ಪಿಎಸ್‌ಎಲ್‌ವಿ-ಸಿ57 ರಾಕೆಟ್ ಮೂಲಕ ಉಡಾವಣೆಗೆ ಸಿದ್ಧತೆ
ಸೂರ್ಯನ ಕುರಿತು ಅಧ್ಯಯನ ಮಾಡಲಿರುವ 4 ಉಪಕರಣಗಳು
ಆದಿತ್ಯ-L1 ಕಕ್ಷೆ ತಲುಪಿ ಕೆಲಸ ಆರಂಭಿಸಲು 125 ದಿನಗಳು ಬೇಕು
ಚಂದ್ರಕ್ರಾಂತಿಯ ಹೊಸ್ತಿಲಲ್ಲೇ ಇಸ್ರೋ ವಿಜ್ಞಾನಿಗಳು ಸೂರ್ಯ ಶಿಕಾರಿಗೆ ಮುಂದಾಗಿದ್ದಾರೆ. ಸೌರಮಂಡಲದ ಅಧಿಪತಿಯಾಗಿರೋ ಸೂರ್ಯನ ನಿಗೂಢ ರಹಸ್ಯಗಳನ್ನು ಭೇದಿಸೋದಕ್ಕೆ ಆದಿತ್ಯ ಹೆಸರಿನ ಎಂಟೆದೆ ಬಂಟನನ್ನು ಕಳುಹಿಸೋದಕ್ಕೆ ಇಸ್ರೋ ಸಜ್ಜಾಗಿದೆ. ಸದ್ಯ ಕೌಂಟ್ಡೌನ್ ಕೂಡ ಶುರುವಚಾಗಿದೆ.
ಸೂರ್ಯ ಸೌರಮಂಡಲವನ್ನ ಆಳುತ್ತಿರೋ ಸೌರಮಂಡಲಾಧಿಪತಿ. ಬಾಹ್ಯಾಕಾಶದ ಎಲ್ಲರ ಕೌತುಕ ಕೆರಳಿಸೋ ನಿಗೂಢ ನಕ್ಷತ್ರ. ಇದೀಗ ಈ ನಿಗೂಢ ಸೂರ್ಯನ ಶಿಕಾರಿಗೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಶಶಿಯನ್ನ ಚುಂಬಿಸಿದ್ದಾಯ್ತು. ಚಂದಿರನ ಅಂಗಳದಲ್ಲಿ ವಿಕ್ರಮ, ಪ್ರಗ್ಯಾನ್ ಪರ್ಯಟನೆ ಮಾಡಿದ್ದಾಯ್ತು. ಇನ್ನೇನಿದ್ರು ಇಸ್ರೋ ಟಾರ್ಗೆಟ್ ಬೆಂಕಿಯುಗುಳೋ ಸೂರ್ಯ. ಇದೀಗ ಚಂದ್ರನ ಮೇಲೆ ಕಾಲಿಟ್ಟು ಜಗತ್ತನ್ನೇ ನಿಬ್ಬೆರಗಾಗಿಸಿರೋ ಇಸ್ರೋ ವಿಜ್ಞಾನಿಗಳು ಭಾಸ್ಕರನ ಅಧ್ಯಯನಕ್ಕೆ ಹೊರಟಿದ್ದಾರೆ. ಸೂರ್ಯನನ್ನೇ ನುಂಗಲು ಹೋಗಿದ್ದ ಹನುಮನ ವಾರ ಅಂದ್ರೆ ಇಂದು ಆದಿತ್ಯನೆಡೆಗೆ ನೌಕೆಯನ್ನ ನುಗ್ಗಿಸಲು ಇಸ್ರೋ ಸಜ್ಜಾಗಿದೆ.
ಸೂರ್ಯ ಶಿಕಾರಿಗೆ ಸಜ್ಜಾದ ಭಾರತದ ಹೆಮ್ಮೆಯ ಇಸ್ರೋ
ಭೂಮಿಯಿಂದ ಅಸಂಖ್ಯ ಕಿಲೋಮೀಟರ್ ದೂರದಲ್ಲಿ ಬೆಂಕಿ ಉಂಡೆಯಂತೆ ಧಗಧಗಿಸೋ ಸೂರ್ಯನನ್ನ ನೋಡಿದ್ರೆ ಎಲ್ಲರಿಗೂ ಅಚ್ಚರಿ. ಸೂರ್ಯ ಅಲ್ಲಿ ಇರೋದ್ಹೇಗೆ? ಸೌರಮಂಡಲದ ಅಧಿಪತಿಯಲ್ಲಿ ಶಾಖ, ಬೆಳಕು ಹೇಗೆ ಉತ್ಪತ್ತಿಯಾಗುತ್ತೆ ಎಂದು ಹೀಗೆ ಹಲವು ಪ್ರಶ್ನೆಗಳು ಕಾಡುತ್ತಿವೆ. ಇದೀಗ ಜಗತ್ತನ್ನೇ ಕಾಡುತ್ತಿರೋ ಪ್ರಶ್ನೆಗಳಿಗೆ ಉತ್ತರ ನೀಡಲು ಇಸ್ರೋ ವಿಜ್ಞಾನಿಗಳು ಮೈಕೊಡವಿ ನಿಂತಿದ್ದಾರೆ. ಸೂರ್ಯನ ಆ ರಹಸ್ಯಗಳನ್ನು ಭೇದಿಸಲು ಆದಿತ್ಯ ಎಲ್-1 ಅನ್ನ ಸೂರ್ಯನತ್ತ ಕಳುಹಿಸಲು ಇಸ್ರೋ ಮುಂದಾಗಿದೆ.
‘ಸೂರ್ಯ’ ಶಿಕಾರಿ!
ಇನ್ನೂ ರವಿಯನ್ನ ಅರಸಿ ಭಾರತದಿಂದ ಉಡಾವಣೆ ಆಗಲಿರೋ ಆದಿತ್ಯ ಎಲ್-1 ಮಿಷನ್ ಲಾಗ್ರೇಂಜ್ ಪಾಯಿಂಟ್ ತಲುಪಿ ತನ್ನ ಕಾರ್ಯವನ್ನ ಆರಂಭಿಸಲಿದೆ.
ಸೂರ್ಯಶಿಕಾರಿಗೆ ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರಕ್ಕೆ ಹೋಗುತ್ತಿರೋ ಆದಿತ್ಯ ಎಲ್1 ನೌಕೆಯಲ್ಲಿ 7 ಅಸ್ತ್ರಗಳಿವೆ. ವೈಜ್ಞಾನಿಕ ಭಾಷೆಯಲ್ಲಿ ಅವುಗಳನ್ನು ಪೇ ಲೋಡ್ಸ್ ಎಂದು ಕರೆಯಲಾಗುತ್ತೆ. ಪೇ ಲೋಡ್‌ಗಳು ಅಂದ್ರೆ ಸಾಧನಗಳು, ಉಪಕರಣಗಳು. ಸೂರ್ಯನನ್ನು ವಿವಿಧ ಆಯಾಮದಲ್ಲಿ ಅಧ್ಯಯನ ಮಾಡುವುದು. ಅಧ್ಯಯನ ಮಾಡಿದ ಬಳಿಕ ವರದಿಯನ್ನು ಕಳುಹಿಸೋದು ಅವುಗಳ ಕೆಲಸ. ಅಷ್ಟಕ್ಕೂ.. ಆದಿತ್ಯನ ಬತ್ತಳಿಕೆಯಲ್ಲಿರೋ ಆ 7 ಸಾಧನಗಳ ಯಾವುದು ಅನ್ನೋ ಬಗ್ಗೆ ಇಸ್ರೋದ ಉಪನಿರ್ದೇಶಕರಾದ ಮಾಹಿತಿ ನೀಡಿದ್ದಾರೆ.
ಇದರಲ್ಲಿ 7 ಪೇಲೋಡ್ಗಳಿವೆ. ಅವುಗಳೆಂದರೆ, ವಿಸಿಬಲ್, ಎಮಿಷನ್, ಕರೋನಗ್ರಫಿ. ಸೋಲಾರ್ ಅಲ್ಟ್ರಾವೈಲೆಂಟಿಂಗ್ ಇಮೇಜಿಂಗ್ ಟೆಲಿಸ್ಕೋಫ್. ಸೋಲಾರ್ ಲೋ ಎನರ್ಜಿ ಎಕ್ಸ್ರೇ ಸ್ಪೆಕ್ರೋ ಮೀಟರ್, ಐ ಎನರ್ಜಿ ಎಲ್ 1 ಆರ್ಬಿಟಿಂಗ್ ಎಕ್ಸ್ರೇ ಸ್ಪೆಕ್ರೋ ಮೀಟರ್, ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್ಪ್ರೆಮೆಂಟ್, ಪ್ಲಾಸ್ಮಾ ಅನಾಲೈಸರ್ ಪ್ಯಾಕೇಜ್ ಫಾರ್ ಆದಿತ್ಯ, ಅಡ್ವಾನ್ಸ್ ಟ್ರೈಆಕ್ಸಿಲ್ ಹೈ ರೆಸ್ಯೂಲೆಷನ್ ಡಿಜಿಟಲ್ ಈ ಎಲ್ಲ ಪೇಲೋಡ್ಗಳಿ ಆದಿತ್ಯ ಎಲ್-1ನಲ್ಲಿ ಇವೆ.
ಡಾ.ಎಸ್.ವಿ ಶರ್ಮಾ, ಇಸ್ರೋ ಉಪನಿರ್ದೇಶಕರು
ತಿಮ್ಮಪ್ಪನಿಗೆ ಇಸ್ರೋ ಮುಖ್ಯಸ್ಥ ಸೋಮನಾಥ್‌ರಿಂದ ಪೂಜೆ
ಇನ್ನೂ ಚಂದ್ರಯಾನ-3ಗೂ ಮುನ್ನ ಇಸ್ರೋ ವಿಜ್ಞಾನಿಗಳು ತಿಮ್ಮಪ್ಪನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದ್ರು. ಇದು ಪರ-ವಿರೋಧದ ಚರ್ಚೆಗೂ ಗ್ರಾಸವಾಗಿತ್ತು.. ಆದ್ರೆ, ತಿಮ್ಮಪ್ಪನ ಆಶೀರ್ವಾದದಿಂದ ಚಂದ್ರಯಾನ-3 ಯಶಸ್ವಿಯಾಗಿತ್ತು. ಇದೀಗ ಆದಿತ್ಯಯಾನಕ್ಕೂ ಮುನ್ನ ಮತ್ತೆ ಇಸ್ರೋ ವಿಜ್ಞಾನಿಗಳು ತಿರುಮಲದ ವೆಂಕಟೇಶ್ವರ ಪಾದಕ್ಕೆ ಎರಗಿದ್ದಾರೆ. ನಿನ್ನೆ ತಿರುಮಲದ ದೇವಾಲಯಕ್ಕೆ ಭೇಟಿ ನೀಡಿ ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಕೆಟ್ ಮಾದರಿಯನ್ನ ತಿಮ್ಮಪ್ಪನ ಮುಂದೆ ಇಟ್ಟು ಇಸ್ರೋ ವಿಜ್ಞಾನಿಗಳು ಪೂಜೆ ಸಲ್ಲಿಕೆ ಮಾಡಿದ್ದಾರೆ.
ಸೂರ್ಯ ನೆತ್ತಿಗೇರುವ ಹೊತ್ತಲ್ಲಿ ಅಂದ್ರೆ, 11 ಗಂಟೆ 50 ನಿಮಿಷಕ್ಕೆ ಸರಿಯಾಗಿ ಸೂರ್ಯನತ್ತ ಆದಿತ್ಯನ ಪ್ರಯಾಣ ಶುರುವಾಗಲಿದೆ. ಪಿಎಸ್‌ಎಲ್‌ವಿ 17 ರಾಕೆಟ್ ಉಡಾವಣೆಯಾಗುವ ರೋಮಾಂಚಕ ಕ್ಷಣಕ್ಕೆ ಭಾರತೀಯರು ತುದಿಗಾಲಲ್ಲಿ ಕಾಯ್ತಿದ್ದಾರೆ. ಚಂದ್ರಕ್ರಾಂತಿಯ ರೀತಿಯಲ್ಲೇ ಸೂರ್ಯಶಿಕಾರಿಯೂ ಯಶಸ್ವಿಯಾಗಲಿ. ಆ ಮೂಲಕ ಭಾರತೀಯ ಬಾಹ್ಯಾಕಾಶ ಸಾಧನೆಗೆ ಜಗತ್ತು ಸೆಲ್ಯೂಟ್ ಹೊಡೆಯಲಿ ಅನ್ನೋದೇ ಕೋಟಿ ಕೋಟಿ ಭಾರತೀಯರ ಪ್ರಾರ್ಥನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ