newsfirstkannada.com

ಇದು ಜಸ್ಟ್​ ಆರಂಭವಷ್ಟೇ.. ಸೆಮಿಫೈನಲ್ ಸೋತರೂ ಅಫ್ಘಾನ್ ಕ್ಯಾಪ್ಟನ್​ ರಶೀದ್​ ಹೀಗೆ ಹೇಳಿದ್ದೇಕೆ?

Share :

Published June 27, 2024 at 1:39pm

Update June 27, 2024 at 1:40pm

  ಬ್ಯಾಟಿಂಗ್​ ಅನ್ನು ಸ್ಟ್ರಾಂಗ್ ಮಾಡಿಕೊಳ್ಳುತ್ತೇವೆ- ನಾಯಕ

  ಸೆಮಿಫೈನಲ್ ಸೋತರೂ ನಮ್ಮಲ್ಲಿ ನಂಬಿಕೆ ಕಡಿಮೆಯಾಗಿಲ್ಲ

  ಸೆಮಿಸ್​​ನಲ್ಲಿ ಎಡವಿದ್ದು ಎಲ್ಲಿ, ರಶೀದ್ ಖಾನ್ ಏನಂದ್ರು?

ವೆಸ್ಟ್​ ಇಂಡೀಸ್​ನಲ್ಲಿ ನಡೆದ T20 ವರ್ಲ್ಡ್​ಕಪ್​ ಸೆಮಿಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ ತಂಡ ಸೋತು ಟೂರ್ನಿಯಿಂದ ಹೊರ ಬಿದ್ದಿದೆ. ಕೇವಲ 56 ರನ್​ಗೆ ಆಲೌಟ್ ಆಗುವ ಮೂಲಕ ಅಫ್ಘಾನ್ ಟೀಮ್​ ಭಾರೀ ಅವಮಾನಕ್ಕೆ ಒಳಗಾಯಿತು. ಸದ್ಯ ಈ ಸಂಬಂಧ ಅಫ್ಘಾನ್ ತಂಡದ ಕ್ಯಾಪ್ಟನ್​ ರಶೀದ್ ಖಾನ್ ಮಾತನಾಡಿದ್ದಾರೆ.

ಇದನ್ನೂ ಓದಿ: ನ್ಯೂಸ್ ​ಫಸ್ಟ್ ಇಂಫ್ಯಾಕ್ಟ್​; ಆರೋಪಿ ರವಿ ಕುಟುಂಬಕ್ಕೆ ಹರಿದು ಬಂದ ನೆರವಿನ ಹಸ್ತ.. ಶಾಲೆಗೆ ಹೊರಟ ಮಕ್ಕಳು

ನಾವು ಬ್ಯಾಟಿಂಗ್ ಮಾಡಲು ಸಾಧ್ಯವಾಗದಷ್ಟು ಪಂದ್ಯ ತುಂಬಾ ಕಠಿಣವಾಗಿತ್ತು. ಮೆಂಟಲಿ ನಾವು ರೆಡಿಯಾಗಿದ್ದೆವು. ಆದರೆ ವೆದರ್ ಕಂಡೀಷನ್​ ನಮ್ಮ ಮೇಲೆ ಭಾರೀ ಪ್ರಭಾವ ಬೀರಿತು. ಇದು ನಮಗೆ ಮೊದಲು ಗೊತ್ತಾಗಲಿಲ್ಲ. ಹೀಗಾಗಿ ಒಳ್ಳೆಯ ಬ್ಯಾಟಿಂಗ್ ಮಾಡಲು ನಮ್ಮಿಂದ ಸಾಧ್ಯವಾಗಲಿಲ್ಲ. ಇದರಿಂದ ಸೋಲನ್ನು ಅನುಭವಿಸಬೇಕಾಯಿತು. ಇದು ಬಿಟ್ಟರೆ ಈ ಟೂರ್ನಿಯಲ್ಲಿ ಒಳ್ಳೆಯ ಆರಂಭ ನಮಗಿತ್ತು. ಆಸ್ಟ್ರೇಲಿಯಾದಂತಹ ದೊಡ್ಡ ದೊಡ್ಡ ತಂಡಗಳ ವಿರುದ್ಧ ಗೆದ್ದು ಸಂಭ್ರಮಿಸಿದ್ದು ಖುಷಿ ನೀಡುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಟಾಸ್ ಗೆದ್ದು ತಪ್ಪು ನಿರ್ಣಯ ತೆಗೆದುಕೊಂಡ ರಶೀದ್ ಖಾನ್.. ಕೋಚ್ ಮುಂದೆ ಹೋಗಿ ಗಳಗಳನೇ ಕಣ್ಣೀರಿಟ್ಟ ನಾಯಕ..!

ಇದು ಜಸ್ಟ್​ ಆರಂಭವಷ್ಟೇ. ಇನ್ನು ನಮ್ಮ ಪ್ಲೇಯರ್ಸ್​ ಕಲಿಯುತ್ತಿದ್ದಾರೆ. ಒಳ್ಳೆಯ ರಿಸಲ್ಟ್​ನಿಂದ ನಾವು ಕೆಲವೊಂದನ್ನ ತಿಳಿದುಕೊಂಡೆವು. ಇದುರಾಳಿಗಳಿಗೆ ಕಾಂಪಿಟೇಷನ್ ಕೊಡುತ್ತೇವೆ ಎನ್ನುವ ನಂಬಿಕೆ ನಮಗೆ ಬಂದಿದೆ. ಯಾವುದೇ ತಂಡಕ್ಕೆ ಟಫ್ ಫೈಟ್ ಕೊಡುವ ಅಚಲ ನಂಬಿಕೆ ನಮ್ಮಲ್ಲಿ ಮೂಡಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಒಳ್ಳೆಯ ಪೈಪೋಟಿ ಕೊಡಲು ಪ್ರಯತ್ನಿಸುತ್ತೇವೆ. ಈ ಟೂರ್ನಿಯಿಂದ ಬೇಕಾದಷ್ಟು ಕಲಿತ್ತಿದ್ದೇವೆ. ಟಫ್ ಬ್ಯಾಟಿಂಗ್, ಬೌಲಿಂಗ್ ಎಲ್ಲವನ್ನು ನಮ್ಮ ತಂಡ ಎದುರಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾವೇರಿ ಒಡಲು ಬಗೆದು ಲೂಟಿಗೆ ಸ್ಕೆಚ್​.. ನ್ಯೂಸ್​ ಫಸ್ಟ್​ ವರದಿ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್​, ಭೂಗಳ್ಳ ಶಾಕ್..!

ಟೂರ್ನಿಗಾಗಿ ನಮ್ಮ ಟೀಮ್ ತುಂಬಾ ಹಾರ್ಡ್​​ವರ್ಕ್​ ಮಾಡಿತ್ತು. ಅದರಂತೆ ಅಗ್ರೆಸೀವ್ ಆಗಿ ಎಫರ್ಟ್ ಹಾಕಿ ಸಕ್ಸಸ್​ ತಂಡ ಕಂಡಿದೆ. ಆದರೆ ಮಿಡಲ್​ ಆರ್ಡರ್​ ಬ್ಯಾಟ್ಸ್​ಮನ್ಸ್​​ಗಳಿಂದ ಇನ್ನಷ್ಟು ಅಗ್ರೆಸೀವ್ ಬೇಕಾಗಿತ್ತು. ಮಿಡಲ್​ ಆರ್ಡರ್ ಚೆನ್ನಾಗಿ ಬ್ಯಾಟಿಂಗ್ ಮಾಡಿತ್ತು ಎಂದರೆ ಸೆಮಿಫೈನಲ್​ ಗೆಲ್ಲುತ್ತಿದ್ದೇವು. ಬ್ಯಾಟಿಂಗ್​ ಡಿಪಾರ್ಟ್​​ಮೆಂಟ್ ಅನ್ನ ಸ್ಟ್ರಾಂಗ್ ಮಾಡಿಕೊಳ್ಳುತ್ತೇವೆ. ಇನ್ನಷ್ಟು ಹಾರ್ಡ್​ ವರ್ಕ್​ ಮಾಡಿ ಬಿಗ್​ ಟೂರ್ನಿಯಲ್ಲಿ ಇನ್ನಷ್ಟು ಸಾಧನೆ ಮಾಡಲು ಯತ್ನಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Kalki 2898 AD: ತೆರೆ ಮೇಲೆ ಗ್ರ್ಯಾಂಡ್ ಆಗಿ ಅಪ್ಪಳಿಸಿದ ಕಲ್ಕಿ.. ಸ್ಟಾರ್ ದಿಗ್ಗಜರ ಕಂಡು ಸಿನಿ ರಸಿಕರು ಫುಲ್ ಖುಷ್..!

ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಅವರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ದೊಡ್ಡ ತಪ್ಪು ಎಂದು ಕೆಲವೇ ಕ್ಷಣದಲ್ಲಿ ಗೊತ್ತಾಯಿತು. ಏಕೆಂದರೆ ಮೊದಲ ಬ್ಯಾಟಿಂಗ್​ ಮಾಡಲು ಮೈದಾನ ಸಹಕರಿಸಲಿಲ್ಲ. ಬೌಲರ್ಸ್​ಗೆ ಹೆಚ್ಚು ಸಹಕಾರಿಯಾಯಿತು. ಹೀಗಾಗಿ ತಂಡದ ಓಪನರ್ಸ್​ ಗುರ್ಬಾಜ್ ಹಾಗೂ ಜರ್ದಾನಿ ಹೀಗೆ ಬಂದು ಹಾಗೇ ಹೋದರು. ತಂಡದಲ್ಲಿ ಅಜ್ಮತುಲ್ಲಾ 10 ರನ್​ ಗಳಿಸಿದ್ದೆ ವೈಯಕ್ತಿಕ ಗರಿಷ್ಠ ರನ್​ ಆಗಿದೆ. ಮೂವರು ಡಕೌಟ್ ಆದ್ರೆ ನಾಲ್ವರು ಪ್ಲೇಯರ್ಸ್​ ಕೇವಲ 2 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ಅಫ್ಘಾನ್​ ಕೇವಲ 11.5 ಓವರ್​​ಗಳಲ್ಲಿ 56 ರನ್​ಗಳಿಗೆ ಆಲೌಟ್ ಆಯಿತು. ಈ ಟಾರ್ಗೆಟ್​ ಅನ್ನು ಸೌತ್ ಆಫ್ರಿಕಾ ತಂಡ 8.5 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ 60 ಗಳಿಸಿ ಗೆಲುವನ್ನು ಸಂಭ್ರಮಿಸಿತು. ಇದರಿಂದ ಅಫ್ಘಾನ್​ನ ಫೈನಲ್​ ಕನಸು ನನಸಾಗಲಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇದು ಜಸ್ಟ್​ ಆರಂಭವಷ್ಟೇ.. ಸೆಮಿಫೈನಲ್ ಸೋತರೂ ಅಫ್ಘಾನ್ ಕ್ಯಾಪ್ಟನ್​ ರಶೀದ್​ ಹೀಗೆ ಹೇಳಿದ್ದೇಕೆ?

https://newsfirstlive.com/wp-content/uploads/2024/06/RASHID_KHAN.jpg

Load More