ತಮ್ಮದೇ ಪಕ್ಷದ ನಾಯಕರ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ
‘ತೋಳ ಬಂತು ತೋಳ’ ಕಥೆ ಹೇಳಿದ ಪ್ರತಾಪ್ ಸಿಂಹ
ಸಿದ್ದರಾಮಯ್ಯರ ಕಾಲಿಗೆ ಬೀಳ್ತೀನಿ ಅಂದಿದ್ದೇಕೆ ಸಂಸದರು?
ಮೈಸೂರು: ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮ ಆರೋಪದಂತೆ ಬಿಜೆಪಿ ನಾಯಕರ ವಿರುದ್ಧ 40 ಪರ್ಸೆಂಟ್ ಬಗ್ಗೆ ತನಿಖೆ ಮಾಡಿ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದ್ರೆ ನಿಮ್ಮ ಕಾಲಿಗೆ ಬೀಳ್ತೀನಿ. ಕಾಲಿಗೆ ಬೀಳೋದು ಅಷ್ಟೇ ಅಲ್ಲ, ಪಾದ ಪೂಜೆ ಕೂಡ ಮಾಡ್ತೀನಿ ಎಂದು ಸಂಸದ ಪ್ರತಾಪ್ ಸಿಂಹ ಸವಾಲ್ ಹಾಕಿದ್ದಾರೆ.
ನಿಮಗೆ ಎಷ್ಟು ಕಮೀಷನ್ ಬೇಕು..?
ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಯೋಜನೆಗಳಿಗೆ ಬಿಡುಗಡೆಯಾಗಬೇಕಾಗಿದ್ದ ಹಣವನ್ನು ಸಿದ್ದರಾಮಯ್ಯ ಸರ್ಕಾರ ತಡೆ ಹಿಡಿಯುತ್ತಿದೆ ಎಂಬ ಆರೋಪಕ್ಕೆ ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರತಾಪ್ ಸಿಂಹ, ಸರ್ಕಾರ ಅಂದರೆ ನಿರಂತರ ಆಡಳಿತ ಪ್ರಕ್ರಿಯೆ. ಇವತ್ತು ಕೆಆರ್ಎಸ್ ಆಸ್ಪತ್ರೆ ನವೀಕರಣಕ್ಕೆ 89 ಕೋಟಿ ಕೊಟ್ಟಿದ್ದೇವೆ. ಅದನ್ನು ನೀವು ರಿಲೀಸ್ ಮಾಡಲ್ಲ ಅಂದರೆ ನೀವು ಅಭಿವೃದ್ಧಿ ವಿರೋಧಿನಾ? ನೀವು ಎಷ್ಟು ಕಮೀಷನ್ ಪಡೆಯುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಕಾಂಟ್ರ್ಯಾಕ್ಟರ್ಗಳಿಂದ ಕಮೀಷನ್ ಸಿಗಲ್ಲ ಅಂತಾ ತಡೆ ಹಿಡಿದಿದ್ದೀರಾ? ಕಮೀಷನ್ ಗೋಸ್ಕರ ನೀವು ಹಣ ರಿಲೀಸ್ ಮಾಡ್ತಿಲ್ಲ, ಅದಕ್ಕೆ ತಡೆ ಹಿಡಿಯುತ್ತಿದ್ದಾರೆ. ಪಿರಿಯಾಪಟ್ಟಣಕ್ಕೆ ಕೇಂದ್ರ ಸರ್ಕಾರ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ 339 ಕೋಟಿ ಹಣವನ್ನು ರಿಲೀಸ್ ಮಾಡಿಸಿದ್ದೇನೆ. ಅದೇ ರೀತಿ ಹುಣಸೂರು ಕ್ಷೇತ್ರಕ್ಕೂ ಹಣ ಬಿಡುಗಡೆಯಾಗಿದೆ. ಪರಿಯಾಪಟ್ಟಣಕ್ಕೂ ಮಾಡಿಸಲಾಗಿದೆ. ನಿಮ್ಮಸ ಸರ್ಕಾರ 70 ವರ್ಷದ ಅವಧಿಯಲ್ಲಿ ಮೈಸೂರಿಗೆ ಶೇಕಡಾ 25 ರಷ್ಟೂ ಕುಡಿಯುವ ನೀರು ಒದಗಿಸಲು ಆಗಿರಲಿಲ್ಲ. ನಾಚಿಕೆ ಆಗಬೇಕು ಅಂತಾ ವಾಗ್ದಾಳಿ ನಡೆಸಿದರು.
ತಮ್ಮದೇ ನಾಯಕರ ವಿರುದ್ಧ ವಾಗ್ದಾಳಿ
ಬಿಜೆಪಿಯನ್ನು 40 ಪರ್ಸೆಂಟ್, 40 ಪರ್ಸೆಂಟ್ ಎಂದು ಊರಿಗೆಲ್ಲ ತಮಟೆ ಹೊಡೆಯುತ್ತಿದ್ದೀರಿ. ನಿಮ್ಮದು ಎಷ್ಟು ಪರ್ಸೆಂಟ್ ಎಂದು ಹೇಳಿ? ನೀವು 40 ಪರ್ಸೆಂಟ್ ಎಂದು ಹೇಳುತ್ತೀರಲ್ಲ. ನಾನೀಗ ಬಿಜೆಪಿ ಕಾಂಗ್ರೆಸ್ ಇಬ್ಬರನ್ನೂ ಕೇಳಲು ಬಯಸುತ್ತೇನೆ. ನಾವು ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಏನಾದರೂ ಮಾತನಾಡಿದ್ರೆ ಅರ್ಕಾವತಿ ಹಗರಣ, ರೀಡೂ, ಡಿನೋಟಿಫಿಕೇಷನ್ ಎಂದು ನಾವು ಹೇಳ್ತಿದ್ವಿ. ಒಂದು ದಿನವೂ ಕೂಡ ಕೆಂಪಣ್ಣ ಆಯೋಗದ ವರದಿಯಾಗಲಿ, ಅರ್ಕಾವತಿ ತನಿಖೆಯನ್ನಾಗಿ ನಮ್ಮ ಸರ್ಕಾರ ಮಾಡಿಸಲಿಲ್ಲ. ಅವರನ್ನು ಹೆದರಿಸಲು ಹೀಗೆ ಮಾತನಾಡೋದು ಎಂದು ತಮ್ಮದೇ ನಾಯಕರ ವಿರುದ್ಧ ಪ್ರತಾಪ್ ಸಿಂಹ ಅಸಮಾಧಾನ ಹೊರ ಹಾಕಿದರು.
ನಿಮ್ಮದು ಅಡ್ಜೆಸ್ಟ್ಮೆಂಟ್ ಆಡಳಿತವಾ..?
ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ನವರು ಬಿಟ್ ಕಾಯಿನ್ ಹಗರಣ ಎಂದರು. 40 ಪರ್ಸೆಂಟ್ ಅಂದ್ರು, ಪಿಎಸ್ಐ ಹಗರಣ ಎಂದರು. ಸ್ವಾಮಿ, ಸಿದ್ದರಾಮಯ್ಯ ಅವರೇ ನೀವು ತನಿಖೆಗೆ ಆದೇಶ ಮಾಡಿ. ನೀವು ವಿರೋಧ ಪಕ್ಷದಲ್ಲಿದ್ದಾಗ ನಮ್ಮವರು ಅರ್ಕಾವತಿ ಡಿನೋಟಿಫಿಕೇಷನ್, ರೀಡೋ ಎನ್ನುತ್ತಾರೆ. ನಿಮ್ಮ ವಿರುದ್ಧ ಏನೋ ಬಿಟ್ಟು ಬಿಡ್ತೀವಿ ಅನ್ನೋ ರೀತಿಯಲ್ಲಿ ತೋಳ ಬಂತು ತೋಳ ಕಥೆ ಹೇಳ್ತಾರೆ, ಆದರೆ ಬಿಡಲ್ಲ. ನೀವು ಅಧಿಕಾರಕ್ಕೆ ಬಂದ ಕೂಡಲೇ ಈ ಕಥೆ ಹೇಳ್ತೀರಿ. ಅಂದರೆ ನೀವೆಲ್ಲ ಹೊಂದಾಣಿಕೆಯಲ್ಲಿದ್ದೀರಾ? ಸೀನಿಯರ್ಸ್ ಅಡ್ಜೆಸ್ಟ್ಮೆಂಟ್ನಲ್ಲಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ನಿಮ್ಮದು ಎಷ್ಟು ಪರ್ಸೆಂಟ್ ಸರ್ಕಾರ..? -ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ #pratapsimha #siddaramiah @siddaramaiah @mepratap pic.twitter.com/0Wbwx2bNez
— NewsFirst Kannada (@NewsFirstKan) June 13, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ