newsfirstkannada.com

ಪ್ರಭಾಸ್​ಗೆ ನಿಲ್ಲದ ಸಂಕಷ್ಟ; ಮತ್ತೆ ಆದಿಪುರುಷ್​​​ ಸಿನಿಮಾ ವಿರುದ್ಧ ಹೈಕೋರ್ಟ್​ ಭಾರೀ​ ಅಸಮಾಧಾನ

Share :

Published June 28, 2023 at 8:11pm

    ಆದಿಪುರುಷ್​​​ ಚಿತ್ರ ತಂಡಕ್ಕೆ ಮತ್ತೊಮ್ಮೆ ಬಿಸಿ ಮುಟ್ಟಿಸಿದ ಅಲಹಾಬಾದ್ ಹೈಕೋರ್ಟ್

    ಇನ್ಮುಂದೆ ಧಾರ್ಮಿಕ ವಿಷಯಗಳ ಬಗ್ಗೆ ಸಿನಿಮಾ ಮಾಡಬೇಡಿ ಎಂದು ಕೋರ್ಟ್​​ ಆದೇಶ

    ಪ್ಯಾನ್​ ಇಂಡಿಯಾ ಸ್ಟಾರ್​​ ಪ್ರಭಾಸ್​​​ ಸಿನಿಮಾಗೆ ನಿಲ್ಲದ ಸಂಕಷ್ಟ, ಮುಂದಿನ ಕಥೆಯೇನು?

ಪ್ಯಾನ್‌ ಇಂಡಿಯಾ ಸಿನಿಮಾ ಆದಿಪುರುಷ್​​​ ಬ್ಯಾನ್ ಆಗುತ್ತಾ. ಅಲಹಾಬಾದ್ ಹೈಕೋರ್ಟ್ ಕೊಟ್ಟ ಖಡಕ್ ವಾರ್ನಿಂಗ್ ನೋಡಿದ್ರೆ ಇಂತಹದ್ದೊಂದು ಅನುಮಾನ ಬರದೇ ಇರಲ್ಲ. ಪಿಐಎಲ್‌ ಅರ್ಜಿಯ ವಿಚಾರಣೆ ವೇಳೆ ಆದಿಪುರುಷ ಚಿತ್ರತಂಡವನ್ನು ತರಾಟೆಗೆ ತೆಗೊಂಡ ಹೈಕೋರ್ಟ್‌, ಭಾರತೀಯ ಸೆನ್ಸಾರ್ ಮಂಡಳಿಗೂ ಎಚ್ಚರಿಕೆಯನ್ನು ನೀಡಿದೆ.

ಡಾರ್ಲಿಂಗ್​ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾ ಕಳೆದ ಜೂನ್ 16ರಂದು ಬಿಡುಗಡೆಯಾಗಿತ್ತು. ರಿಲೀಸ್ ಮೊದಲ ವಾರ ಭರ್ಜರಿ ಪ್ರದರ್ಶನ ಕಂಡ ಆದಿಪುರುಷ ಇದೀಗ ಮಕಾಡೆ ಮಲಗಿಕೊಂಡಿದೆ. ಇದೀಗ ವಿವಾದಗಳಿಂದಲೇ ಸುದ್ದಿಯಾಗಿ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ, ಕೋಟಿ ಗಳಿಕೆ ಮಾಡಬೇಕು ಎಂದು ಕನಸು ಕಂಡಿದ್ದ ಆದಿಪುರುಷ ಚಿತ್ರತಂಡ ನಷ್ಟದ ಸುಳಿಗೆ ಸಿಲುಕಿದೆ. ಆದಿಪುರುಷ ಸಿನಿಮಾ ತಂಡ ಇದೀಗ ಹೈಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗಿದೆ. ವಿವಾದಿತ ಅಂಚಿನಲ್ಲಿರುವ ಆದಿಪುರುಷ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ನಿನ್ನೆ  ಅಲಹಾಬಾದ್ ಹೈಕೋರ್ಟ್‌ ಸಿನಿಮಾದ ನಿರ್ದೇಶಕ, ನಿರ್ಮಾಪಕರಿಗೆ ಸಿಕ್ಕಾಪಟ್ಟೆ ತರಾಟೆ ತೆಗೆದುಕೊಂಡಿತ್ತು. ಜೊತೆಗೆ ಖಡಕ್ ವಾರ್ನಿಂಗ್ ನೀಡಿತ್ತು. ಇದೀಗ ಮತ್ತೆ ಆದಿಪುರುಷ ಚಿತ್ರ ತಂಡದ ವಿರುದ್ಧ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ.

ಕುರಾನ್ ಬಗ್ಗೆ ತಪ್ಪು ವಿಷಯಗಳನ್ನು ಸೇರಿಸಿ ಡಾಕ್ಯುಮೆಂಟರಿ ನಿರ್ಮಿಸಿದರೇ ಬಳಿಕ ಏನಾಗುತ್ತದೆ ಎಂದು ನೋಡಿ. ಧಾರ್ಮಿಕ ವಿಷಯಗಳ ಬಗ್ಗೆ ಯಾವುದೇ ಸಿನಿಮಾ ಮಾಡಬೇಡಿ. ಒಂದು ವೇಳೆ ಕುರಾನ್ ಬಗ್ಗೆ ಚಿಕ್ಕ ಡಾಕ್ಯುಮೆಂಟರಿಯಲ್ಲಿ ತಪ್ಪು ವಿಷಯವನ್ನು ಚಿತ್ರಿಸಿದ್ದರೂ ಪ್ರತಿಭಟನೆಗೆ ಕಾರಣವಾಗುತ್ತಿತ್ತು. ಯಾವುದೇ ಧರ್ಮವನ್ನು ತಪ್ಪು ತಪ್ಪಾಗಿ ತೋರಿಸಬೇಡಿ. ಕೋರ್ಟ್​ಗೆ ಯಾವುದೇ ಧರ್ಮ ಇಲ್ಲ. ನೀವು ಕುರಾನ್, ಬೈಬಲ್ ಬಗ್ಗೆ ಸಿನಿಮಾ ಮಾಡಲು ಹೋಗಬೇಡಿ ಎಂದು ಹೈಕೋರ್ಟ್‌ ವಾಗ್ದಾಳಿ ನಡೆಸಿದೆ. ಇನ್ನು ಇದರ ಜೊತೆಗೆ ಸಿನಿಮಾದ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆ, ಸೆನ್ಸಾರ್ ಬೋರ್ಡ್​ಗೆ ಹೈಕೋರ್ಟ್ ಸೂಚನೆ ನೀಡಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಪ್ರಭಾಸ್​ಗೆ ನಿಲ್ಲದ ಸಂಕಷ್ಟ; ಮತ್ತೆ ಆದಿಪುರುಷ್​​​ ಸಿನಿಮಾ ವಿರುದ್ಧ ಹೈಕೋರ್ಟ್​ ಭಾರೀ​ ಅಸಮಾಧಾನ

https://newsfirstlive.com/wp-content/uploads/2023/06/adipurusha-3.jpg

Load More