newsfirstkannada.com

ಸೂರ್ಯನ ಸತ್ಯಾನ್ವೇಷಣೆಯತ್ತ ಆದಿತ್ಯನ ಚಿತ್ತ; ಭೂಮಿಯ 2ನೇ ಕಕ್ಷೆಯತ್ತ ಆದಿತ್ಯ ಎಲ್1​ ನೌಕೆ ಪಯಣ!

Share :

06-09-2023

  ಭೂಮಿಯಿಂದ 40,225 ಕಿ.ಮೀ ಕ್ರಮಿಸಿದ ಆದಿತ್ಯ ಎಲ್​ 1

  ಸೆಪ್ಟೆಂಬರ್ 10ರಂದು 3ನೇ ಕಕ್ಷೆ ಪ್ರವೇಶಿಸಲಿರೋ ಆದಿತ್ಯ

  ಲಾಂಗ್ರೇಂಜ್​ ಪಾಯಿಂಟ್​ ಸೇರುವ ತವಕದಲ್ಲಿ ‘ಆದಿತ್ಯ’!

ರವಿ ಅರಸಿ ಬಾಹ್ಯಾಕಾಶದಲ್ಲಿ ಭರದ ಓಟ ಆರಂಭಿಸಿರೋ ಆದಿತ್ಯ, ದಿನ ದಿನವೂ ಸುಡುವ ಸೂರ್ಯನಿಗೆ ಹತ್ತಿರವಾಗುತ್ತಿದ್ದಾನೆ. ಸಾಗುತ ದೂರಾ ದೂರಾ ಅಂತ 15 ಲಕ್ಷ​ ಕಿಲೋಮೀಟರ್​​ ದೂರದ ಹಾದಿಯನ್ನ ಆದಿತ್ಯ ಸವೆಸುತ್ತಿದ್ದಾನೆ. ಭೂಮಿಯ ಎರಡನೇ ಕಕ್ಷೆಗೆ ಪ್ರವೇಶ ಪಡೆದಿರೋ ಆದಿತ್ಯ ರವಿಯ ಕಾಣುವ ತವಕದಲ್ಲಿದ್ದಾನೆ.

ರವಿ ಕಾಣದ್ದನ್ನ ಕವಿ ಕಂಡ ಅನ್ನೋ ಮಾತಿದೆ. ಆದ್ರೆ ಆ ರವಿಯನ್ನೇ ಕಾಣುವ ತವಕದಲ್ಲಿ ಸದ್ಯ ಭಾರತೀಯರಾದ ನಾವಿದ್ದೇವೆ. ಶಶಿಯ ಶಿಖವನ್ನೇರಿ ಸಾಧನೆಯ ಘರ್ಜನೆ ಮೊಳಗಿಸಿದ್ದ ಇಸ್ರೋ ಸಂಸ್ಥೆ ಸೂರ್ಯನಿಗೆ ಟಾರ್ಚ್​ ಬಿಡೋಕೆ ಮುಂದಾಗಿದೆ. ಶಶಿಯ ಅರಸಿ ಬಹ್ಯಾಕಾಶದಲ್ಲಿ ಭರಾಟೆ ಶುರುಮಾಡಿರೋ ಆದಿತ್ಯ, ರವಿಯ ಒಡಲಿನ ಸತ್ಯಗಳ ಅನ್ವೇಷಣೆ ಕನಸು ಹೊತ್ತು ಮುನ್ನುಗ್ಗುತ್ತಿದ್ದಾನೆ. ಭೂಮಿಯ ಮೊದಲ ಕಕ್ಷೆಯಲ್ಲಿ ಕುಳಿತು ಸೂರ್ಯನತ್ತ ದೃಷ್ಟಿನೆಟ್ಟಿದ ಆದಿತ್ಯ ಇಂದು ಹೊಸ ಹಾದಿಯ ಹಿಡಿದು ಮುನ್ನುಗ್ಗಿದ್ದಾನೆ.

ಎರಡನೇ ಕಕ್ಷೆಯತ್ತ ಆದಿತ್ಯ ಎಲ್1​ ನೌಕೆ ಪಯಣ!

ಸಾಗುತ ದೂರಾ ದೂರಾ ಅಂತ ಭೂಮಿಯನ್ನ ಬಿಟ್ಟು ರವಿಮನೆಯ ಹಾದಿ ಹಿಡಿದಿರುವ ಆದಿತ್ಯ ಎಲ್​1 ನೌಕೆ ಭೂಮಿಗೆ ದೂರಾಗಿ ಸೂರ್ಯನಿಗೆ ಸಮೀಪವಾಗುತ್ತಿದೆ. ಸೆಪ್ಟೆಂಬರ್​ 2 ಶನಿವಾರ ಭೂಮಿಯಿಂದ ಜಿಗಿದು ನಭಕ್ಕೆ ಸೇರಿದ್ದ ಆದಿತ್ಯ ಇಂದು ಎರಡನೇ ಹಂತದಲ್ಲಿ ಸೂರ್ಯನತ್ತ ಚಿತ್ತ ನೆಟ್ಟು ಪ್ರಯಾಣ ಆರಂಭಿಸಿದ್ದಾನೆ.

ಭೂಮಿಯ 2ನೇ ಕಕ್ಷೆಗೆ ಪ್ರವೇಶ ಪಡೆದ ‘ಆದಿತ್ಯ’!

ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಉಡಾವಣೆ ಮಾಡಿರೋ ಆದಿತ್ಯ ಎಲ್-1 ಭೂಮಿಯ 2ನೇ ಕಕ್ಷೆ ಪ್ರವೇಶಿಸಿದೆ. ಕಳೆದ ರಾತ್ರಿ 2.45ರ ಹೊತ್ತಿಗೆ ಆದಿತ್ಯ L1 ಭೂಮಿಯ 2ನೇ ಕಕ್ಷೆಗೆ ಪ್ರವೇಶ ಪಡೆದಿದೆ. ಇನ್ನೂ ಸೆಪ್ಟೆಂಬರ್​ 10ರಂದು ಆದಿತ್ಯ ಎಲ್​1 ನೌಕೆ 3ನೇ ಕಕ್ಷೆಯನ್ನ ಪ್ರವೇಶಿಸಲಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.

ಒಂದರಿಂದ ಎರಡನೇ ಕಕ್ಷೆ. ಎರಡರಿಂದ ಮೂರನೇ ಹೀಗೆ ದಿನ ದಿನವೂ ಸೂರ್ಯನ ಸಮೀಪಿಸುವ ಕಾತರದಲ್ಲಿ ಆದಿತ್ಯನ ಪ್ರಯಾಣ ಮುಂದುವೆರಿದಿದೆ. ರವಿಯ ಅಧ್ಯಯನಕ್ಕೆ ಲಾಂಗ್ರೇಂಜ್ ಪಾಯಿಂಟ್​ ಸೇರಬೇಕಿರುವ ಆದಿತ್ಯ ಸದ್ಯ ಲಾಂಗ್ರೇಂಜ್ ಪಾಯಿಂಟ್‌ 1ರತ್ತ ಹೊರಟಿದ್ದಾನೆ. ಭೂಮಿಯಿಂದ 40,225 ಕಿಲೋ ಮೀಟರ್​ ದೂರ ಆದಿತ್ಯ ಕ್ರಮಿಸಿದ್ದು, ಇನ್ನೂ 15 ಲಕ್ಷ ಕಿಲೋ ಮೀಟರ್​ ಆದಿತ್ಯ ಪ್ರಯಾಣ ಬೆಳೆಸಬೇಕಿದೆ.

ಒಟ್ಟು 15 ಲಕ್ಷ ಕಿಲೋಮೀಟರ್​​ ದೂರದ ಆದಿತ್ಯನ ಸುದೀರ್ಘ ಪ್ರಯಾಣ ಸದ್ಯ ದಿನ ದಿನವೂ ಯಶಸ್ವಿಯಾಗಿ ಸಾಗ್ತಿದೆ. ಇನ್ನೂ 122 ದಿನಗಳ ಬಳಿಕ ಆದಿತ್ಯ ಎಲ್​1 ಸೂರ್ಯನ ಲಾಂಗ್ರೇಂಜ್​ ಪಾಯಿಂಟ್​ ತಲುಪಲಿದೆ. ಒಟ್ಟಿನಲ್ಲಿ ಚಂದ್ರನ ಪುಳಕಿಸಿದ ಇಸ್ರೋ ಸದ್ಯ ಸೂರ್ಯನ ಅನ್ವೇಷಿಸಲು ಇಟ್ಟ ಹೊಸ ಹೆಜ್ಜೆ ಇಡೀ ವಿಶ್ವವನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಭಾರತೀಯರ ಚಂದ್ರಯಾನ ಮತ್ತು ಸೂರ್ಯಯಾನದ ಸಾಧನೆ ವಿಶ್ವಮಟ್ಟದಲ್ಲಿ ಸದ್ದು ಮಾಡ್ತಿದ್ದು, ದೇಶವೇ ಹೆಮ್ಮೆಪಡುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೂರ್ಯನ ಸತ್ಯಾನ್ವೇಷಣೆಯತ್ತ ಆದಿತ್ಯನ ಚಿತ್ತ; ಭೂಮಿಯ 2ನೇ ಕಕ್ಷೆಯತ್ತ ಆದಿತ್ಯ ಎಲ್1​ ನೌಕೆ ಪಯಣ!

https://newsfirstlive.com/wp-content/uploads/2023/08/isro-5-1.jpg

Load More