newsfirstkannada.com

G-20 ಸದಸ್ಯ ರಾಷ್ಟ್ರಗಳ ಪಟ್ಟಿಗೆ ಆಫ್ರಿಕನ್​ ಒಕ್ಕೂಟ ಸೇರ್ಪಡೆ.. ಕೊಮೊರೊಸ್ ಅಧ್ಯಕ್ಷರನ್ನು ಬಿಗಿದಪ್ಪಿದ ಪ್ರಧಾನಿ ಮೋದಿ

Share :

09-09-2023

    G20 ಶೃಂಗಸಭೆಯಲ್ಲಿ 21ನೇ ದೇಶವಾಗಿ ಕಾಣಿಸಿಕೊಂಡ ಆಫ್ರಿಕನ್​ ಒಕ್ಕೂಟ

    ಅಝಲಿ ಅಸ್ಸೋಮಾನಿಯನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ

    2 ದಿನಗಳ ಕಾಲ ನಡೆಯಲಿದೆ ಐತಿಹಾಸಿಕ ಜಿ20 ಶೃಂಗಸಭೆ

ವಿಶ್ವದ ವಿವಿಧ ದೇಶಗಳ ಗಣ್ಯರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಆಫ್ರಿಕನ್​ ಯೂನಿಯನ್​ ಕೂಡ ಭಾಗವಹಿಸುವ ಮೂಲಕ ಜಿ20 ಶೃಂಗಸಭೆಗೆ ಸೇರ್ಪಡೆಯಾಗಿದೆ. ಆ ಮೂಲಕ ಒಕ್ಕೂಟದ 21ನೇ ದೇಶವಾಗಿ ಕಾಣಿಸಿಕೊಂಡಿದೆ.

ಜಿ20 ಶೃಂಗಸಭೆಯಲ್ಲಿ 19 ದೇಶಗಳ ಜೊತೆಗೆ ಯುರೋಪಿಯನ್​ ಯೂನಿಯನ್​ ಕೈಜೋಡಿಸಿತ್ತು. ಇದೀಗ ಆಫ್ರಿಯನ್​ ಯೂನಿಯನ್​ ಕೂಡ ಈ ಸಭೆಯಲ್ಲಿ ಭಾಗವಹಿಸಿದೆ. ಕೊಮೊರೊಸ್ ಅಧ್ಯಕ್ಷರಾದ ಅಝಲಿ ಅಸ್ಸೋಮಾನಿ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ವಾಗತಿಸಿದ್ದಾರೆ ಮತ್ತು  ಆಫ್ರಿಕನ್​ ಒಕ್ಕೂಟ ಸೇರ್ಪಡೆಗೊಂಡ ಬಗ್ಗೆ ಘೋಷಣೆ ಮಾಡಿದ್ದಾರೆ.

ಐತಿಹಾಸಿಕ ಜಿ20 ಶೃಂಗಸಭೆ 2 ದಿನಗಳ ಕಾಲ ನಡೆಯಲಿದೆ. ಇಂದು ಮತ್ತು ನಾಳೆ ವಿಶ್ವದ ಹಲವು ಗಣ್ಯರು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

G-20 ಸದಸ್ಯ ರಾಷ್ಟ್ರಗಳ ಪಟ್ಟಿಗೆ ಆಫ್ರಿಕನ್​ ಒಕ್ಕೂಟ ಸೇರ್ಪಡೆ.. ಕೊಮೊರೊಸ್ ಅಧ್ಯಕ್ಷರನ್ನು ಬಿಗಿದಪ್ಪಿದ ಪ್ರಧಾನಿ ಮೋದಿ

https://newsfirstlive.com/wp-content/uploads/2023/09/Modi-And-African-Officials.jpg

Load More