ಬಾಹ್ಯಾಕಾಶದಲ್ಲಿ ಆದಿತ್ಯ-L1 ನೌಕೆ ಸೆರೆ ಹಿಡಿದ ಅದ್ಭುತ ದೃಶ್ಯ
ಕತ್ತಲು, ಬೆಳಕಿನ ಆಟದಲ್ಲಿ ಭೂಮಿ, ಚಂದ್ರ ಹೇಗೆ ಕಾಣುತ್ತೆ ಗೊತ್ತಾ?
ಬಾಹ್ಯಾಕಾಶದ ಕೌತುಕಗಳಿಗೂ ಕನ್ನಡಿ ಹಿಡಿದ ಆದಿತ್ಯ-L1 ಫೋಟೋ
ಸೂರ್ಯನ ಶಿಕಾರಿಗೆ ಶರವೇಗದಲ್ಲಿ ಮುನ್ನುಗ್ಗುತ್ತಿರೋ ಇಸ್ರೋದ ಆದಿತ್ಯ-L1 ನೌಕೆ ಅದ್ಭುತ ದೃಶ್ಯವನ್ನ ಸೆರೆ ಹಿಡಿದಿದೆ. ಪ್ರತಿದಿನ ಭೂಮಿಯ ಮೇಲಿಂದ ನಾವೆಲ್ಲಾ ಚಂದ್ರನನ್ನ ನೋಡುತ್ತೇವೆ. ಅದೇ ಚಂದ್ರನಿಗೂ ಭೂಮಿಗೂ ಇರೋ ವ್ಯತ್ಯಾಸ ಏನು ಗೊತ್ತಾ? ಕತ್ತಲು, ಬೆಳಕಿನ ಆಟದಲ್ಲಿ ಭೂಮಿ, ಚಂದ್ರ ಹೇಗೆ ಕಾಣುತ್ತೆ. ಈ ಎಲ್ಲಾ ಬಾಹ್ಯಾಕಾಶದ ಕೌತುಕಗಳಿಗೂ ಆದಿತ್ಯ-L1 ಉತ್ತರ ನೀಡಿದೆ. ಇಸ್ರೋ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ಈ ದೃಶ್ಯವನ್ನು ಬಿಡುಗಡೆ ಮಾಡಲಾಗಿದೆ.
ಸೂರ್ಯನ ಅಧ್ಯಯನಕ್ಕೆ ತೆರಳಿರೋ ಆದಿತ್ಯ-L1 ಮಿಷನ್ ಸೆಲ್ಫಿಯನ್ನ ಕ್ಲಿಕ್ಕಿಸಿದೆ. ಇಸ್ರೋ ವಿಜ್ಞಾನಿಗಳು ಅದನ್ನ ಇಡೀ ದೇಶದ ಜನ ಕಣ್ತುಂಬಿಕೊಳ್ಳುವ ಅವಕಾಶ ಮಾಡಿಕೊಟ್ಟಿದ್ದಾರೆ. ಬಾಹ್ಯಾಕಾಶದಲ್ಲಿ ಭೂಮಿ ಮತ್ತು ಚಂದ್ರನ ಜೊತೆ ಆದಿತ್ಯ-L1 ಫೋಟೋವನ್ನು ತೆಗೆದಿದೆ. ಜೊತೆಗೆ ಭಾರತ ಹಾಗೂ ಏಷ್ಯಾ ಖಂಡದ ಮೇಲೆ ಕತ್ತಲು ಆವರಿಸುತ್ತಿರುವ ಕ್ಷಣವನ್ನು ಕಾಣಬಹುದಾಗಿದೆ.
Aditya-L1 Mission:
👀Onlooker!Aditya-L1,
destined for the Sun-Earth L1 point,
takes a selfie and
images of the Earth and the Moon.#AdityaL1 pic.twitter.com/54KxrfYSwy— ISRO (@isro) September 7, 2023
ಚಂದ್ರನ ಗಾತ್ರಕ್ಕೆ ಹೋಲಿಸಿದರೆ ಭೂಮಿ ಪ್ರತಿಶತ 81ರಷ್ಟು ದೊಡ್ಡದಾಗಿದೆ. ಆದಿತ್ಯ-L1 ಸೆರೆ ಹಿಡಿದ ದೃಶ್ಯದಲ್ಲೂ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸೆಪ್ಟೆಂಬರ್ 2ರಂದು ಇಸ್ರೋ ಆದಿತ್ಯ-L1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಲಾಂಗ್ರೇಜ್ ಪಾಯಿಂಟ್ 1 ಅನ್ನು ತಲುಪಿದೆ. ಒಟ್ಟು 4 ತಿಂಗಳು ಆದಿತ್ಯ-L1 15 ಲಕ್ಷ ಕಿಲೋ ಮೀಟರ್ ಪ್ರಯಾಣ ಮಾಡಲಿದೆ. ಆದಿತ್ಯ-L1 ನಿಗಧಿತ ಕಕ್ಷೆಯನ್ನು ತಲುಪಿದ ಬಳಿಕ ಪ್ರತಿ ದಿನ 1,440 ಫೋಟೋಗಳನ್ನು ತೆಗೆದು ಕಳುಹಿಸಲಿದೆ. ಇದರಿಂದ ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಸಹಕಾರಿಯಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ