newsfirstkannada.com

T20 world cup; ಕ್ರಿಕೆಟ್​ ಇತಿಹಾಸದಲ್ಲೇ ಅಫ್ಘಾನ್ ಮಹತ್ವದ ಗೆಲುವು​.. ಆಸ್ಟ್ರೇಲಿಯಾ ತಂಡಕ್ಕೆ ಬಿಗ್​ ಶಾಕ್​

Share :

Published June 23, 2024 at 11:50am

Update June 23, 2024 at 11:54am

    ಆಸ್ಟ್ರೇಲಿಯಾ ಎದುರು ಸೇಡು ತೀರಿಸಿಕೊಂಡ ಅಫ್ಘಾನ್ ಟೀಮ್

    ಮಿಚೆಲ್ ಮಾರ್ಷ್ ಪಡೆ ಟೂರ್ನಿಯಿಂದ ಹೊರ ಬೀಳೋ ಸಾಧ್ಯತೆ

    ಆಸ್ಟ್ರೇಲಿಯಾ ವಿರುದ್ಧದ ಮೊದಲ ವಿನ್ ಸಂಭ್ರಮಿಸಿದ ಪ್ಲೇಯರ್ಸ್

ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಎದುರು ಅಫ್ಘಾನಿಸ್ತಾನ ತಂಡ ಗೆಲವು ಸಾಧಿಸಿ ಸಂಭ್ರಮಿಸಿದೆ. ಈ ಮೂಲಕ 21 ರನ್​ಗಳಿಂದ ಸೋತಿರುವ ಮಿಚೆಲ್ ಮಾರ್ಷ್ ಪಡೆ ಟೂರ್ನಿಯಿಂದ ಹೊರ ಬೀಳುವ ಅಪಾಯದಲ್ಲಿದೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್ ಜೈಲಲ್ಲಿ ಒಳಸಂಚು ರೂಪಿಸುತ್ತಾ.. ಕೋರ್ಟ್​ಗೆ ಪೊಲೀಸರು ಮತ್ತೆ ಮನವಿ ಮಾಡಿದ್ದೇನು?

ಸೇಂಟ್ ವಿನ್ಸೆಂಟ್​​ನಲ್ಲಿನ ಕಿಂಗ್‌ಸ್ಟೌನ್​ನ ಅರ್ನೋಸ್ ವೇಲ್ ಗ್ರೌಂಡ್ ನಡೆದ ಪಂದ್ಯದಲ್ಲಿ ಅಫ್ಘಾನ್ ವಿರುದ್ಧ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಫ್ಘಾನ್ ಅನ್ನು ಬ್ಯಾಟಿಂಗ್ ಆಹ್ವಾನಿಸಿ ಆಸಿಸ್ ದೊಡ್ಡ ತಪ್ಪು ಮಾಡಿತು ಎನಿಸಿತು. ಏಕೆಂದರೆ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ರಹಮಾನುಲ್ಲಾ ಗುರ್ಬಾಜ್ ಹಾಗೂ ಝದ್ರಾನಿ ಸೇರಿ 108 ರನ್​ಗಳವರೆಗೆ ವಿಕೆಟ್​ ಒಪ್ಪಿಸಲಿಲ್ಲ. ಇದೇ ಆಸಿಸ್​ಗೆ ಮುಳುವಾಯಿತು ಎನ್ನಬಹುದು. ಹೀಗಾಗಿ ಅಫ್ಘಾನ್ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 149 ರನ್​ಗಳ ಗುರಿ ನೀಡಿತು.

ಇದನ್ನೂ ಓದಿ: 50 ವಯಸ್ಸಿನ ವ್ಯಕ್ತಿ ಜೊತೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಕೇಸ್​.. ಇಬ್ಬರ ಮೃತದೇಹಗಳು ಪತ್ತೆ

ಈ ಟಾರ್ಗೆಟ್ ಬೆನ್ನತ್ತಿದ್ದ ಆಸ್ಟ್ರೇಲಿಯಾ 19.2 ಓವರ್‌ಗಳಲ್ಲಿ 127 ರನ್​ಗೆ ಆಲೌಟ್‌ ಆಯಿತು. ಗ್ಲೇನ್ ಮ್ಯಾಕ್ಸ್​​ವೆಲ್​ ಅವರ 59 ರನ್​ಗಳನ್ನು ಬಿಟ್ಟರೇ ಉಳಿದ ಯಾವ ಪ್ಲೇಯರ್​ 12 ರನ್​ಗಳ ಗಡಿ ದಾಟಲಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಟೀಮ್ ಆಫ್ಘಾನ್ ವಿರುದ್ಧ ಹೀನಾಯವಾಗಿ ಸೋತು ಹೋಗಿದೆ. ಇನ್ನು ಆಸ್ಟ್ರೇಲಿಯಾ ತಂಡ ಈ T20 ವಿಶ್ವಕಪ್​ ಟೂರ್ನಿಯ ಸೂಪರ್​- 8ರಲ್ಲಿ ಒಂದು ಮ್ಯಾಚ್ ಗೆದ್ದು, ಅಫ್ಘಾನ್ ವಿರುದ್ಧ ಸೋತಿದೆ. ಹೀಗಾಗಿ ಜೂನ್ 24ರಂದು ನಡೆಯಲಿರುವ ಟೀಮ್ ಇಂಡಿಯಾ ಎದುರು ಬೃಹತ್‌ ಗೆಲುವು ದಾಖಲಿಸುವ ಒತ್ತಡಕ್ಕೆ ಮಿಚೆಲ್ ಮಾರ್ಷ್ ತಂಡ ಸಿಲುಕಿದೆ.

ಇದನ್ನೂ ಓದಿ: ಸಲಿಂಗ ಲೈಂಗಿಕ ಕೇಸ್​.. ನಿಗೂಢ ಸ್ಥಳದಲ್ಲಿ ಮಧ್ಯರಾತ್ರಿ ಸೂರಜ್​ ರೇವಣ್ಣ ವಿಚಾರಣೆ

ಆಸ್ಟ್ರೇಲಿಯಾದ ಓಪನರ್ಸ್ ಟ್ರಾವಿಸ್ ಹೆಡ್‌, ವಾರ್ನರ್‌ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮಿಚೆಲ್ ಮಾರ್ಷ್‌ (12) ರನ್‌ ಕಲೆ ಹಾಕಿ ಔಟ್ ಆದರು. ಮಾರ್ಕಸ್‌ ಸ್ಟೋಯಿನಿಸ್‌ (11) ಅಫ್ಘಾನಿಸ್ತಾನ ತಂಡದ ಎದುರು ಸ್ಟ್ಯಾಂಡ್ ಆಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು. ಗ್ಲೇನ್‌ ಮ್ಯಾಕ್‌ವೇಲ್‌ ಏಕಾಂಗಿ ಹೋರಾಟ ನಡೆಸಿದರು. 41 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಮೇತ 59 ರನ್ ಬಾರಿಸಿ ಔಟ್ ಆದರು. ಇವರನ್ನು ಬಿಟ್ಟರೆ ಉಳಿದೆಲ್ಲಾ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 world cup; ಕ್ರಿಕೆಟ್​ ಇತಿಹಾಸದಲ್ಲೇ ಅಫ್ಘಾನ್ ಮಹತ್ವದ ಗೆಲುವು​.. ಆಸ್ಟ್ರೇಲಿಯಾ ತಂಡಕ್ಕೆ ಬಿಗ್​ ಶಾಕ್​

https://newsfirstlive.com/wp-content/uploads/2024/06/AFG_AUS_NEW.jpg

Load More