ಚಂದ್ರನ ಬೆನ್ನಲ್ಲೇ ಸೂರ್ಯನ ಮೇಲೆ ದೃಷ್ಟಿ ನೆಟ್ಟ ಇಸ್ರೋ
ಆದಿತ್ಯಯಾನಕ್ಕೆ ಬುನಾದಿ ಹಾಕಿದ್ದು ಯಾವ ನಗರದಲ್ಲಿ..?
ಸಾಧನೆಯ ಶಿಖರವೇರಲು ತುದಿಗಾಲಲ್ಲಿ ನಿಂತ ಇಸ್ರೋ..!
ಸೂರ್ಯನ ಸಮಗ್ರ ಅಧ್ಯಯನಕ್ಕೆ ಮುಂದಾಗಿರುವ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಮಹತ್ತರ ಮೈಲಿಗಲ್ಲಿಗೆ ಮುನ್ನುಡೆ ಬರೆಯಲಿದೆ. ನಿನ್ನೆ ವಿಕ್ರಂ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಸ್ಮೂತ್ ಲ್ಯಾಂಡಿಂಗ್ ಮಾಡಲಾಯಿತು. ಇದರ ಬೆನ್ನಲ್ಲೇ ಸೌರ ಮಿಷನ್ ಆದಿತ್ಯ-ಎಲ್ 1 ಉಪಗ್ರಹ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ.
ಚಂದ್ರಯಾನ-3 ಯಶಸ್ವಿನ ಬೆನ್ನಲ್ಲೇ ಇಸ್ರೋ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ನ ಮೊದಲ ವಾರದಲ್ಲಿ ಸೂರ್ಯನ ಅಧ್ಯಯನಕ್ಕಾಗಿ ಸೌರ ಮಿಷನ್ ಆದಿತ್ಯ-ಎಲ್1 ಉಪಗ್ರಹ ಉಡಾವಣೆ ಮಾಡುವ ಯೋಜನೆಯಲ್ಲಿದೆ. ಬಹುತೇಕ ಸೆಪ್ಟೆಂಬರ್ ಮೊದಲ ವಾರದಲ್ಲಿ ಆದಿತ್ಯ-L1 ಉಪಗ್ರಹ ಉಡಾವಣೆ ಮಾಡಲಿದ್ದೇವೆ. ಇದು ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ಉಪಗ್ರ ಎಂದು ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಸೂರ್ಯನ ಶಕ್ತಿಶಾಲಿ ಕಿರಣಗಳನ್ನು ಅಧ್ಯಯನ ಮಾಡಲು ಇಸ್ರೋ ಆದಿತ್ಯ ಉಪಗ್ರಹ ರೆಡಿ ಮಾಡಿದೆ. PSLV-C57 ಅಥವಾ ಆದಿತ್ಯ L1 ಸ್ಯಾಟಲೈಟ್ ಉಡಾವಣೆಗೆ ಸಜ್ಜಾಗಿದ್ದು ಇದರ ಬುನಾದಿ ಹಾಕಿದ್ದೇ ಬೆಂಗಳೂರಿನ ಯು.ಆರ್.ರಾವ್ ಸ್ಯಾಟಲೈಟ್ ಕೇಂದ್ರದಲ್ಲಿ ಎನ್ನುವುದು ವಿಶೇಷವಾಗಿದೆ. ಈಗಾಗಲೇ ಈ ಉಪಗ್ರಹವನ್ನು ಆಂಧ್ರದ ಶ್ರೀಹರಿಕೋಟಾ ಬಾಹ್ಯಾಕಾಶ ಉಡಾವಣಾ ಕೇಂದ್ರಕ್ಕೆ ರವಾನಿಸಲಾಗಿದೆ. ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಉಡಾವಣೆ ಮಾಡಲಾಗುತ್ತದೆ.
ಇದನ್ನು ಓದಿ: ISRO: ಚಂದ್ರಯಾನ 3 ಬಳಿಕ ‘ಸೂರ್ಯ’ಶಿಕಾರಿ; ಇಸ್ರೋ ‘ಆದಿತ್ಯ’ಯಾನ L1 ಸ್ಯಾಟಲೈಟ್ ಉಡಾವಣೆ ಯಾವಾಗ?
PSLV-C57 ಅಥವಾ ಆದಿತ್ಯ L1 ಸ್ಯಾಟಲೈಟ್ ಸೂರ್ಯನನ್ನು ಅಧ್ಯಯನ ಮಾಡುವ ಇಸ್ರೋದ ಮೊದಲ ಕಾರ್ಯಾಚರಣೆ ಆಗಿದೆ. ಈ ಉಪಗ್ರಹ 1,500 ಕೆ.ಜಿ ತೂಕ ಇದ್ದು ಇದು ಭೂಮಿಯಿಂದ ಸೂರ್ಯನ ಕಡೆಗೆ 15 ಲಕ್ಷ ಕಿ.ಮೀ ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್ 1 ರ ಕಕ್ಷೆಯಲ್ಲಿ ನೆಲೆಯಾಗಲಿದೆ. ಇಲ್ಲಿಂದ ಸೂರ್ಯನನ್ನು ಆದಿತ್ಯ ಅಧ್ಯಯನ ಮಾಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ