newsfirstkannada.com

ಸೂರ್ಯನತ್ತ ಜಿಗಿದ ಆದಿತ್ಯಯಾನ ಎಷ್ಟು ದೂರ ಹೋಗಿದೆ; ಇಸ್ರೋ ಸಕ್ಸಸ್‌ನ ಲೇಟೆಸ್ಟ್ ಮಾಹಿತಿ ಇಲ್ಲಿದೆ

Share :

03-09-2023

    ಮೊದಲ ಹಂತದ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದ ಆದಿತ್ಯ-L1

    ಸೂರ್ಯನ ಅಧ್ಯಯನಕ್ಕೆ ಮಹಾಯಾನದ ಮೊದಲ ಹಂತ ಸಕ್ಸಸ್

    ಸೆಪ್ಟೆಂಬರ್ 5ರ ಮಧ್ಯಾಹ್ನ 3 ಗಂಟೆಗೆ ಮತ್ತೊಂದು ಕಕ್ಷೆಗೆ ಶಿಫ್ಟ್

ಚಂದ್ರಯಾನದ ಬಳಿಕ ಸೂರ್ಯನ ಶಿಕಾರಿಗಿಳಿದಿರೋ ಇಸ್ರೋ ಆದಿತ್ಯ-L1 ಮಿಷನ್ ಮೊದಲ ಹಂತವನ್ನು ಯಶಸ್ವಿಯಾಗಿ ಮುಗಿಸಿದೆ. ಆದಿತ್ಯ-L1 ನೌಕೆಯನ್ನು ಕಕ್ಷೆಗೆ ಏರಿಸುವ ಮೊದಲ ಹಂತದ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಈ ಮೂಲಕ ಸೂರ್ಯನ ಅಧ್ಯಯನಕ್ಕೆ ಮಹಾಯಾನ ಕೈಗೊಂಡಿರುವ ಇಸ್ರೋ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ.

ಇದನ್ನೂ ಓದಿ: ಚಂದ್ರನ ಮೇಲೆ ನಿದ್ರೆಗೆ ಜಾರಿದ ಪ್ರಗ್ಯಾನ್; ಇದು ಅಂತ್ಯವೋ? ಅಥವಾ ಆರಂಭವೋ?

ಆದಿತ್ಯ-L1 ಬಾಹ್ಯಾಕಾಶ ನೌಕೆಯು ಭೂಮಿಯ ಮೊದಲ ಹಂತದ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿರೋ ಫೋಟೋವನ್ನು ಇಸ್ರೋ ಹಂಚಿಕೊಂಡಿದೆ. ಸದ್ಯ ಆದಿತ್ಯ-L1 ಮೊದಲ ಕಕ್ಷೆಯನ್ನು ತಲುಪಿದ್ದು, 245 ಕಿಮೀ x 22459 ಕಿ.ಮೀ ದೂರವನ್ನು ತಲುಪಿದೆ. ಇನ್ನು 2ನೇ ಹಂತದ ಕಕ್ಷೆ ತಲುಪುವ ಪ್ರಕ್ರಿಯೆ ಸೆಪ್ಟೆಂಬರ್ 5ರ ಮಧ್ಯಾಹ್ನ 3 ಗಂಟೆಗೆ ನಿಗದಿಪಡಿಸಲಾಗಿದೆ. ಈ ಮೂಲಕ ಆದಿತ್ಯ L-1 ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.

ಆದಿತ್ಯ-L1 ಮಿಷನ್ ಅನ್ನು ಬೆಂಗಳೂರಿನ ISTRAC ಅಂದ್ರೆ ಟೆಲಿಮೆಟ್ರಿ, ಟ್ರಾಂಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಕೇಂದ್ರದಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯು ಸುಸ್ಥಿತಿಯಲ್ಲಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ತಿಳಿಸಿದೆ. ಆದಿತ್ಯ-L1 ಮಿಷನ್ 125 ದಿನ ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಗ್ರಾಂಜಿಯನ್ ಪಾಯಿಂಟ್ ಅನ್ನು ತಲುಪಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸೂರ್ಯನತ್ತ ಜಿಗಿದ ಆದಿತ್ಯಯಾನ ಎಷ್ಟು ದೂರ ಹೋಗಿದೆ; ಇಸ್ರೋ ಸಕ್ಸಸ್‌ನ ಲೇಟೆಸ್ಟ್ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2023/09/Aditya-L-1.jpg

Load More