ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕೇಸ್
ಮುರುಘಾ ಶ್ರೀಗಳ ರಿಲೀಸ್ಗೆ ಹಲವರಿಂದ ಭಾರೀ ವಿರೋಧ..!
ಈ ಬಗ್ಗೆ ಸಂತ್ರಸ್ತೆ ಪರ ವಕೀಲ ಶ್ರೀನಿವಾಸ್ ಹೇಳಿದ್ದೇನು ಗೊತ್ತಾ..?
ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಮೇರೆಗೆ ಅರೆಸ್ಟ್ ಆಗಿದ್ದ ಮುರುಘಾ ಶ್ರೀಗಳು ಷರತ್ತುಬದ್ಧ ಜಾಮೀನು ಮೇಲೆ ರಿಲೀಸ್ ಆಗಿದ್ದಾರೆ. ಈ ಕುರಿತು ನ್ಯೂಸ್ಫಸ್ಟ್ ಜತೆ ಮಾತಾಡಿದ ಸಂತ್ರಸ್ತೆ ಪರ ವಕೀಲ ಶ್ರೀನಿವಾಸ್, ಕೆಲವು ಷರತ್ತುಗಳ ಮೇಲೆ ಆರೋಪಿಯನ್ನು ರಿಲೀಸ್ ಮಾಡಲಾಗಿದೆ. ಈ ಆದೇಶದ ವಿರುದ್ಧ ನಾವು ಸುಪ್ರೀಂಕೋರ್ಟ್ಗೆ ಹೋಗುವ ಬಗ್ಗೆ ಚಿಂತಿಸುತ್ತಿದ್ದೇವೆ ಎಂದರು.
ನಾವು ಧ್ವನಿ ಇಲ್ಲದ ಹೆಣ್ಣುಮಕ್ಕಳ ಪರ. ಮಕ್ಕಳ ವಿದ್ಯಾಭ್ಯಾಸವೂ ಪ್ರಕರಣದಷ್ಟೇ ಮುಖ್ಯ. ಮೊದಲ ಕೇಸ್ನಲ್ಲಿ ಕಂಡೀಷನ್ ಮೇಲೆ ಬೇಲ್ ಗ್ರ್ಯಾಂಟ್ ಆಗಿದೆ. 2ನೇ ಕೇಸ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿಲ್ಲ. ಯಾವುದೇ ಕಂಡೀಷನ್ ಇಲ್ಲ. ಇವರನ್ನು ರಿಲೀಸ್ ಮಾಡಿದ್ದು ಒಳ್ಳೆಯದಲ್ಲ. ಆರೋಪಿ ಅಧಿಕಾರ, ಹಣಕಾಸು ವಿಚಾರದಲ್ಲೂ ಬಹಳ ಬಲಾಢ್ಯ. ಹಾಗಾಗಿ ಎಲ್ಲಾ ರೀತಿಯ ಆತಂಕ ಇದ್ದೇ ಇರುತ್ತೆ ಎಂದರು.
ಕೇಸ್ ದಾಖಲಾದ ಮೇಲೂ ಪೊಲೀಸ್ರು ಆರೋಪಿಯನ್ನು ಬಂಧಿಸಲು ಹಿಂದೇಟು ಹಾಕಿದ್ದರು. ಅಂದು ಇಡೀ ರಾಜ್ಯ ಯಾಕೆ ಆರೋಪಿ ಬಂಧನ ಆಗಿಲ್ಲ ಎಂದು ಪ್ರಶ್ನಿಸಿತ್ತು. ಒತ್ತಡದ ಬಳಿಕ ಆರೋಪಿಯನ್ನು ಅರೆಸ್ಟ್ ಮಾಡಲಾಗಿತ್ತು ಎಂದಿದ್ದಾರೆ ವಕೀಲ ಶ್ರೀನಿವಾಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ