ಸೂರ್ಯ- ಭೂಮಿಯ ನಡುವೆ ಇರುವ ಒಂದು ಕಕ್ಷೆ ಎಲ್-1
ಯಶಸ್ವಿ ಆದಿತ್ಯಾ L-1 ಉಡಾವಣೆಯಿಂದ ದೇಶಾದ್ಯಂತ ಸಂಭ್ರಮ
ಆದಿತ್ಯಾ L-1 ಉಡಾವಣೆ ಸಕ್ಸಸ್.. ಇಸ್ರೋಗೆ ಪ್ರಧಾನಿ ವಿಶ್
ಚಂದ್ರಯಾನ-3 ಯಶಸ್ಸಿನ ಅಲೆಯಲ್ಲೇ ಇಸ್ರೋ ವಿಜ್ಞಾನಿಗಳು ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಸೂರ್ಯನನ್ನು ಹಣ್ಣೆಂದು ಬಾವಿಸಿ ತಿನ್ನಲು ಹೋದ ಹನುಮಂತನಂತೆ, ಆದಿತ್ಯ ಎಲ್-1 ನೌಕೆ, ಸೂರ್ಯನ ಅಂತರಾಳದ ಸತ್ಯ ಜಗತ್ತಿಗೆ ತಿಳಿಸಲು ಯಶಸ್ವಿಯಾಗಿ ಉಡಾವಣೆಯಾಗಿದೆ. ಇಸ್ರೋ ವಿಜ್ಞಾನಿಗಳ ಈ ಅವಿರತ ಶ್ರಮಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಚಂದ್ರಯಾನ-3 ಬಳಿಕ ಇಸ್ರೋ ಮತ್ತೊಂದು ಸಾಹಸ
ಸೂರ್ಯನ ರಹಸ್ಯ ಬೇಧಿಸಲು ಹೊರಟ ‘ಆದಿತ್ಯ’
ಚಂದ್ರಯಾನ-3ರ ಯಶಸ್ಸಿನ ನಂತರ ಇಡೀ ಜಗತ್ತು ಭಾರತದ ಸೌರ ಬಾಹ್ಯಾಕಾಶ ಯೋಜನೆ ಆದಿತ್ಯ-ಎಲ್ 1ನತ್ತ ಗಮನ ನೆಟ್ಟಿತ್ತು. ಇದೀಗ ಭಾರತದ ವಿಜ್ಞಾನಿಗಳು ಆದಿತ್ಯ-ಎಲ್1 ಉಡಾವಣೆಯಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಸೂರ್ಯನ ಒಡಲಾಳದಲ್ಲಿರುವ ರಹಸ್ಯಗಳನ್ನು ಭೇದಿಸಲು ಆದಿತ್ಯನನ್ನು ಸೌರಮಂಡಲಕ್ಕೆ ಯಶಸ್ವಿಯಾಗಿ ಕಳಿಸಿದೆ. ಇದರೊಂದಿಗೆ ಸೂರ್ಯನ ಅಧ್ಯಯನಕ್ಕಾಗಿ ನೌಕೆ ಕಳುಹಿಸಿದ ಜಗತ್ತಿನ 3ನೇ ದೇಶ ಎಂಬ ಮತ್ತೊಂದು ವಿಶಿಷ್ಟ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣ ಕೇಂದ್ರದಿಂದ ಬೆಳಗ್ಗೆ 11.50ಕ್ಕೆ ಆದಿತ್ಯ ಎಲ್-1 ನೌಕೆ ಯಶಸ್ವಿಯಾಗಿ ಉಡಾವಣೆ ಆಯ್ತು. ಆದಿತ್ಯ ನೌಕೆ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಚಿಮ್ಮುತ್ತಿದ್ದಂತೆ ದೇಶಾದ್ಯಂತ ಹರ್ಷೋದ್ಗಾರ ಮುಗಿಲುಮುಟ್ಟಿತು.
ವಿಜ್ಞಾನಿಗಳು ಚಪ್ಪಾಳೆ ತಟ್ಟುವ ಮೂಲಕ ಸಂತಸ ವ್ಯಕ್ತಪಡಿಸಿದ್ದರು. ಇಸ್ರೋದ ಮಹತ್ವಾಕಾಂಕ್ಷಿ ಆದಿತ್ಯ ಎಲ್-1 ನೌಕೆ ಉಡಾವಣೆ ಯಶಸ್ವಿಯಾಗಿದೆ. 4ನೇ ಹಂತದಲ್ಲೂ ನೌಕೆ-ರಾಕೆಟ್ ಬೇರ್ಪಡುವ ಕಾರ್ಯ ಯಶಸ್ವಿಯಾಗಿದ್ದು, ಬಾಹ್ಯಾಕಾಶ ನೌಕೆಯನ್ನು ನಿಖರ ಕಕ್ಷೆಯಲ್ಲಿ ಸೇರಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಇಂದಿನ ಸಾಧನೆಯನ್ನು ಸೂರ್ಯನ ಕ್ಷಣ ಎಂದು ಬಣ್ಣಿಸಿದರು. ಆದಿತ್ಯ ಎಲ್-1 ಉಪಗ್ರಹ ಬರೋಬ್ಬರಿ 1500 ಕೆಜಿ ತೂಕ ಇದೆ. ಸುಮಾರು 400 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ. ಲಾಗ್ರೇಂಜ್ ಪಾಯಿಂಟ್ ಒಂದರ ಕಕ್ಷೆಯಲ್ಲಿ ನೆಲೆಯಾಗಲಿದೆ. ಭೂಮಿಯಿಂದ 15 ಲಕ್ಷ ಕಿಮೀ ದೂರದಲ್ಲಿದೆ ಈ ಲಾಗ್ರೇಂಜ್ ಪಾಯಿಂಟ್. ಸೌರ ಚಟುವಟಿಕೆ, ಬಾಹ್ಯಾಕಾಶ ವಾತಾವರಣ ಬಗ್ಗೆ ಅಧ್ಯಯನವನ್ನು ಆದಿತ್ಯ ನಡೆಸಲಿದ್ದಾನೆ. ಇನ್ನು ಕಡಿಮೆ ವೆಚ್ಚದಲ್ಲಿ ಸೂರ್ಯನ ಅಧ್ಯಯನ ಮಾಡ್ತಿರುವ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಿದೆ.

ಹನುಮಂತನಂತೆ ಸೂರ್ಯನತ್ತ ಆದಿತ್ಯ ಎಲ್-1 ನೌಕೆ ನೆಗೆದಿದ್ದು, ಈ ಯಶಸ್ವಿ ಉಡಾವಣೆ ಬಳಿಕ ಪ್ರಧಾನಿ ಮೋದಿಯವರು, ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮ ದೇಶದ ವಿಜ್ಞಾನಿಗಳ ಕಠಿಣ ಪರಿಶ್ರಮ ಮುಂದುವರಿಯಲಿದೆ. ಸಂಪೂರ್ಣ ಮಾನವನ ಕಲ್ಯಾಣಕ್ಕಾಗಿ ಪರಿಶ್ರಮ ಮುಂದುವರಿಯಲಿದೆ ಎಂದು ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ಮತ್ತಷ್ಟು ಹುರಿದುಂಬಿಸಿದ್ದಾರೆ. ಇನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಕೂಡ ಆದಿತ್ಯ ಎಲ್ ೧ ಯಶಸ್ವಿ ಉಡಾವಣೆಗಾಗಿ ಇಸ್ರೋ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಆದಿತ್ಯನ ಯಶಸ್ವಿ ಉಡಾವಣೆಗಾಗಿ ನಡೆದಿತ್ತು ಪೂಜೆ ಪುನಸ್ಕಾರ
ಇನ್ನು, ಆದಿತ್ಯ ಎಲ್-1 ನೌಕೆ ಯಶಸ್ವಿಯಾಗಿ ಉಡಾವಣೆ ಆಗಲಿ ಎಂದು ಇಡೀ ದೇಶವೇ ಪ್ರಾರ್ಥಿಸಿತ್ತು. ಬೆಳಗ್ಗೆಯಿಂದಲೇ ದೇಶದ ಮೂಲೆ ಮೂಲೆಯಲ್ಲೂ ಜನರು ವಿಶೇಷ ಪೂಜೆ-ಪುನಸ್ಕಾರ ಸಲ್ಲಿಸಿದ್ದರು. ಒಟ್ಟಾರೆಯಾಗಿ ದೇವ ಬಲ ಮತ್ತು ಇಸ್ರೋ ವಿಜ್ಞಾನಿಗಳ ಶ್ರಮದಿಂದ ಆದಿತ್ಯ ಎಲ್-1 ನೌಕೆ ಯಶಸ್ವಿಯಾಗಿ ಉಡಾವಣೆ ಆಗಿದೆ. 4ನೇ ಹಂತದಲ್ಲೂ ನೌಕೆ-ರಾಕೆಟ್ ಬೇರ್ಪಡುವ ಕಾರ್ಯ ಯಶಸ್ವಿಯಾಗಿದ್ದು, ಸೂರ್ಯನ ಅಂತರಾಳದಲ್ಲಿರುವ ರಹಸ್ಯವನ್ನು ಭೇದಿಸಲು ಸುದೀರ್ಘ ಪ್ರಯಾಣ ಆರಂಭಿಸಿದ್ದಾನೆ. ಆದಿತ್ಯ ಎಲ್-1 ನೌಕೆಯು ಸರಿಯಾದ ಕಕ್ಷೆಗೆ ಸೇರಿದೆ. ಇದೀಗ ಆದಿತ್ಯ ಎಲ್-1 ನೌಕೆಯು ಸೂರ್ಯನತ್ತ ಪ್ರಯಣ ಬೆಳೆಸಿದೆ. ಇದೊಂದು ಸುದೀರ್ಘವಾದ ಪ್ರಯಾಣ. ಸುಮಾರು 125 ದಿನ. ಈ ಆದಿತ್ಯ ಯೋಜನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ