newsfirstkannada.com

VIDEO: ಆದಿತ್ಯಯಾನಕ್ಕೂ ಮುನ್ನ ತಿಮ್ಮಪ್ಪನ ಮೊರೆ ಹೋದ ಇಸ್ರೋ ವಿಜ್ಞಾನಿಗಳು

Share :

Published September 1, 2023 at 2:51pm

Update September 1, 2023 at 3:21pm

    ನಾಳೆ ಇಸ್ರೋದ ಮಹತ್ವದ ಆದಿತ್ಯ L-1 ಮಿಷನ್ ಲಾಂಚ್

    ಆದಿತ್ಯL-1 ಮಿಷನ್​ನ ಮಾದರಿಗೆ ತಿಮ್ಮಪ್ಪನ ಮುಂದೆ ಪೂಜೆ

    ಚಂದ್ರಯಾನ-3 ಲಾಂಚ್​ ವೇಳೆಯು ವಿಜ್ಞಾನಿಗಳು ಭೇಟಿ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸೂರ್ಯನನ್ನು ಅಧ್ಯಯನ ಮಾಡುವ ಮಹತ್ವಾಕಾಂಕ್ಷೆ ಯೋಜನೆಯಾದ ಆದಿತ್ಯ L-1 ಮಿಷನ್ ಅನ್ನು ನಾಳೆ ಉಡಾವಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೋದ ವಿಜ್ಞಾನಿಗಳು, ಅಧಿಕಾರಿಗಳ ತಂಡ ಆದಿತ್ಯ L-1 ಮಿಷನ್​ನ ಮಾದರಿಯನ್ನು ತೆಗೆದುಕೊಂಡು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದೆ.

ಆಂಧ್ರ ಪ್ರದೇಶದ ತಿರುಮಲದ ವೆಂಕಟೇಶ್ವರ ದೇವಾಲಯಕ್ಕೆ ಆದಿತ್ಯ ಎಲ್-1 ಮಿಷನ್​ನ ಮಿನಿಚೇರ್ ಅಥವಾ ಮಾಡೆಲ್​​ ಅನ್ನು ತೆಗೆದುಕೊಂಡು ಇಸ್ರೋ ತಂಡವೊಂದು ಹೋಗಿದೆ. ಬಳಿಕ ಅದನ್ನು ದೇವರ ಮುಂದೆ ಇಟ್ಟು ವಿಜ್ಞಾನಿಗಳು, ಅಧಿಕಾರಿಗಳು ವಿಶೇಷ ಪೂಜೆ ಮಾಡಿ ಆದಿತ್ಯ ಯೋಜನೆ ಯಶಸ್ವಿ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಸದ್ಯ ಇಸ್ರೋ ವಿಜ್ಞಾನಿಗಳು ತಿರುಪತಿಗೆ ಭೇಟಿ ಕೊಟ್ಟ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನಾಳೆ ಪಿಎಸ್​ಎಲ್​ವಿ-ಸಿ57 ವೆಹಿಕಲ್ ಮೂಲಕ ಆದಿತ್ಯ ಎಲ್​-1 ಮಿಷನ್ ಉಡಾವಣೆ ಮಾಡಲಾಗುತ್ತದೆ. ಚಂದ್ರಯಾನ-3 ಉಡಾವಣೆ ಮಾಡುವುದಕ್ಕೂ ಮೊದಲು ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಇದೀಗ ಆದಿತ್ಯ ಎಲ್​-1 ಉಡಾವಣೆಗೂ ಮುನ್ನವೇ ವಿಜ್ಞಾನಿಗಳು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಆದಿತ್ಯಯಾನಕ್ಕೂ ಮುನ್ನ ತಿಮ್ಮಪ್ಪನ ಮೊರೆ ಹೋದ ಇಸ್ರೋ ವಿಜ್ಞಾನಿಗಳು

https://newsfirstlive.com/wp-content/uploads/2023/09/ISRO_TIRUPATI.jpg

Load More