪುರುಷ್ ಸಿನಿಮಾ ಫ್ಲಾಫ್ ಆದ ಕಾರಣ ರಾಜಮೌಳಿ ರಾಮಾಯಣ ಬೇಸ್ಡ್ ಸಿನಿಮಾ ಮಾಡಿ ಅನ್ನೋ ಕೂಗು ಜೋರಾಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್