newsfirstkannada.com

×

ಚಂದ್ರಯಾನ-3 ಬೆನ್ನಲ್ಲೇ ಮತ್ತೊಂದು ಸಾಹಸಕ್ಕೆ ಕೈ ಹಾಕಿದ ಇಸ್ರೋ; ‘ಆದಿತ್ಯಯಾನ’ ಅಧ್ಯಯನ ಹೇಗೆ?

Share :

Published August 31, 2023 at 6:30am

Update August 31, 2023 at 6:39am

    ಕೊನೆ ಹಂತ ತಲುಪಿದ ಮಹತ್ವದ ಆದಿತ್ಯಯಾನ ಯೋಜನೆ

    ಆದಿತ್ಯ-L1 ಯಾವ ರಾಕೆಟ್​ ಮೂಲಕ ಲಾಂಚ್​ ಮಾಡ್ತಾರೆ.?

    ಈ ಬಗ್ಗೆ ಮಾಹಿತಿ ನೀಡಿದ ಭಾರತದ ಬಾಹ್ಯಾಕಾಶ ಸಂಸ್ಥೆ..!

ನವ ದೆಹಲಿ: ಮೊನ್ನೆ ಮೊನ್ನೆಯಷ್ಟೇ ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ-3 ಯೋಜನೆಯಲ್ಲಿ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೇ ಇಸ್ರೋ ಮತ್ತೊಂದು ವಿಶೇಷ ಸಾಧನೆ ಮಾಡುತ್ತಿದ್ದು ಈ ಬಾರಿ ನೇರ ಸೂರ್ಯನನ್ನೇ ಟಾರ್ಗೆಟ್ ಮಾಡಿದೆ. ಈಗಾಗಲೇ ಈ ಯೋಜನೆಯು ಕೊನೆ ಹಂತ ತಲುಪಿದ್ದು ಸೂರ್ಯನನ್ನ ಅಧ್ಯಯನ ಮಾಡುವ ಆದಿತ್ಯ-L1 ಮಿಷನ್​ನ ಪೂರ್ವಾಭ್ಯಾಸ (ರಿಹರ್ಸಲ್​)ವನ್ನು ಸದ್ಯ ಇಸ್ರೋ ಮುಗಿಸಿದೆ ಎಂದು ತಿಳಿದು ಬಂದಿದೆ.

ಆದಿತ್ಯ-L1 ಮಿಷನ್​ನ ಉಡಾವಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ಮಿಷನ್​ ಅನ್ನು ಲಾಂಚ್ ಮಾಡುವ ಕಾರ್ಯಕ್ಕಾಗಿ ಇಂದು ಪೂರ್ವಾಭ್ಯಾಸ ನಡೆಸಿ ರಾಕೆಟ್​ ವೆಹಿಕಲ್ ಅಂತರಿಕ ಪರೀಕ್ಷೆಯನ್ನು ಶ್ರೀಹರಿಕೋಟಾದಲ್ಲಿ ಮುಗಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಾಣದಿದ್ದರಿಂದ ಇಸ್ರೋ ಯಶಸ್ವಿಯಾಗಿ ರಿಹರ್ಸಲ್ ಮುಗಿಸಿದೆ. ಈ ಬಗ್ಗೆ ಇಸ್ರೋ ತನ್ನ ಅಧೀಕೃತ ಎಕ್ಸ್​ನಲ್ಲಿ ಮಾಹಿತಿ ನೀಡಿದ್ದು ಸೆಪ್ಟೆಂಬರ್​ 2 ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಮಿಷನ್​ ಅನ್ನು ಲಾಂಚ್​ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆದಿವೆ ಎಂದು ಇಸ್ರೋ ಮಾಹಿತಿ ನೀಡಿದೆ.

‘ಆದಿತ್ಯಯಾನ’ ಅಧ್ಯಯನ ಹೇಗೆ?

  • ಸೆ.2ರಂದು PSLV-C57 ರಾಕೆಟ್ ಮೂಲಕ ಉಡಾವಣೆ
  • ಆದಿತ್ಯ L​-1 ನೌಕೆ ಬರೋಬ್ಬರಿ 1,500 ಕೆ.ಜಿ ತೂಕ ಇರಲಿದೆ
  • ಸೌರ ಹಾಗೂ ಬಾಹ್ಯಾಕಾಶದಲ್ಲಿನ ವಾತಾವರಣದ ಅಧ್ಯಯನ
  • ಭೂಮಿ, ಸೂರ್ಯನ ಮಧ್ಯೆ ಲಾಗ್ರೇಂಜ್ ಪಾಯಿಂಟ್ ಇದೆ
  • 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್
  • ಲಾಗ್ರೇಂಜ್ ಪಾಯಿಂಟ್ 1ರ ಕಕ್ಷೆಯಲ್ಲಿ ‘ಆದಿತ್ಯ’ L​-1 ಲ್ಯಾಂಡ್
  • ‘ಆದಿತ್ಯ-ಎಲ್ 1’ ಸೂರ್ಯನ ನಿರಂತರವಾಗಿ ಅಧ್ಯಯನ ಮಾಡುತ್ತೆ
  • ‘ಆದಿತ್ಯ-ಎಲ್ 1’ ಕಕ್ಷೆ ತಲುಪಿ ಕಾರ್ಯಾಚರಿಸಲು 3-4 ತಿಂಗಳು ಬೇಕು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3 ಬೆನ್ನಲ್ಲೇ ಮತ್ತೊಂದು ಸಾಹಸಕ್ಕೆ ಕೈ ಹಾಕಿದ ಇಸ್ರೋ; ‘ಆದಿತ್ಯಯಾನ’ ಅಧ್ಯಯನ ಹೇಗೆ?

https://newsfirstlive.com/wp-content/uploads/2023/08/ADITYA_L1.jpg

Load More