BJP ಸೋಲಿಗೆ ‘ಹೊಂದಾಣಿಕೆ ರಾಜಕೀಯ’ ಕಾರಣ ಅಂತಾ ಆರೋಪ
ಖಾಸಗಿ ರೆಸಾರ್ಟ್ನಲ್ಲಿ ಶಾಮನೂರು-ಬೊಮ್ಮಾಯಿ ರಹಸ್ಯ ಮಾತುಕತೆ
ನಮ್ಮಿಬ್ಬರ ಭೇಟಿಯಲ್ಲಿ ರಾಜಕೀಯ ಪ್ರಸ್ತಾಪ ಆಗಿಲ್ಲ- ಬೊಮ್ಮಾಯಿ ಸ್ಪಷ್ಟನೆ
ದಾವಣಗೆರೆ: ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ನಿನ್ನೆ ರಾತ್ರಿ ದಾವಣಗೆರೆ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಶಾಮನೂರು ಮತ್ತು ಬೊಮ್ಮಾಯಿ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ನ್ಯೂಸ್ಫಸ್ಟ್ಗೆ ಲಭ್ಯವಾಗಿವೆ. ಮಾಹಿತಿಗಳ ಪ್ರಕಾರ ರೆಸಾರ್ಟ್ನಲ್ಲಿ ಸುಮಾರು 25 ನಿಮಿಷಗಳ ಕಾಲ ಇಬ್ಬರು ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಯಾಕೆ ರಾಜಕೀಯದಲ್ಲಿ ಚರ್ಚೆ..?
ನಿನ್ನೆ ಬಿಜೆಪಿಯ ಇಬ್ಬರು ನಾಯಕರು ‘ಹೊಂದಾಣಿಕೆ ರಾಜಕೀಯ’ದಿಂದ ಪಕ್ಷಕ್ಕೆ ಸೋಲಾಗಿದೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಪ್ರಧಾನಕಾರ್ಯದರ್ಶಿ ಸಿಟಿ ರವಿ, ಹೊಂದಾಣಿಕೆ ರಾಜಕೀಯದ ಬಗ್ಗೆ ಮಾತನಾಡಿದ್ದರು. ಮಾತ್ರವಲ್ಲ, ನಿನ್ನೆ ದಾವಣಗೆರೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿ ಪಕ್ಷ ಸೋಲಿಸಿದ್ದೀರಿ ಎಂಬ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಮಧ್ಯಾಹ್ನ ಕೋರ್ ಕಮೀಟಿಯಲ್ಲಿ ಗಲಾಟೆಯಾದ ಬೆನ್ನಲೆ ಮಾಜಿ ಸಿಎಂ ಬೊಮ್ಮಾಯಿ- ಶಾಮನೂರು ಭೇಟಿ ಮಾಡಿರೋದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಭೇಟಿ ಬಗ್ಗೆ ಬೊಮ್ಮಾಯಿ ಏನಂದ್ರು..?
ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು ಹಲವಾರು ಬಾರಿ ನಾವು ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಇದರಲ್ಲಿ ರಾಜಕಾರಣ ಬೆರೆಸುವುದು ಸೂಕ್ತವಲ್ಲ. ನಾನು ಶಿಗ್ಗಾಂವಿಯಿಂದ ಬೆಂಗಳೂರಿಗೆ ಬರುವಾಗ ರಾತ್ರಿ ಊಟ ಮಾಡಲು ಹೊಟೆಲ್ ಗೆ ಹೋದಾಗ ಅವರು ತಮ್ಮ ಮೊಮ್ಮಕ್ಕಳ ಬಗ್ಗೆ ಹೊಸ ಸಂಬಂಧದ ಕುರಿತು ಚರ್ಚೆ ಮಾಡಲು ಸೇರಿದ್ದರು. ಆ ಸಂದರ್ಭದಲ್ಲಿ ಅವರ ಜೊತೆಗೆ ಹತ್ತು ನಿಮಿಷ ಉಭಯ ಕುಶಲೊಪರಿ ಮಾತನಾಡಿದ್ದು ಯಾವುದೇ ರಾಜಕೀಯ ವಿಷಯ ಪ್ರಸ್ತಾಪ ಆಗಿಲ್ಲ. ಸ್ನೇಹ ಸಂಬಂಧಗಳೇ ಬೇರೆ ರಾಜಕೀಯ ಸಂಬಂಧವೇ ಬೇರೆ ನಾನು ನನ್ನ ರಾಜಕೀಯ ನಿಲುವಿನಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವ ಪ್ರಶ್ನೇಯೇ ಇಲ್ಲ.
ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
ಪ್ರತಾಪ್ ಸಿಂಹ ಏನ್ ಹೇಳಿದ್ದರು..?
ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ನವರು ಬಿಟ್ ಕಾಯಿನ್ ಹಗರಣ ಎಂದರು. 40 ಪರ್ಸೆಂಟ್ ಅಂದ್ರು, ಪಿಎಸ್ಐ ಹಗರಣ ಎಂದರು. ಸ್ವಾಮಿ, ಸಿದ್ದರಾಮಯ್ಯ ಅವರೇ ನೀವು ತನಿಖೆಗೆ ಆದೇಶ ಮಾಡಿ. ನೀವು ವಿರೋಧ ಪಕ್ಷದಲ್ಲಿದ್ದಾಗ ನಮ್ಮವರು ಅರ್ಕಾವತಿ ಡಿನೋಟಿಫಿಕೇಷನ್, ರೀಡೋ ಎನ್ನುತ್ತಾರೆ. ನಿಮ್ಮ ವಿರುದ್ಧ ಏನೋ ಬಿಟ್ಟು ಬಿಡ್ತೀವಿ ಅನ್ನೋ ರೀತಿಯಲ್ಲಿ ತೋಳ ಬಂತು ತೋಳ ಕಥೆ ಹೇಳ್ತಾರೆ, ಆದರೆ ಬಿಡಲ್ಲ. ನೀವು ಅಧಿಕಾರಕ್ಕೆ ಬಂದ ಕೂಡಲೇ ಈ ಕಥೆ ಹೇಳ್ತೀರಿ. ಅಂದರೆ ನೀವೆಲ್ಲ ಹೊಂದಾಣಿಕೆಯಲ್ಲಿದ್ದೀರಾ? ಸೀನಿಯರ್ಸ್ ಅಡ್ಜೆಸ್ಟ್ಮೆಂಟ್ನಲ್ಲಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.
ಹೊಂದಾಣಿಕೆ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಇವತ್ತು ಬೆಂಗಳೂರಲ್ಲಿ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದ್ದಾರೆ. ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂದರೆ ಆಗಲ್ಲ. ಯಾರು ಮಾಡಿದ್ದಾರೆ ಎಂದು ಹೆಸರು ಹೇಳಲಿ ಎಂದು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ